ಮಗನ ಸೋಲನ್ನು ನೆನೆದು ಕಣ್ಣೀರಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ!

ಮಗ ನಿಖಿಲ್ ಸೋಲು ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ

Last Updated : Nov 22, 2020, 01:39 PM IST
  • ಮಗ ನಿಖಿಲ್ ಸೋಲು ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ
  • ಎಲ್ಲರೂ ಸೇರಿ ಮುಗಿಸಬೇಕು ಎಂದು ಮುಗಿಸಿದರು. ಆದರೆ, ನನಗೆ ಮಂಡ್ಯ ಜಿಲ್ಲೆಯ ಜನರ ಬಗ್ಗೆ ಬೇಸರವಿಲ್ಲ
  • ಎಲ್ಲರೂ ಸೇರಿ ನಮ್ಮನ್ನು ಸೋಲಿಸಬೇಕೆಂದು ನಿರ್ಧರಿಸಿಯೇ ಸೋಲಿಸಿದರು. ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು
ಮಗನ ಸೋಲನ್ನು ನೆನೆದು ಕಣ್ಣೀರಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ! title=

ಮಂಡ್ಯ: ಎಲ್ಲರೂ ಸೇರಿ ಮುಗಿಸಬೇಕು ಎಂದು ಮುಗಿಸಿದರು. ಆದರೆ, ನನಗೆ ಮಂಡ್ಯ ಜಿಲ್ಲೆಯ ಜನರ ಬಗ್ಗೆ ಬೇಸರವಿಲ್ಲ. ರಾಜಕಾರಣಕ್ಕೆ ಬಂದ ದಿನದಿಂದ ಮಂಡ್ಯ ಜನರ ಜೊತೆ ನನ್ನ ಒಡನಾಟವಿದೆ. ಜಿಲ್ಲೆಯ ಜನರು ತುಂಬಾ ಮುಗ್ಧರು, ಎಲ್ಲರನ್ನೂ ನಂಬುತ್ತಾರೆಂದು ಹೇಳಿರುವ ಮಾಜಿ ಸಿಎಂ ಹೆಚ್.ಡಿ,ಕುಮಾರಸ್ವಾಮಿಯವರು ಚುನಾವಣೆಯಲ್ಲಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯವರ ಸೋಲು ನೆನೆದು ಕಣ್ಣೀರಿಟ್ಟಿದ್ದಾರೆ.

ಜಿಲ್ಲೆಯ ಮದ್ದೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಕುಮಾರಸ್ವಾಮಿ(H.D.Kumaraswamy), ನಿಖಿಲ್ ಚುನಾವಣೆಗೆ ನಿಲ್ಲುವುದು ಬೇಡ ಎಂದು ಹೇಳಿದ್ದೆ. ಆದರೆ, ಎಲ್ಲರೂ ಸೇರಿ ನಿಖಿಲ್'ನನ್ನು ಚುನಾವಣೆಯಲ್ಲಿ ನಿಲ್ಲಿಸಿದರು. ಎಲ್ಲರೂ ಸೇರಿ ನಮ್ಮನ್ನು ಸೋಲಿಸಬೇಕೆಂದು ನಿರ್ಧರಿಸಿಯೇ ಸೋಲಿಸಿದರು. ಎಲ್ಲರೂ ಸೇರಿ ನಮ್ಮನ್ನು ಮುಗಿಸಿಬಿಟ್ಟರು. ಆದರೂ ನಮಗೆ ಮಂಡ್ಯ ಜಿಲ್ಲೆ ಬಗ್ಗೆ ಬೇಸರವಿಲ್ಲ. ಮಂಡ್ಯವನ್ನು ಹೆಚ್.ಡಿ.ದೇವೇಗೌಡ ಅವರ ಕುಟುಂಬ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

BIG NEWS: ಆರಂಭವಾದ ಕಾಲೇಜುಗಳನ್ನ ಮತ್ತೆ ಮುಚ್ಚಲು ಸರ್ಕಾರ ಚಿಂತನೆ..!

ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯಬೇಕೆಂದುಕೊಂಡಿದ್ದೆ. ಆದರೆ, ಜನರು ನಮಗೆ ತೋರಿಸುವ ಪ್ರೀತಿನೋಡಿದಾಗ ನಿವೃತ್ತಿಯಾದ್ರೆ ಅವರಿಗೆ ಅನ್ಯಾಯ ಮಾಡಿದಂತೆ ಅನಿಸುತ್ತೆ. ಈ ಕಾರಣಕ್ಕಾಗಿಯೇ ರಾಜಕೀಯದಲ್ಲಿ ಮುಂದುವರೆದಿದ್ದೇನೆ. ವೈಯಕ್ತಿಕವಾಗಿ ರಾಜಕೀಯದಲ್ಲಿ ಮುಂದುವರೆಯುವ ಆಸೆಯಿಲ್ಲ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆ: ಹಳ್ಳಿ ಜನರ ಮನ ಗೆಲ್ಲಲು 'ಬಿಜೆಪಿ ಮಾಸ್ಟರ್ ಪ್ಲಾನ್'

Trending News