ಬೆಂಗಳೂರು: ಗಾರ್ಬೇಜ್ ಸಿಟಿ ಅನ್ನಿಸಿಕೊಂಡಿದ್ದ ಬೆಂಗಳೂರು ಈಗ ಪಾತ್ ಹೋಲ್ ಸಿಟಿಯಾಗಿದೆ. ರಸ್ತೆ ಗುಂಡಿಗಳಿಗೆ ಈಗಾಗಲೇ ಹಲವರು ಬಲಿಯಾಗಿದ್ದಾರೆ. ಜನಸಮಾನ್ಯರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ದ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಈಗ ಏಕಾಏಕಿ ಎಚ್ಚೆತ್ತುಕೊಂಡಿರುವ ಮಾನ್ಯ ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಜಾರ್ಜ್ ಮತ್ತು ಮೇಯರ್ ಸಂಪತ್ ರಾಜ್ ನಿನ್ನೆ ಮಧ್ಯ ರಾತ್ರಿ 2-00 ಗಂಟೆಗೆ ರಸ್ತೆ ಗುಂಡಿಗಳ ಮುಚ್ಚುವ ಹಾಗೂ ಅಭಿವೃದ್ಧಿ ಕಾರ್ಯಗಳ ಪರಿಶೀಲನೆಯನ್ನು ನಡೆಸಿದರು.
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ತೇಪೆ ಕಾರ್ಯ ಕಾಮಗಾರಿಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಡ ರಾತ್ರಿ ಪರಿಶೀಲಿಸಿದ್ದಾರೆ. ಸಚಿವರ ಜೊತೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ , ಮೇಯರ್ ಸಂಪತ್ ರಾಜ್ ಕೂಡ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.
Karnataka Minister KJ George conducted a night inspection to oversee progress of road works & potholes repairs in Bengaluru last night pic.twitter.com/xg5W9Yq8Vh
— ANI (@ANI) October 20, 2017
ಚಾಲುಕ್ಯ ಹೋಟೆಲ್ ಮುಂದೆ ಸೋಫಿಯಾ ಶಾಲೆ ಎದುರುಗಿನ ರಸ್ತೆಗೆ ಡಾಂಬರಿಕರಣವನ್ನ ಖುದ್ದು ಪರಿಶೀಲಿಸಿದ ಮೇಯರ್ 16 ಸಾವಿರ ಗುಂಡಿಗಳು ಬೆಂಗಳೂರಿನಲ್ಲಿವೆ, ನಾವು ಅವನ್ನೆಲ್ಲ 15 ದಿನಗಳಲ್ಲಿ ಎಂದು ಹೇಳಿದರೆ. ಮೇಯರ್ ಸಂಪತ್ ರಾಜ್ ಇಂದು ಎಷ್ಟೇ ಸಾವಿರ ಗುಂಡಿಗಳಿರಲಿ ಅವುಗಳನ್ನು ಮುಚ್ಚುವ ಕೆಲಸ ಮಾಡ್ತೀವಿ ಎಂದು ಹೇಳಿದರು.
ಇನ್ನು ಗುಂಡಿಗಳಿಂದ ಯಾರೂ ಸಾವನ್ನಪ್ಪಿಲ್ಲ ಅನ್ನೊ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದ ಜಾರ್ಜ್ ಸತತ ಮಳೆ ನಿಂತಿದೆ ಅದರಿಂದಾಗೆ ಗುಂಡಿಗಳನ್ನ ಮುಚ್ಚುವ ಕೆಲಸವನ್ನು ಶುರು ಮಾಡಿದ್ದೇವೆ. ಸುಮಾರು ಐದಾರು ತಿಂಗಳಲ್ಲಿ ಎಲ್ಲಾ ಗುಂಡಿಗಳನ್ನ ಮುಚ್ಚುವ ಕೆಲಸವನ್ನ ಮಾಡಲಿದ್ದೇವೆ ಎಂದರು. ಒಟ್ಟಾರೆ ಗುಂಡಿಗಳಿಂದ ಸತತ ಬಲಿಗಳ ನಂತರ ಸರ್ಕಾರ ಎಲ್ಲಾ ಮಾಡಿಬಿಡ್ತೀವಿ ಎಂದು ಹೊರಟಿದೆ. ಇದು ಕೇವಲ ಶೋಕಿಗಾ ಅಥವಾ ನಿಜಕ್ಕೂ ಇವರು ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.