ವೈಧ್ಯಕೀಯ ನಿರ್ಲಕ್ಷ ಪ್ರಕರಣ: ಹುಬ್ಬಳ್ಳಿಯ ಸಿ.ಟಿ. ಕ್ಲಿನಿಕ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ರೂ.10 ಲಕ್ಷಗಳ ದಂಡ

 ಹುಬ್ಬಳ್ಳಿಯ ಜೆ.ಪಿ.ನಗರ, ಗೋಕುಲ ರಸ್ತೆ ನಿವಾಸಿ ವಿನಯ ಹಂಜಿಎಂಬುವವರುತಮ್ಮ ಪತ್ನಿ ಶ್ರೀಮತಿ. ರೇಖಾಳ ಹೆರಿಗೆಗಾಗಿ ದಿ:10/12/2019ರಂದು ಎದುರುದಾರ ಹುಬ್ಬಳ್ಳಿಯ ಜನತಾ ಬಜಾರ ಹತ್ತಿರದ ಸಿಟಿ ಕ್ಲಿನಿಕ್ ಮಲ್ಟಿ ಸ್ಪೆಶಾಲಿಟಿಆಸ್ಪತ್ರೆಗೆ ದಾಖಲಿಸಿದ್ದರು.

Last Updated : Feb 16, 2024, 03:35 PM IST
  • ಇದರಿಂದ ಗಾಭರಿಗೊಂಡು ಚಿಂತೆಗೊಳಗಾದ ದೂರುದಾರ ಮತ್ತು ಅವರ ಹೆಂಡತಿ ಮಗುವನ್ನು ಅಲ್ಲಿಂದ ಡಿಸ್‍ಚಾರ್ಜ ಮಾಡಿಕೊಂಡು ಧಾರವಾಡದ ಎಸ್.ಡಿ.ಎಮ್.ಆಸ್ಪತ್ರೆಗೆ ದಾಖಲಿಸಿದರು.
  • ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ದಿ:20/12/2019 ರಿಂದ ದಿ:27/12/2019 ರವರೆಗೆ ಮಗುವಿಗೆ ಆದ ಚರ್ಮದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿದರು.
  • ಅದರಿಂದ ಪೂರ್ತಿಗುಣಮುಖವಾದ ಮಗುವನ್ನು ದಿ:27/12/2019 ರಂದು ಆಸ್ಪತ್ರೆಯಿಂದ ಡಿಸ್‍ಚಾರ್ಜ ಮಾಡಿದರು. ನಂತರ ಮುಂದುವರೆದ ಚಿಕಿತ್ಸೆ ಆದ ಮೇಲೆ ಹೆಣ್ಣು ಮಗು ಪೂರ್ತಿಆರಾಮಆಯಿತು.
ವೈಧ್ಯಕೀಯ ನಿರ್ಲಕ್ಷ ಪ್ರಕರಣ: ಹುಬ್ಬಳ್ಳಿಯ ಸಿ.ಟಿ. ಕ್ಲಿನಿಕ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ರೂ.10 ಲಕ್ಷಗಳ ದಂಡ title=

ಧಾರವಾಡ : ಹುಬ್ಬಳ್ಳಿಯ ಜೆ.ಪಿ.ನಗರ, ಗೋಕುಲ ರಸ್ತೆ ನಿವಾಸಿ ವಿನಯ ಹಂಜಿಎಂಬುವವರುತಮ್ಮ ಪತ್ನಿ ಶ್ರೀಮತಿ. ರೇಖಾಳ ಹೆರಿಗೆಗಾಗಿ ದಿ:10/12/2019ರಂದು ಎದುರುದಾರ ಹುಬ್ಬಳ್ಳಿಯ ಜನತಾ ಬಜಾರ ಹತ್ತಿರದ ಸಿಟಿ ಕ್ಲಿನಿಕ್ ಮಲ್ಟಿ ಸ್ಪೆಶಾಲಿಟಿಆಸ್ಪತ್ರೆಗೆ ದಾಖಲಿಸಿದ್ದರು.

