ಚಾಮರಾಜನಗರ: ವೀರಪ್ಪನ್ ಅಳಿದ ಬಳಿಕವೂ ಹನೂರು ತಾಲೂಕಿನ ಗೋಪಿನಾಥಂ, ಪಾಲಾರ್ ಸುತ್ತಮುತ್ತಲು ಬೇಟೆಗಾರರು ಹಾವಳಿ ಇಡುತ್ತಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಳ್ಳಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿರುವ ಆತಂಕಕಾರಿ ಘಟನೆ ನಡೆದಿದೆ.
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಡಿ ಪಾಲಾರ್ ಎಂಬಲ್ಲಿ ಜಿಂಕೆ ಬೇಟೆಯಾಡಿ ತೆರಳುತ್ತಿದ್ದ ಅಂದಾಜು ನಾಲ್ವರು ಕಳ್ಳಬೇಟೆಗಾರರು ಹಾಗೂ ಮೂವರು ಅರಣ್ಯ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು ಬೇಟೆಗಾರರು ನದಿಗೆ ಹಾರಿ ಪರಾರಿಯಾಗಿದ್ದಾರೆ.ಬೇಟೆಗಾರರ ತಲೆ ಬ್ಯಾಟರಿಗಳು ಪತ್ತೆಯಾಗಿದ್ದು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ಕೊಡಲಾಗಿದೆ, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆಂದು ಎಸಿಎಫ್ ಅಂಕರಾಜು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Siddaramaiah : 'ಹೊಡಿ, ಬಡಿ, ಕಡಿ ಅನ್ನೋದು ಬಿಜೆಪಿ ಸಂಸ್ಕೃತಿ'
ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಗಡಿಯಂತೆ ಪಾಲಾರ್ ನದಿ ಹರಿಯಲಿದ್ದು ತಮಿಳುನಾಡು ಭಾಗದಿಂದ ತೆಪ್ಪದ ಮೂಲಕ ರಾಜ್ಯಕ್ಕೆ ಬಂದು ಜಿಂಕೆ ಬೇಟೆಯಾಡುತ್ತಾರೆ ಎನ್ನಲಾಗಿದ್ದು ಗುಂಡಿನ ಚಕಮಕಿ ನಡೆಸಿರುವವರು ಗೋವಿಂದಪ್ಪಾಡಿ ಗ್ರಾಮದವರು ಎಂದು ಶಂಕಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.