ಕೊನೆಗೂ 'ಗ್ರಾ. ಪಂ. ಚುನಾವಣೆ'ಗೆ ಮುಹೂರ್ತ ಫಿಕ್ಸ್..!

ಹೈಕೋರ್ಟ್ ನ್ಯಾಯಾಲಯ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಅನುಮತಿ

Last Updated : Nov 14, 2020, 06:09 PM IST
  • ಹೈಕೋರ್ಟ್ ನ್ಯಾಯಾಲಯ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಅನುಮತಿ
  • ಚುನಾವಣಾ ಆಯೋಗಕ್ಕೆ 3 ವಾರಗಳಲ್ಲಿ ವೇಳಾಪಟ್ಟಿ ಪ್ರಕಟಿಸುವಂತೆ ನಿರ್ದೇಶನ
  • ಚುನಾವಣೆ ಮುಂದೂಡಿಕೆ ಸರ್ಕಾರ ನಿರ್ಧರಿಸುವಂತಿಲ್ಲ ಎಂದು ಸಿಜೆ ಎ.ಎಸ್.ಒಕಾ, ನ್ಯಾ.ಅಶೋಕ್ ಎಸ್. ಕಿಣಗಿರವರಿದ್ದ ಪೀಠ ಸ್ಪಷ್ಟ
ಕೊನೆಗೂ 'ಗ್ರಾ. ಪಂ. ಚುನಾವಣೆ'ಗೆ ಮುಹೂರ್ತ ಫಿಕ್ಸ್..! title=

ಬೆಂಗಳೂರು: ಅಂತೂ ಇಂತೂ ರಾಜ್ಯದ ಗ್ರಾಮ ಪಂಚಾಯತಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆದಂತೆ ಆಗಿದೆ. ಹೈಕೋರ್ಟ್ ನ್ಯಾಯಾಲಯ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಅನುಮತಿ ನೀಡಿದ್ದು, ಚುನಾವಣಾ ಆಯೋಗಕ್ಕೆ 3 ವಾರಗಳಲ್ಲಿ ವೇಳಾಪಟ್ಟಿ ಪ್ರಕಟಿಸುವಂತೆ ನಿರ್ದೇಶನ ನೀಡಿದೆ.

ಚುನಾವಣೆ ಘೋಷಣೆ ಬಗ್ಗೆ 3 ವಾರದಲ್ಲಿ ಆಯೋಗ ತೀರ್ಮಾನಿಸಬೇಕು. ಅಧಿಕಾರಿಗಳೊಂದಿಗೆ ಆಯೋಗ ಸಮಾಲೋಚನೆ ನಡೆಸಬಹುದು. ಇನ್ನು ಚುನಾವಣೆ(Election)ಗೆ ಹಣಕಾಸಿನ ಅಗತ್ಯವಿದ್ದರೆ ರಾಜ್ಯಪಾಲರನ್ನ ಸಂಪರ್ಕಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.

'ಸಾರಿಗೆ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ'

ಅವಧಿ ಮುಗಿದ ಗ್ರಾಮ ಪಂಚಾಯತ್ʼಗಳಿಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ತೀರ್ಫು ನೀಡಿದ್ದು, ಅಸಾಧಾರಣ ಸಂದರ್ಭದಲ್ಲಷ್ಟೇ ಚುನಾವಣೆ ಮುಂದೂಡಬಹುದು. ಆದ್ರೆ, ಅದನ್ನ ಆಯೋಗ ತೀರ್ಮಾನಿಸಬೇಕು. ಚುನಾವಣೆ ಮುಂದೂಡಿಕೆ ಸರ್ಕಾರ ನಿರ್ಧರಿಸುವಂತಿಲ್ಲ ಎಂದು ಸಿಜೆ ಎ.ಎಸ್.ಒಕಾ, ನ್ಯಾ.ಅಶೋಕ್ ಎಸ್. ಕಿಣಗಿರವರಿದ್ದ ಪೀಠ ಸ್ಪಷ್ಟಪಡಿಸಿದೆ.

ವಿಡಿಯೋ ವೈರಲ್: ಸಂಸದೆ ಸುಮಲತಾ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರತಾಪ್‌ ಸಿಂಹ!

Trending News