ವಿಡಿಯೋ ವೈರಲ್: ಸಂಸದೆ ಸುಮಲತಾ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರತಾಪ್‌ ಸಿಂಹ!

ಸುಮಲತಾ ಅಂಬರೀಷ್​ ನಡೆಯನ್ನು ಟೀಕಿಸಿರುವ ಮೈಸೂರು-ಕೊಡುಗು ಸಂಸದ ಪ್ರತಾಪ್​ ಸಿಂಹ

Last Updated : Nov 14, 2020, 01:39 PM IST
  • ಸುಮಲತಾ ಅಂಬರೀಷ್​ ನಡೆಯನ್ನು ಟೀಕಿಸಿರುವ ಮೈಸೂರು-ಕೊಡುಗು ಸಂಸದ ಪ್ರತಾಪ್​ ಸಿಂಹ
  • ಆ ಯಮ್ಮಾ ಕೆಲಸ ಮಾಡಲ್ಲ’ ಎಂದು ಆರೋಪಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು
  • ಸುಮಲತಾ ಬೆಂಬಲಿಗರು ಪ್ರತಾಪ್‌ ಸಿಂಹ ವಿರುದ್ಧ ಕಿಡಿಕಾರಿದರೆ
ವಿಡಿಯೋ ವೈರಲ್: ಸಂಸದೆ ಸುಮಲತಾ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರತಾಪ್‌ ಸಿಂಹ! title=

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್​ ನಡೆಯನ್ನು ಟೀಕಿಸಿರುವ ಮೈಸೂರು-ಕೊಡುಗು ಸಂಸದ ಪ್ರತಾಪ್​ ಸಿಂಹ, ಸುಮಲತಾ ಅವರು ಏನೂ ಕೆಲಸ ಮಾಡಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಂಡ್ಯ ತಾಲೂಕಿನ ಯಲಿಯೂರು ಗ್ರಾಮಸ್ಥರ ಅಹವಾಲು ಸ್ವೀಕರಿಸಲು ಪ್ರತಾಪ್ ಸಿಂಹ(MP Pratap Sinha) ಬಂದಿದ್ದರು. ಈ ವೇಳೆ ಬೆಂಗಳೂರು-ಮೈಸೂರು ದಶಪಥ ಕಾಮಗಾರಿಯ ಬಗ್ಗೆ ಅಧಿಕಾರಿಯ ಜೊತೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಆ ಅಧಿಕಾರಿ ಸುಮಲತಾ ವಿರುದ್ಧ ದೂರು ಹೇಳಿದಾಗ ಪ್ರತಾಪ್‌ ಸಿಂಹ ಸುಮಲತಾ ಬಗ್ಗೆ ಈ ರೀತಿ ಟೀಕಿಸಿದ್ದಾರೆ ಎನ್ನಲಾಗಿದೆ.

ಬೈ ಎಲೆಕ್ಷನ್ ಫಲಿತಾಂಶದ ಬೆನ್ನಲ್ಲೇ ಸಿಎಂ ಬಿಎಸ್ ವೈ ಭೇಟಿಯಾದ ಕುಮಾರಸ್ವಾಮಿ !

ಸದ್ಯ ಪ್ರತಾಪ್‌ ಸಿಂಹ ಸುಮಲತಾ ವಿರುದ್ಧ ‘ಆ ಯಮ್ಮಾ ಕೆಲಸ ಮಾಡಲ್ಲ’ ಎಂದು ಆರೋಪಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುಮಲತಾ ಬೆಂಬಲಿಗರು ಪ್ರತಾಪ್‌ ಸಿಂಹ ವಿರುದ್ಧ ಕಿಡಿಕಾರಿದರೆ, ಇನ್ನೂ ಹಲವರು ಪ್ರತಾಪ್‌ ಸಿಂಹ ಸರಿಯಾಗಿಯೇ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬರಹಗಳ ಮೂಲಕವೇ ಬೆರಗು ಮೂಡಿಸಿದ್ದ 'ಅಕ್ಷರ ಮಾಂತ್ರಿಕ' ರವಿ ಬೆಳಗೆರೆ ಇನ್ನಿಲ್ಲ

Trending News