ಸರ್ಕಾರಕ್ಕೆ ತಲೆನೋವಾದ ಹಾನಗಲ್‌ ಗ್ಯಾಂಗ್‌ರೇಪ್‌ ಕೇಸ್‌.. ಸಿದ್ದರಾಮಯ್ಯ ಹೇಳಿದ್ದೇನು..?

CM Siddaramaiah: ಸಂಸದ ಅನಂತ್ ಕುಮಾರ್ ಹೆಗಡೆ ಕೊಟ್ಟಿರೋ ವಿವಾದಾತ್ಮಕ ಹೇಳಿಕೆಯ ಕಾವು ದಿನದಿಂದ ದಿನಕ್ಕೆ ಜೋರಾಗ್ತಿದೆ. ಹೆಗಡೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಇಬ್ಬರು ಟಾಂಗ್ ಕೊಟ್ಟಿದ್ದಾರೆ, ಇತ್ತ ಸ್ವಕ್ಷದ ನಾಯಕರೇ ಹೆಗಡೆ ವಿರುದ್ಧ ತಿರುಗಿಬಿದ್ದಿದ್ದು ಅವರ ಹೇಳಿಕೆಗು ಪಕ್ಷಕ್ಕು ಯಾವುದೆ ಸಂಬಂಧ ಇಲ್ಲ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ‌ರೇ ಕೆಂಡಕಾರಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷ್ ಹೆಗಡೆ ಪರ ನಿಂತಿರೋದು ಕುತೂಹಲ ಕೆರಳಿಸ್ತಿದೆ..  

Written by - Savita M B | Last Updated : Jan 16, 2024, 08:19 PM IST
  • ಸಂಸದ ಅನಂತ್ ಕುಮಾರ್ ಹೆಗಡೆ ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ ಹೇಳಿಕೆ
  • ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ ಹೇಳಿಕೆ ಈಗ ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ
  • ಸಿದ್ದರಾಮಯ್ಯರನ್ನು ಏಕವಚನದಲ್ಲಿ ಬೈದು ನಿಂದಿಸಿದ ವಿಚಾರ ಇದೀಗ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡಿತಿದೆ.
ಸರ್ಕಾರಕ್ಕೆ ತಲೆನೋವಾದ ಹಾನಗಲ್‌ ಗ್ಯಾಂಗ್‌ರೇಪ್‌ ಕೇಸ್‌.. ಸಿದ್ದರಾಮಯ್ಯ ಹೇಳಿದ್ದೇನು..? title=

ಸಂಸದ ಅನಂತ್ ಕುಮಾರ್ ಹೆಗಡೆ ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ ಹೇಳಿಕೆ ಈಗ ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.. ಸಿದ್ದರಾಮಯ್ಯರನ್ನು ಏಕವಚನದಲ್ಲಿ ಬೈದು ನಿಂದಿಸಿದ ವಿಚಾರ ಇದೀಗ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡಿತಿದೆ. ಕಳೆದ 2 ದಿನಗಳಿಂದ ಕಾಂಗ್ರೆಸ್ ನ ಎಲ್ಲಾ ನಾಯಕರು ಹೆಗಡೆ ವಿರುದ್ಧ ಕೆಂಡಕಾರ್ತ ಆಕ್ರೋಶ ಹೊರಹಾಕ್ತಿದ್ರು. ಈಶ್ವರಪ್ಪ ಬಿಟ್ರೆ ಬರೆ ಯಾರು ಬಿಜೆಪಿ ನಾಯಕರು ಹೆಗಡೆ ಬೆಂಬಲಕ್ಕೆ ನಿಂತಿರಲಿಲ್ಲ. ಇದೀಗ ಹೆಗಡೆ ವಿರುದ್ದ ಕಾಂಗ್ರೆಸ್ ನವರು ಸೇರಿದಂತೆ ಸ್ವಪಕ್ಷದ ನಾಯಕರೇ ತಿರುಗಿಬಿದ್ದಿದ್ದು ಆಕ್ರೋಶ ಹೊರಹಾಕ್ತಿದ್ದಾರೆ.  ಈ ಮಧ್ಯೆ ಕೇಂದ್ ಸಚಿವ ಪ್ರಹ್ಲಾದ್ ಜೋಷಿ ಮಾತ್ರ ಹೆಗಡೆ ಪರ ನಿಂತಿದ್ದಾರೆ.