ಅಂದೇ ದೂರುದಾರರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಿ:14/12/2019 ರಂದುದೂರುದಾರರ ಪತ್ನಿಯನ್ನುಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕಾಗಿತ್ತು. ಆ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಸ್ಪಂಜಿನಿಂದ ಸ್ನಾನ ಮಾಡಿಸಲು ಆಸ್ಪತ್ರೆಯ ಆಯಾ ಮಗುವನ್ನು ತೆಗೆದುಕೊಂಡು ಹೋದಳು. ಆಯಾ 4 ದಿನದ ಮಗುವಿನ ದೇಹವನ್ನು ಸ್ಪಂಜಿನಿಂದ ಒರೆಸಬೇಕಾಗಿತ್ತು. ಅದಕ್ಕೆ ಬದಲಾಗಿಟಬ್‍ನಲ್ಲಿ ಬಿಸಿ ನೀರುತಂದು ಅದರಲ್ಲಿ ಮಗುವನ್ನು ಸ್ನಾನ ಮಾಡಿಸಲು ಕೂಡಿಸಿದಳು. ತಕ್ಷಣ ಮಗು ಜೋರಾಗಿ ಚೀರಾಡಿ ಅತ್ತು ಗಲಾಟೆ ಮಾಡಿತ್ತು. ಅದನ್ನು ಕಂಡು ಆಯಾ ದಿಕು ತೋಚದೆ ತಬ್ಬಿಬ್ಬಾದಳು.ಆಗ ಆಯಾ ದೇಹದ ಕೆಳ ಭಾಗಕ್ಕೆ ಹತ್ತಿದ್ದ ನೀರನ್ನು ಒರೆಸಲು ಪ್ರಯತ್ನಿಸಿದಾಗ ಮಗುವಿನ ಕುಂಡಿ ಮತ್ತು ಅದರ ಕೆಳ ಭಾಗದಲ್ಲಿ ಚರ್ಮ ಸುಲಿದು ಬಂತು. ಈ ಸಂಗತಿಯನ್ನು ದೂರುದಾರರು ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಅಜಿತ್ ಜೋಶಿ ಮತ್ತು ಡಾ. ವಿದ್ಯಾ ಜೋಶಿ ರವರ ಗಮನಕ್ಕೆ ತಂದರು. ಮಗುವನ್ನು ಪರಿಶೀಲಿಸಿದ ಡಾ. ವಿದ್ಯಾ ಜೋಶಿ ಮಗುವಿಗೆ ಏನೂ ಆಗುವುದಿಲ್ಲ ಅಂತಾ ಹೇಳಿ ಅದನ್ನು ಚಿಕಿತ್ಸೆಗಾಗಿ ಮತ್ತೆ ತಮ್ಮದೇ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡರು.

ದಿ:14/12/2019 ರಿಂದ ದಿ:20/12/2019 ರವರೆಗೆ ಮಗುವಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಚರ್ಮರೋಗ ತಜ್ಞ ಡಾ.ರಂಜನ್ ಜೀವನ್ನವರ ಮಗುವನ್ನು ತಪಾಸಣೆ ಮಾಡಿ ಅದಕ್ಕೆ ಎಪಿಡರ್ಮೊಲೀಸಿಸ್ ಬುಲ್ಲೋಸಾ(ಇ.ಬಿ) ಅನ್ನುವ ಚರ್ಮದ ಕಾಯಿಲೆ ಇರಬಹುದು ಅಂತಾ ಹೇಳಿದರು. ಅದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಬೆಂಗಳೂರಿನ ಹ್ಯೂಮನ್‍ಜೆನಟಿಕ್ ಸೆಂಟರನಲ್ಲಿ ಜೆನಟಿಕ್ ಪರೀಕ್ಷೆ ಮಾಡಿಸಲು ಸೂಚಿಸಿದರು.

