ಉತ್ತರ ಕರ್ನಾಟಕದ ಮೊಟ್ಟ ಮೊದಲ ಅತ್ಯಾಧುನಿಕ ಫ್ಲೈಓವರ್ ಗೆ ಶಿಲಾನ್ಯಾಸ

 ಉತ್ತರ ಕರ್ನಾಟಕದಲ್ಲೇ ಮೊಟ್ಟ ಮೊದಲ ಅತ್ಯಾಧುನಿಕ ಫ್ಲೈಓವರ್ ನಿರ್ಮಾಣಗೊಳ್ಳಲಿದೆ. ಏಳು ರಸ್ತೆಗಳು ಬಂದು ಸೇರುವ ಚೆನ್ನಮ್ಮ ವೃತ್ತದಲ್ಲಿ ನಾಲ್ಕು ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸಿ ಪ್ರತಿ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ದೂರದವರೆಗೆ ಫ್ಲೈಓವರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

Last Updated : Jan 15, 2021, 06:12 PM IST
  • ಹುಬ್ಬಳ್ಳಿ (Hubli) ಮಹಾನಗರದ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮ_ವೃತ್ತದಲ್ಲಿ ಫ್ಲೈಓವರ್‌ ಹೊಂದಬೇಕೆಂಬ ಹುಬ್ಬಳ್ಳಿ ಜನರ ಬೇಡಿಕೆ ಈಗ ಸಾಕಾರವಾಗಲಿದೆ.
  • ಸುಮಾರು 3೦೦ ಕೋಟಿ ರೂಪಾಯಿ ವೆಚ್ಚದ 3.9 ಕಿಮೀ ಮೊದಲ ಹಂತದ ಫ್ಲೈಓವರ್ ನಿರ್ಮಾಣ ಕಾರ್ಯಕ್ಕೆ ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವೀಡಿಯೊ ಕಾನ್ಫರೆನ್ಸ ಮುಖಾಂತರ ಶಿಲಾನ್ಯಾಸ ಮಾಡಿದ್ದಾರೆ.
ಉತ್ತರ ಕರ್ನಾಟಕದ ಮೊಟ್ಟ ಮೊದಲ ಅತ್ಯಾಧುನಿಕ ಫ್ಲೈಓವರ್ ಗೆ ಶಿಲಾನ್ಯಾಸ title=
Photo Courtesy: Twitter

ಬೆಂಗಳೂರು: ಉತ್ತರ ಕರ್ನಾಟಕದಲ್ಲೇ ಮೊಟ್ಟ ಮೊದಲ ಅತ್ಯಾಧುನಿಕ ಫ್ಲೈಓವರ್ ನಿರ್ಮಾಣಗೊಳ್ಳಲಿದೆ. ಏಳು ರಸ್ತೆಗಳು ಬಂದು ಸೇರುವ ಚೆನ್ನಮ್ಮ ವೃತ್ತದಲ್ಲಿ ನಾಲ್ಕು ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸಿ ಪ್ರತಿ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ದೂರದವರೆಗೆ ಫ್ಲೈಓವರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕದ ಪ್ರಥಮ ಸಂಚಾರಿ ಪ್ರಾಣಿ ಚಿಕಿತ್ಸಾಲಯ ಲೋಕಾರ್ಪಣೆ

ಹುಬ್ಬಳ್ಳಿ ಮಹಾನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿಗೆ, ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದ ಸಮಾರಂಭದಲ್ಲಿ ಭಾಗವಹಿಸಲಾಯಿತು.

ಇದನ್ನೂ ಓದಿ: ಜ.21 ರಿಂದ ಹುಬ್ಬಳ್ಳಿಯಿಂದ ಗೋವಾ ಮತ್ತು ಕೊಚ್ಚಿಗೆ ನೇರ ವಿಮಾನ ಸಂಚಾರ

ಹುಬ್ಬಳ್ಳಿ (Hubli) ಮಹಾನಗರದ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮ_ವೃತ್ತದಲ್ಲಿ ಫ್ಲೈಓವರ್‌ ಹೊಂದಬೇಕೆಂಬ ಹುಬ್ಬಳ್ಳಿ ಜನರ ಬೇಡಿಕೆ ಈಗ ಸಾಕಾರವಾಗಲಿದೆ. ಸುಮಾರು 3೦೦ ಕೋಟಿ ರೂಪಾಯಿ ವೆಚ್ಚದ 3.9 ಕಿಮೀ ಮೊದಲ ಹಂತದ ಫ್ಲೈಓವರ್ ನಿರ್ಮಾಣ ಕಾರ್ಯಕ್ಕೆ ಇಂದು ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ  ಅವರು ವೀಡಿಯೊ ಕಾನ್ಫರೆನ್ಸ ಮುಖಾಂತರ ಶಿಲಾನ್ಯಾಸ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಸಚಿವರು NH63 ಕಲಘಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ CRF ಅಡಿ 25 ಕೋಟಿ ವೆಚ್ಚದಲ್ಲಿ 2.77 ಕಿಮೀ ಚತುಷ್ಪತ ರಸ್ತೆ ನಿರ್ಮಾಣ ಮತ್ತು ದಾಸ್ತಿಕೊಪ್ಪದ ಬಳಿ ಸೇತುವೆ ನಿರ್ಮಾಣ ಕಾಮಗಾರಿಕೆ ಆರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಶ್ರೀ ಗೋವಿಂದ್ ಕಾರಜೋಳ್, ಕೇಂದ್ರ ಸಚಿವ ಸದಾನಂದ್ ಗೌಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಆಡಿ ಬೆಳೆದಿದ್ದ ಭಾರತದ ಶ್ರೇಷ್ಠ ನಿರ್ದೇಶಕ ವಿ.ಶಾಂತಾರಾಂ...!

ಮಹಾನಗರದ ಐತಿಹಾಸಿಕ ಅಭಿವೃದ್ಧಿಯ ಪರ್ವದ ಈ ಸಂದರ್ಭದಂದು ರಾಜ್ಯ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್  ಹಾಗೂ ಶಾಸಕರಾದ ಅರವಿಂದ್ ಬೆಲ್ಲದ, ಅಮೃತ್ ದೇಸಾಯಿ,ಶಂಕರ್ ಪಾಟೀಲ್ ಮುನೇಕೊಪ್ಪ, ಸಿ ಎಂ ನಿಂಬಣ್ಣವರ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಸವರಾಜ ಹೊರಟ್ಟಿ, ಶಾಸಕ ಶ್ರೀ ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ಶ್ರೀ ನಿತೇಶ್ ಪಾಟೀಲ್ ಹಾಗೂ ರಾಜ್ಯದ ಅನೇಕ ಸಚಿವರು ಈ ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News