ಅನಂತ್ ಕುಮಾರ್ ಹೆಗಡೆಗೆ ಸಿಎಂ‌ ಸಿದ್ದರಾಮಯ್ಯ ಇಂದು ಟಾಂಗ್ ಕೊಟ್ಟಿದ್ದಾರೆ ಅವರು ರಾಜಕೀಯವಾಗಿ ಆರೋಪ ಮಾಡ್ತಾರೆ. ಅನಂತ್ ಕುಮಾರ್ ಇಷ್ಟು ದಿನ ನಾಪತ್ತೆ ಆಗಿದ್ರು, ಅವರು ಎನಾದರೂ ಮಾಡಿದಾರಾ ಕ್ಷೇತ್ರಕ್ಕೆ, ಬಡವರ ಕಷ್ಟ ಕೇಳಿದಾರಾ. ಸಂಸ್ಕೃತಿ ಅಂದರೆ ಮನುಷ್ಯತ್ವ, ಮಜುಷ್ಯತ್ವ ಇಂಪಾರ್ಟೆಂಟ್ ಎಂದು ಕೆಂಡ ಕಾರಿದ್ದಾರೆ ಸಿದ್ದು. ಡಿಸಿಎಂ ಡಿಕೆ ಶಿವಕುಮಾರ್ ಸಹ ಹೆಗಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಪಾಪ ಅವರ ಮುಖಂಡರೇ ಅವರ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು. ಮಾನಸಿಕ ಸ್ಥಿರ ಇರೋರು ಮಾತಾಡೋಕೆ ಹೋಗಲ್ಲ, ಅವರ ಲೀಡರ್ ಗಳಿಗೆ ಮಾತಾಡಿದ್ದು ತಪ್ಪು ಅಂತ ಗೊತ್ತಾಗಿದೆ, ಕೂಡಲೇ ಅವರ ಹೆಲ್ತ್ ಬಗ್ಗೆ ಗಮನ ಕೊಡ್ಲಿ ಅಂತ ವ್ಯಂಗ್ಯವಾಡಿದ್ದಾರೆ ಡಿಕೆಶಿ....

ಇದನ್ನೂ ಓದಿ-ಯುಟ್ಯೂಬ್ ನೋಡಿ ರೋಗಿಗೆ 6 ಬಾರಿ ಚಿಕಿತ್ಸೆ!

ಹೆಗಡೆ ವಿರುದ್ಧ ಸ್ವಪಕ್ಷದ ನಾಯಕರೇ ತಿರುಗಿಬಿದ್ದಿದ್ದಾರೆ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅನಂತ್ ಕುಮಾರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ. ಅವರು ಹೇಳಿರೋದೆಲ್ಲ ಅವರ ವೈಯಕ್ತಿಕ ಅಭಿಪ್ರಾಯಗಳು,ಇದರ ಬಗ್ಗೆ ಅವರ ಜತೆ ವೈಯಕ್ತಿಕವಾಗಿ ಮಾತಾಡ್ತೇನೆ ಎಂದು ಗರಂ ಆಗಿದ್ದಾರೆ. ಮಾಜಿ ಸಚಿವ ಸೋಮಣ್ಣ ಸಹ ಹೆಗಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಹೆಗಡೆ ಹೇಳಿಕೆ ವೈಯಕ್ತಿಕವಾಗಿ ನನಗೆ ಸ್ವಲ್ಪ ಬೇಸರಿಕೆ ತರಿಸಿದೆ. ಸಿದ್ದರಾಮಯ್ಯ ಏಳು ಕೋಟಿ ಜನರ ಪ್ರತಿನಿಧಿ, ಮುಖ್ಯಮಂತ್ರಿಗಳು. ಹೆಗಡೆ ಅವರು ಸುಸಂಸ್ಕೃತ ಕುಟುಂಬದಿಂದ ಬಂದವರು ತಮ್ಮ ಭಾಷೆ‌ವಮೇಲೆ ಹಿಡಿತ ಇಟ್ಕೋಬೇಕಾಗುತ್ತೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. 

ಒಟ್ನಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಕೊಟ್ಟಿರೋ ವಿವಾದಾತ್ಮಕ ಹೇಳಿಕೆಗೆ ಸಿಎಂ, ಡಿಸಿಎಂ ಟಾಂಗ್ ಕೊಟ್ಟು ಆಕ್ರೋಶ ಹೊರಹಾಕಿದ್ದಾರೆ. ವಿಜಯೇಂದ್ರ‌ ಸೇರಿ ಕೆಲ ಬಿಜೆಪಿ ನಾಯಕರು ಹೆಗಡೆ ಅವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಎಚ್ಚರಿಕೆ ವಹಿಸ್ತಿದ್ದು ಆಕ್ರೋಶ ಹೊರಹಾಕ್ತಿದ್ರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೆಗಡೆ ಬೆನ್ನಿಗೆ‌ ನಿಂತಿರೋದ್ರು ತೀವ್ರ ಕುತೂಹಲ ಕೆರಳಿಸ್ತಿದೆ..

ಇದನ್ನೂ ಓದಿ-ಜಿಲ್ಲಾಧ್ಯಕ್ಷರ ಜೊತೆಗೆ ಬಿ.ವೈ.ವಿಜಯೇಂದ್ರ ಮೀಟಿಂಗ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News