ಇದನ್ನೂ ಓದಿ: ಮನೆ ತೆರವು ಗೊಳಿಸಲು ನೋಟೀಸ್ :ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ ವೃದ್ಧ ದಂಪತಿ

ಇದರಿಂದ ಗಾಭರಿಗೊಂಡು ಚಿಂತೆಗೊಳಗಾದ ದೂರುದಾರ ಮತ್ತು ಅವರ ಹೆಂಡತಿ ಮಗುವನ್ನು ಅಲ್ಲಿಂದ ಡಿಸ್‍ಚಾರ್ಜ ಮಾಡಿಕೊಂಡು ಧಾರವಾಡದ ಎಸ್.ಡಿ.ಎಮ್.ಆಸ್ಪತ್ರೆಗೆ ದಾಖಲಿಸಿದರು. ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ದಿ:20/12/2019 ರಿಂದ ದಿ:27/12/2019 ರವರೆಗೆ ಮಗುವಿಗೆ ಆದ ಚರ್ಮದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿದರು. ಅದರಿಂದ ಪೂರ್ತಿಗುಣಮುಖವಾದ ಮಗುವನ್ನು ದಿ:27/12/2019 ರಂದು ಆಸ್ಪತ್ರೆಯಿಂದ ಡಿಸ್‍ಚಾರ್ಜ ಮಾಡಿದರು. ನಂತರ ಮುಂದುವರೆದ ಚಿಕಿತ್ಸೆ ಆದ ಮೇಲೆ ಹೆಣ್ಣು ಮಗು ಪೂರ್ತಿಆರಾಮಆಯಿತು.

