KS Eshwarappa : 'ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಜನ್ಮದಲ್ಲಿ‌ ಒಂದಾಗುವ ಪ್ರಶ್ನೆ ಇಲ್ಲ'

ಸಿದ್ದರಾಮಯ್ಯ ಅವರು 75 ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿದ ಮೇಲೆ ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಇಡೀ ರಾಜ್ಯದ ಜನ ಅವರಿಗೆ ಒಳ್ಳೆಯದಾಗಲಿ ಅಂತಾ ಶುಭ ಕೋರಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

Written by - Channabasava A Kashinakunti | Last Updated : Aug 6, 2022, 03:54 PM IST
  • ಸಿದ್ದರಾಮಯ್ಯ ಅವರು 75 ವರ್ಷದ ಹುಟ್ಟು ಹಬ್ಬ ಆಚರಣೆ
  • ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
  • ಅಮಿತ್ ಶಾ ಅವರು ಅವರ ಇಲಾಖೆ ಕೆಲಸ ಮಾಡಿಕೊಂಡು ಹೋದ್ರು
KS Eshwarappa : 'ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಜನ್ಮದಲ್ಲಿ‌ ಒಂದಾಗುವ ಪ್ರಶ್ನೆ ಇಲ್ಲ' title=

ಶಿವಮೊಗ್ಗ : ಸಿದ್ದರಾಮಯ್ಯ ಅವರು 75 ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿದ ಮೇಲೆ ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಇಡೀ ರಾಜ್ಯದ ಜನ ಅವರಿಗೆ ಒಳ್ಳೆಯದಾಗಲಿ ಅಂತಾ ಶುಭ ಕೋರಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯ ಕೆಲಸ ಮಾಡಿ. ರಾಷ್ಟ್ರದ್ರೋಹಿಗಳಿಗೆ ಬೆಂಬಲಿಸಬೇಡಿ. ಅವರ ಪಕ್ಷದಲ್ಲಿ ಸಂತೋಷಪಡುವವರು ಸಂತೋಷಪಟ್ಟಿದ್ದಾರೆ. ಹೊಟ್ಟೆ ಉರಿದುಕೊಳ್ಳುವವರು ಹೊಟ್ಟೆ ಉರಿದುಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : BBMP Chief commissioner : ಕಳೆದ ಭಾರಿಯಂತೆ ಈ ಭಾರಿಯುವು ವಾರ್ಡಿಗೆ ಒಂದೇ ಗಣೇಶ!?

ಸಿದ್ದರಾಮೋತ್ಸವದಿಂದ ಬಿಜೆಪಿ ವಿಚಲಿತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ,ಹೌದೌದು ಅವರ ಕಾರ್ಯಕ್ರಮ ನೋಡಿ. ನಾವು ನಿದ್ದೆ ಮಾಡ್ತಿಲ್ಲ, ಊಟ ಮಾಡ್ತಿಲ್ಲ, ತಿಂಡಿ ತಿನ್ನುತ್ತಿಲ್ಲ ಎಂದು ಕುಹಕವಾಡಿದರು. ನಾವು ಇಂತಹ ನೂರು ಕಾರ್ಯಕ್ರಮ ಮಾಡಿದ್ದೇವೆ. ಅವರು ಒಟ್ಟಾಗಿ ಮಾಡಿದ್ದೇವೆ ಅಂದ್ರು. ಒಟ್ಟಾಗಿ ಮಾಡಿ ಅವರ ಜೀವನದಲ್ಲೇ ಗೊತ್ತಿಲ್ಲ. ಒಂದಾಗಿ ಅನ್ನುವ ಪ್ರಶ್ನೆಯೇ ಅವರಲ್ಲಿಲ್ಲ.  ಕಾರ್ಯಕ್ರಮದಿಂದ ಕಾಂಗ್ರೆಸ್ ನ ಆಂತರಿಕ ಗೊಂದಲ ಸಾಕಷ್ಟು ಜಾಸ್ತಿಯಾಗಿದೆ. ರಾಹುಲ್ ಗಾಂಧಿ ಹೀಗೆ ಅಪ್ಪಿಕೊಳ್ಳಿ, ಹೀಗೆ ಅಪ್ಪಿಕೊಳ್ಳಿ ಅಂತಾ ತೋರಿಸಿಕೊಟ್ರು. ಅವರ ರಾಷ್ಟ್ರೀಯ ನಾಯಕರು ಅಪ್ಪಿಕೊಳ್ಳಿ ಅಂತಾ ಹೇಳಿಕೊಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಜನ್ಮದಲ್ಲಿ‌ ಒಂದಾಗುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ನವರಿಗೆ ಬೀಳುವ ಕನಸು ಬೇರೆ ಯಾರಿಗೂ ಬೀಳಲ್ಲ. ರಾಜ್ಯದಲ್ಲಿ ಅವರು ಅಧಿಕಾರ ನಡೆಸಿದ್ದನ್ನು ನೋಡಿ ರಾಜ್ಯದ ಜನ ನೀವು ಅಯೋಗ್ಯರು ಇದ್ದೀರಾ, ನೀವು ಬಡವರು, ದಲಿತರ ಪರ ಇಲ್ಲ ಅಂತಾ ಕಿತ್ತು ಬಿಸಾಕಿದ್ದಾರೆ.   ಮತ್ತೆ ಕನಸು ಕಾಣ್ತಿದ್ದಾರೆ. ಕಾಂಗ್ರೆಸ್ ನವರು ಭ್ರಮೆಯಲ್ಲಿದ್ದಾರೆ.  ಬಡಪರ ಪರ ಇಲ್ಲ ಅಂತಾನೇ ಕಾಂಗ್ರೆಸ್ ಪಕ್ಷ ದೇಶದಲ್ಲಿ ನಿರ್ನಾಮವಾಗಿದೆ.  ಬಿಜೆಪಿ ಪಕ್ಷ 150 ಸ್ಥಾನ ಪಡೆಯುತ್ತದೆ, ಬಿಜೆಪಿಯವರೇ ಮುಖ್ಯಮಂತ್ರಿ ಆಗ್ತಾರೆ ಎಂದು ಹೇಳಿದ್ದಾರೆ. 

ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ, ಅಮಿತ್ ಶಾ ಅವರು ಅವರ ಇಲಾಖೆ ಕೆಲಸ ಮಾಡಿಕೊಂಡು ಹೋದ್ರು. ಇದಕ್ಕೆ ಏನೇನೋ ಊಹೆ ಕಟ್ಟುತ್ತಾರೆ ಎಂದು ಹೇಳಿದರು. 

ಬೆಳ್ಳಾರೆ ಪ್ರವೀಣ್ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಕರಣವನ್ನು ಎನ್ ಐಎಗೆ ವಹಿಸಿದೆ. ಎನ್ ಐಎ ರಾಷ್ಟ್ರದ್ರೋಹಿಗಳನ್ನು ಎಲ್ಲೆಲ್ಲಿ ಇದ್ದಾರೆ ಅಂತಾ ಹುಡುಕಿ ತೆಗೆಯುತ್ತಾರೆ. ರಾಜ್ಯದಲ್ಲಿ ರಾಷ್ಟ್ರದ್ರೋಹಿಗಳನ್ನು ಬೆಳೆಯಲು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಬಿಡೋದಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಶಾಸಕ ಜಮೀರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News