ಮಹಾದಾಯಿಂದ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಸುವುದು ದೊಡ್ಡ ಸಂಗತಿಯೇನಲ್ಲ - ಹಿರಿಯ ಗೋವಾ ವಕೀಲ

    

Last Updated : Dec 28, 2017, 07:48 PM IST
ಮಹಾದಾಯಿಂದ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಸುವುದು ದೊಡ್ಡ ಸಂಗತಿಯೇನಲ್ಲ - ಹಿರಿಯ ಗೋವಾ ವಕೀಲ title=
ಫೋಟೋ:ಟ್ವಿಟ್ಟರ್

ನವದೆಹಲಿ: ಮಹಾದಾಯಿ ವಿಚಾರದಲ್ಲಿ ಮೃದು ಧೋರಣೆ ತಾಳಿರುವ ಮನೋಹರ್ ಪರಿಕ್ಕರ್ ನಿಲುವಿನ ಬಗ್ಗೆ ಪ್ರತಿಕ್ರಯಿಸಿರುವ ಗೋವಾದ ಹಿರಿಯ ವಕೀಲ ಆತ್ಮಾರಾಂ ನಾಡಕರ್ಣಿ ಮಹಾದಾಯಿ ನದಿಯಿಂದ ಕುಡಿಯುವ ನೀರಿನ ಅಗತ್ಯಕ್ಕಾಗಿ ನೀರನ್ನು ಒದಗಿಸುವ ವಿಚಾರ ದೊಡ್ಡದೇನಲ್ಲ, ಆದರೆ ಆಣೆಕಟ್ಟು ಕಟ್ಟಿ ಮಹಾದಾಯಿ ನದಿಯ ನೀರಿಗೆ ತಿರುವು ತರವುದಕ್ಕೆ ನಮ್ಮ ವಿರೋಧವಿದೆ ಎಂದು ಮಾಜಿ ಅಡ್ವೋಕೇಟ್ ಜನರೆಲ್ ಆಗಿರುವ ಆತ್ಮಾ ರಾಮ್ ನಾಡಕರ್ಣಿ ಅಭಿಪ್ರಾಯ ಪಟ್ಟಿದ್ದಾರೆ.

ಮಹಾದಾಯಿ ನದಿ ನೀರು ನ್ಯಾಯಾಧಿಕರಣದಲ್ಲಿ ಗೋವಾ ಪರವಾದ ಮಾಡುತ್ತಿರುವ ನಾಡಕರ್ಣಿ 0.1 ಟಿಎಂಸಿ  ನೀರನ್ನು ಈಗಾಗಲೇ ಕುಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಮುಂದೆ ಹೇಳಲಾಗಿದೆ. ಈಗ ಸಮಸ್ಯೆ ಬಂದಿರುವುದು ಕರ್ನಾಟಕದ ಭಾಗದಲ್ಲಿ ಎಂಟು ಹೊಸ ಆಣೆಕಟ್ಟು ನಿರ್ಮಾಣ ಮಾಡುವುದರ ಮೂಲಕ  ಮಹಾದಾಯಿ ನದಿಗೆ ತಿರುವು ನೀಡುವುದರಿಂದ ನದಿಯ ಕೆಳಭಾಗದಲ್ಲಿರುವ ಗೋವಾ ಗೆ ಹನಿ ನೀರು ಕೂಡ ದೊರಕುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕದ ಬೆಳಗಾವಿ ಜಿಲ್ಲೆಯೊಂದರಲ್ಲಿ ಹಲವಾರು ನೀರಿನ ಮೂಲ ಪ್ರದೇಶಗಳಿದ್ದು ಅದು  0.1 ಟಿಎಂಸಿ ನೀರು  ಆ ಭಾಗದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುತ್ತದೆ ಎಂದು ತಿಳಿಸಿದರು. 

Trending News