ಸಿಟಿ ಕ್ಲಿನಿಕ್‍ನ ಆಯಾ ಮಗುವನ್ನು ಅತಿ ಹೆಚ್ಚು ಬಿಸಿಯಾದ ನೀರಿನಲ್ಲಿ ಎದ್ದಿದ್ದರಿಂದ ಕೇವಲ 4 ದಿನದ ವಯಸ್ಸಿನ ಮಗುವಿನ ಸೂಕ್ಷ್ಮವಾದ ಚರ್ಮ ಸುಟ್ಟು ಬೊಬ್ಬೆಯಂತಹ ಗುಳ್ಳೆಗಳು ಬಂದು ಚರ್ಮ ಸುಲಿದಿತ್ತು. ಆಯಾನ ತಪ್ಪನ್ನು ಮುಚ್ಚಿಕೊಳ್ಳಲು ಆ ಮುಗುವಿಗೆ ಎಪಿಡರ್ಮೊಲೀಸಿಸ್ ಬುಲ್ಲೋಸಾ(ಇ.ಬಿ) ಅನ್ನುವ ಚರ್ಮದ ಕಾಯಿಲೆ ಇರಬಹುದು ಅಂತಾ ತಪ್ಪು ಮಾಹಿತಿ ಕೊಟ್ಟು ತಮಗೆ ತುಂಬಾ ತೊಂದರೆ ಹಾಗೂ ನೋವು ಆಗುವಂತೆ ಮಾಡಿದ ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮತ್ತು ಅಲ್ಲಿ ಚಿಕಿತ್ಸೆ ನೀಡುವ 7 ಜನ ವೈಧ್ಯರ ಮೇಲೆ ಅವರಿಂದ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತ ಕೋರಿ ದೂರುದಾರ ವಿನಯ ಹಂಜಿ ದಿ:21/04/2021 ರಂದು ಧಾರವಾಡ ಜಿಲಾ ್ಲಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸಿಟಿ ಕ್ಲಿನಿಕ್ ಅಥವಾ ಎದುರುದಾರರಾದ 8 ಜನ ವೈಧ್ಯರಿಂದ ವೈಧ್ಯಕೀಯ ನಿರ್ಲಕ್ಷ ಆಗಿದೆ ಅನ್ನುವ ಬಗ್ಗೆ ತಜ್ಞರ ವರದಿ ಇಲ್ಲ ಮತ್ತು ಆ ಬಗ್ಗೆ ಪೂರಕವಾದ ಸಾಕ್ಷಾಧಾರಗಳು ಇಲ್ಲ ಅಂತಾ ಹೇಳಿ ಎದುರುದಾರರು ಆಕ್ಷೇಪಣೆ ಎತ್ತಿದ್ದರು. ಈ ಮಧ್ಯದಲ್ಲಿ ಆಸ್ಪತ್ರೆಗೆ ವಿಮೆ ನೀಡಿದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯನ್ನು 9ನೇ ಎದುರುದಾರರನ್ನಾಗಿ ಮಾಡಲಾಯಿತು. ಈ ಘಟನೆಯ ಬಗ್ಗೆ ಸಿಟಿ ಕ್ಲಿನಿಕ್ ನವರು ತಕ್ಷಣ ತಮಗೆ ಮಾಹಿತಿ ನೀಡಿಲ್ಲ. ಕಾರಣ ಅವರು ವಿಮಾ ಪಾಲಸಿಯ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಅಂತಾ ಆಕ್ಷೇಪಿಸಿ ದೂರನ್ನು ವಜಾಗೊಳಿಸುವಂತೆ ಕೋರಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಸದಸ್ಯರು, ಎಪಿಡರ್ಮೊಲೀಸಿಸ್ ಬುಲ್ಲೋಸಾ(ಇ.ಬಿ) ಅನ್ನುವಚರ್ಮದ ಕಾಯಿಲೆ ಒಂದು ಸಾರಿಯಾರಿಗಾದರೂ ಬಂದರೆ ಅದು ಜೀವನ ಪರ್ಯಂತ ಗುಣಮುಖವಾಗುವುದಿಲ್ಲ. ಅಂತಹ ವ್ಯಕ್ತಿ ಇಡೀ ಜೀವನ ಚರ್ಮ ಕಾಯಿಲೆಯ ನೋವಿನಿಂದ ಬಳಲಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಹೆಣ್ಣು ಮಗು ದಿ:10/12/2019 ರಂದು ಜನಿಸಿದ್ದು ದಿ:14/12/2019 ರವರೆಗೆ ಈ ಘಟನೆ ನಡೆಯುವವರೆಗೆ ಮಗುವಿಗೆ ಯಾವುದೇ ಚರ್ಮದ ಕಾಯಿಲೆ ಇಲ್ಲ. ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆಕೊಟ್ಟ ಮೇಲೆ ಅದು ಗುಣಮುಖವಾಗಿದ್ದು ನಂತರ ಈವರೆಗೆ ಆ ಮಗುವಿಗೆ ಯಾವುದೇ ಚರ್ಮದ ರೋಗ ಬಂದಿಲ್ಲ. ಸಿಟಿ ಕ್ಲಿನಿಕನ ಆಯಾ ಅತಿಯಾದ ಬಿಸಿ ನೀರಿನಲ್ಲಿ ಮಗುವನ್ನು ಎದ್ದಿದ್ದರಿಂದ 4 ದಿವಸ ಸೂಕ್ಷ್ಮವಾದ ಮಗುವಿನ ಚರ್ಮ ಸುಟ್ಟು ಈ ತೊಂದರೆಯಾಗಿದೆ. ಸುಟ್ಟ ಗಾಯಕ್ಕೆ ಚಿಕಿತ್ಸೆಕೊಟ್ಟ ಮೇಲೆ ಮಗು ಪೂರ್ತಿ ಗುಣಮುಖವಾಗಿದ್ದು ಈಗ ಆರೋಗ್ಯಕರವಾಗಿದೆ. ಕಾರಣ ಮಗುವಿಗೆ ಎಪಿಡರ್ಮೊಲೀಸಿಸ್ ಬುಲ್ಲೋಸಾ(ಇ.ಬಿ) ಅನ್ನುವಚರ್ಮದ ಕಾಯಿಲೆ ಇರಬಹುದು ಅನ್ನುವ ಸಿಟಿ ಕ್ಲಿನಿಕ್ ನವರ ವಾದ ಒಪ್ಪಲಾಗುವುದಿಲ್ಲ ಅಂತಾ ಆಯೋಗ ತೀರ್ಪು ನೀಡಿದೆ.

