ಕಿವುಡ ಮಕ್ಕಳ ಸರಕಾರಿ ವಸತಿಯುತ ವಿಶೇಷ ಶಾಲೆಗೆ ಉಚಿತ ಪ್ರವೇಶ...!

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನಡೆಸಲ್ಪಡುತ್ತಿರುವ ಬೆಳಗಾವಿಯ ವಿದ್ಯಾಗಿರಿಯಲ್ಲಿರುವ ಅಜಮ್ ನಗರದ ಕಿವುಡ ಮಕ್ಕಳ ವಸತಿ ಶಾಲೆಗೆ 2020-21 ನೇ ಸಾಲಿಗೆ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಪ್ರವೇಶಗಳು ಪ್ರಾರಂಭವಾಗಿವೆ. ಉಚಿತ ಶಿಕ್ಷಣ, ಊಟ ವಸತಿ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

Last Updated : Jul 17, 2020, 06:25 PM IST
 ಕಿವುಡ ಮಕ್ಕಳ ಸರಕಾರಿ ವಸತಿಯುತ ವಿಶೇಷ ಶಾಲೆಗೆ ಉಚಿತ ಪ್ರವೇಶ...! title=
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನಡೆಸಲ್ಪಡುತ್ತಿರುವ ಬೆಳಗಾವಿಯ ವಿದ್ಯಾಗಿರಿಯಲ್ಲಿರುವ ಅಜಮ್ ನಗರದ ಕಿವುಡ ಮಕ್ಕಳ ವಸತಿ ಶಾಲೆಗೆ 2020-21 ನೇ ಸಾಲಿಗೆ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಪ್ರವೇಶಗಳು ಪ್ರಾರಂಭವಾಗಿವೆ. ಉಚಿತ ಶಿಕ್ಷಣ, ಊಟ ವಸತಿ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಆಸಕ್ತ ಪಾಲಕರು ಮಕ್ಕಳ ವಿಕಲಚೇತನ ವೈದ್ಯಕೀಯ ಪ್ರಮಾಣ ಪತ್ರ (ಯುಡಿಐಡಿ ಕಾರ್ಡ್) ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಭಾವಚಿತ್ರ ಹಾಗೂ ಆಧಾರ ಕಾರ್ಡ್ ದಾಖಲಾತಿಗಳೊಂದಿಗೆ ಖುದ್ದಾಗಿ ಶಾಲೆಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 0831-2472250 ಹಾಗೂ ಪತ್ರಾಂಕಿತ ಅಧೀಕ್ಷಕರು, ಕಿವುಡು ಮಕ್ಕಳ ಸರಕಾರಿ ಶಾಲೆ, ಅಜಮ ನಗರ, 1ನೇ ಅಡ್ಡ ರಸ್ತೆ ವಿದ್ಯಾಗಿರಿ, ಬೆಳಗಾವಿ ಇವರನ್ನು ಖುದ್ದಾಗಿ ಅಥವಾ ಮೂಬೈಲ್ ಸಂಖ್ಯೆ-9449479456/9164939204/9449442212 ಇವರನ್ನು ಸಂಪರ್ಕಿಸುವಂತೆ ಬೆಳಗಾವಿಯ ಕಿವುಡು ಮಕ್ಕಳ ಸರಕಾರಿ ಶಾಲೆಯ ಪತ್ರಾಂಕಿತ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending News