ಬೆಂಗಳೂರಿಗೆ ನಾಳೆ ಆರೆಂಜ್ ಅಲರ್ಟ್: RCB-CSK ನಾಕೌಟ್ ಪಂದ್ಯಕ್ಕೆ ಮಳೆ ಅಡ್ಡಿ !?

Orange Alert In Bengaluru: ರಾಜ್ಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 18ರಂದು ಅಂದ್ರೆ ನಾಳೆ ಮಳೆಯಬ್ಬರ ಬೆಂಗಳೂರಲ್ಲಿ ಜೋರಾಗಿ ಇರಲಿದೆಯಂತೆ. ಹೀಗಾದರೆ  ಆರ್‌ಸಿ‌ಬಿ ಪ್ಲೇ ಆಫ್ ಕನಸಿಗೆ ತಣ್ಣೀರು ಎರಚಿದಂತಾಗಲಿದೆ. 

Written by - Yashaswini V | Last Updated : May 17, 2024, 03:17 PM IST
  • ಬೆಂಗಳೂರಲ್ಲಿ ಮೂರು ನಾಲ್ಕು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
  • ಹೀಗಾಗಿ ರಾಜ್ಯ ಹವಾಮಾನ ಇಲಾಖೆ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
  • ಮೇ 18 ರಿಂದ 20ರ ವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ ಕೊಡಲಾಗಿದೆ.
ಬೆಂಗಳೂರಿಗೆ ನಾಳೆ ಆರೆಂಜ್ ಅಲರ್ಟ್: RCB-CSK ನಾಕೌಟ್ ಪಂದ್ಯಕ್ಕೆ ಮಳೆ ಅಡ್ಡಿ !? title=

Bengaluru Rain: ಇಷ್ಟು ದಿನ ಬೆಂಗಳೂರಿನಲ್ಲಿ ನೆತ್ತಿ ಸುಡುತ್ತಿದ್ದ ಬಿಸಿಲಿಗೆ ಜನ ಬಳಲಿ ಬೆಂಡಾಗಿದ್ರು. ಆದರೀಗ ಅದೇ ಬಿಸಿಲಿಗೆ ಜನ ಮೊರೆ ಹೋಗಿದ್ದಾರೆ. ನಿರಂತರ ಮಳೆ ಇರುವ ಕಾರಣ ಅಯ್ಯೋ ನಾಳೆ ಒಂದು ದಿನ ಮಳೆ ಬೇಡ ಬಿಸಿಲೇ ಇರಲಪ್ಪ ಅಂತ ಮೇಘರಾಜನಿಗೆ ಹರಕೆ ಹೊತ್ತಿದ್ದಾರೆ.

ಹೌದು.. ಬೆಂಗಳೂರಲ್ಲಿ ಮೂರು ನಾಲ್ಕು ದಿನಗಳ ಕಾಲ ಭಾರೀ ಮಳೆಯ (Heavy Rain) ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ರಾಜ್ಯ ಹಾವಾಮಾನ ಇಲಾಖೆ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 18 ರಿಂದ 20ರ ವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ ಕೊಡಲಾಗಿದೆ. ಜೊತೆಗೆ ಮೈಸೂರು, ಮಂಡ್ಯ, ಕೋಲಾರ, ಬೆಂ ಗ್ರಾಮಾಂತರದಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಮಳೆ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ- ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ: 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ನಿನ್ನೆಯೂ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು. ಹಾಸನ, ದಾವಣೆಗೆರೆ, ಮೂಡಿಗೆರೆಯಲ್ಲಿ ಹೆಚ್ಚಿನ ಮಳೆಯ ಪ್ರಮಾಣ ದಾಖಲಾಗಿತ್ತು. ಇದರ ಮುಂದುವರೆದ ಭಾಗವಾಗಿ ದಕ್ಷಿಣ ಭಾಗದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಹವಾಮಾನ ತಜ್ಞರ ಪ್ರಕಾರ ಮೇ 18 ರಿಂದ 20ರ ಮೂರು ದಿನಗಳ‌ ಅವಧಿಯಲ್ಲಿ 115 ರಿಂದ 204 ಮಿ.ಮೀ ನಷ್ಟು ದಾಖಲೆಯ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.  

ಒಂದು ದಿನ ರಜೆಗಾಗಿ ಮೇಘರಾಜನಿಗೆ ಅಭಿಮಾನಿಗಳ ಮನವಿ..!!
ರಾಜ್ಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 18ರಂದು ಅಂದ್ರೆ ನಾಳೆ ಮಳೆಯಬ್ಬರ ಬೆಂಗಳೂರಲ್ಲಿ ಜೋರಾಗಿ ಇರಲಿದೆಯಂತೆ. ಹೀಗಾದರೆ  ಆರ್‌ಸಿ‌ಬಿ ಪ್ಲೇ ಆಫ್ (RCB Play Off) ಕನಸಿಗೆ ತಣ್ಣೀರು ಎರಚಿದಂತಾಗಲಿದೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ಸಿ‌ಎಸ್‌ಕೆ ಪ್ಲೇ ಆಫ್ ಗೆ ಏರಲಿದೆ. ಇದು ಆರ್‌ಸಿ‌ಬಿ ಅಭಿಮಾನಿಗಳನ್ನು ಚಿಂತೆಗೆ ಈಡುಮಾಡಿದೆ.

ಇದನ್ನೂ ಓದಿ- ರಜೆಯಲ್ಲಿ ಮಕ್ಕಳ ಸುರಕ್ಷತೆಗೆ ಗಮನ ನೀಡಿ: ಪಾಲಕರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ

ಒಟ್ಟಾರೆ ಪೂರ್ವ ಮುಂಗಾರು ಮಳೆ (Monsoon Rain) ಬೆಂಗಳೂರಲ್ಲಿ ದಿನೆ ದಿನೆ ಚುರುಕಾಕ್ತಿದೆ, ಶೀಘ್ರವೇ ಮುಂಗಾರು ಪ್ರವೇಶ ಕಾಣುವ ಸಾಧ್ಯತೆ ಇದೆ. ಇದರ ನಡುವೆ ಮೇ 18ರಿಂದ 20ರ ವರೆಗೆ ಬೆಂಗಳೂರಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇದೇ ಸಮಯದಲ್ಲಿ ಆರ್‌ಸಿ‌ಬಿ-ಸಿ‌ಎಸ್‌ಕೆ ನಾಕೌಟ್ ಪಂದ್ಯವೂ (RCB-CSK Knockout Match) ಇರಲಿದ್ದು, ಮೇಘರಾಜನ ಒಲವು ತೋರಬೇಕಿದೆ. ಆರ್‌ಸಿ‌ಬಿ ಈ ಬಾರಿಯ ಪ್ಲೇ ಆಫ್ ಕನಸನ್ನು ನುಚ್ಚು ನೂರು ಮಾಡಂದಂತೆ, ಕೋಟಿ ಕೋಟಿ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿಸಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News