ಇದನ್ನೂ ಓದಿ: “ಸೂರ್ಯ ಉದಯಿಸುವುದು ತನ್ನದೇ ಸಮಯದಲ್ಲಿ...”- ಸರ್ಫರಾಜ್ ಖಾನ್ ತಂದೆಯ ಭಾವನಾತ್ಮಕ ಹೇಳಿಕೆ

ತಮ್ಮ ಆಸ್ಪತ್ರೆಯ ಆಯಾನ ತಪ್ಪು ಮುಚ್ಚಿಕೊಳ್ಳುವುದಕೋಸ್ಕರ ಆ ಮಗುವಿಗೆ ಎಪಿಡರ್ಮೊಲೀಸಿಸ್ ಬುಲ್ಲೋಸಾ(ಇ.ಬಿ) ಅನ್ನುವ ಚರ್ಮದ ರೋಗ ಬಂದಿದೆ ಅಂತಾ ಸಿಟಿ ಕ್ಲಿನಿಕ್ ವೈಧ್ಯರು ಯಾವುದೇ ಸಾಕ್ಷಾಧಾರಗಳಿಲ್ಲದೇ ಸುಳ್ಳು ಹೇಳಿದ್ದಾರೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಚರ್ಚಿಸಿದೆ. ಈ ರೀತಿ ಇಲ್ಲದ ಕಾಯಿಲೆ ಮಗುವಿಗೆ ಇದೆ ಅಂತಾ ಹೇಳಿ ತಪ್ಪು ಮಾಹಿತಿ ನೀಡಿದ್ದರಿಂದ ಆಯಾ ಮಾಡಿದ ತಪ್ಪಿನ ಹೊಣೆಯನ್ನು ಸಿಟಿ ಕ್ಲಿನಿಕ್‍ನ ಮಾಲೀಕರು ಹೊತ್ತು ಕೊಳ್ಳಬೇಕಾಗುತ್ತದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.ಸಿಟಿ ಕ್ಲಿನಿಕ್‍ನವರ ಇಂತಹ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯ ಪಟ್ಟು ಈ ಘಟನೆಯತೀವ್ರ ಪರಿಣಾಮ ಆ ಹೆಣ್ಣು ಮಗು, ಅದರತಂದೆ-ತಾಯಿಯ ಮೇಲೆ ಆಗಿದೆ ಅಂತಾ ತೀರ್ಪು ನೀಡಿದೆ.

ಅದಕ್ಕಾಗಿ ಹುಬ್ಬಳ್ಳಿಯ ಸಿಟಿ ಕ್ಲಿನಿಕ್‍ನವರು ಕೃತ್ಯಕ್ಕೀಡಾದ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಒಟ್ಟು ರೂ.10 ಲಕ್ಷ ಪರಿಹಾರ ರೂಪದಲ್ಲಿ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಕೊಡುವಂತೆ ಆದೇಶಿಸಿದೆ.ಕೃತ್ಯ ನಡೆದ ದಿ:14/12/2019 ಅವಧಿಗೆ ಸಿಟಿ ಕ್ಲಿನಿಕ್ ಯುನೈಟೆಡ್ ಇಂಡಿಯಾದಿಂದ ವಿಮೆ ಮಾಡಿಸಿದ್ದರಿಂದ ಒಟ್ಟು ಪರಿಹಾರದ ಶೇ75% ರಷ್ಟು ಭಾಗ ಅಂದರೆ ರೂ.7,50,000/-ಗಳನ್ನು ವಿಮಾ ಕಂಪನಿಯವರು ಕೊಡಬೇಕು ಮತ್ತು ಉಳಿದ ಶೇ25%ರ ರೂ.2,50,000/-ಗಳನ್ನು ಸಿಟಿ ಕ್ಲಿನಿಕ್‍ನವರು ದೂರುದಾರರ ಹೆಣ್ಣುಮಗುವಿಗೆ ಒಂದು ತಿಂಗಳೊಳಗಾಗಿ ಕೊಡುವಂತೆ ಆದೇಶಿಸಿದೆ. ತಪ್ಪಿದ್ದಲ್ಲಿ ತೀರ್ಪು ನೀಡಿದ ದಿನದಿಂದ ರೂ.10 ಲಕ್ಷ ಪರಿಹಾರ ಮೇಲೆ ಶೆ8% ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಆಯೋಗ ಎದುರುದಾರ ಸಿಟಿ ಕ್ಲಿನಿಕ್ ಮತ್ತು ವಿಮಾ ಸಂಸ್ಥೆಗೆ ಆದೇಶಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News