Home Remedies: ಹೇನಿನ ಸಮಸ್ಯೆಯು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಅದು ಹೆಚ್ಚಾದಂತೆ ತಲೆಯಲ್ಲಿ ಕಜ್ಜಿ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಒಂದು ಬಾರಿ ತಲೆಗೆ ಹೇನು ಹತ್ತಿದರೇ ಸುಲಭವಾಗಿ ಹೋಗುವುದಿಲ್ಲ. ಅದರ ನಿರ್ಣಾಮಕ್ಕೆ ಮನೆಮದ್ದುಗಳನ್ನು ಬಳಸಿ ಹೇನಿನ ಸಮಸ್ಯೆಯಿಂದ ದೂರ ಇರಬಹುದು..
ಹೇನಿನ ಸಮಸ್ಯೆಗೆ ಕಾರಣಗಳು
ತಲೆ ಕೂದಲು ದಷ್ಟಪುಷ್ಟವಾಗಿದ್ದು, ಎಣ್ಣೆ ಹಚ್ಚಿ ಸರಿಯಾಗಿ ತೊಳೆಯದೇ ಇದ್ದರೆ, ಅಥವಾ ಬೇಸಿಗೆಯಲ್ಲಾಗುವ ಶೆಕೆಯಿಂದ ,ತಲೆಯಲ್ಲಿನ ಕೊಳೆಗಳ ಬಾಕ್ಟಿರೀಯಗಳಿಂದ ನಿಧನವಾಗಿ ಹೇನಿನ ರೂಪಕ್ಕೆ ತಿರುಗುತ್ತದೆ. ಅಷ್ಟೇ ಅಲ್ಲದೇ ಹೇನು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುವ ಸಾಂಕ್ರಾಮಿಕ ಸಮಸ್ಯೆಯಾಗಿದೆ.
ಇದನ್ನೂ ಓದಿ: Health Tips: ದೇಹ ತಂಪಾಗಿಸಲು ಇಲ್ಲಿದೆ ಸರಳ ಮನೆಮದ್ದು
ಬೇವು
ಬೇವಿನಲ್ಲಿ ಇರುವ ಆಂಟಿಮೈಕ್ರೊಬಿಯಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇದನ್ನು ತಲೆಗೆ ಬಳಸುವುದರಿಂದ ಇದು ಹೇನುಗಳನ್ನು ನಶಿಸುವಲ್ಲಿ ಸಹಕಾರಿಯಾಗಿದೆ. ಮಾಡುವುದರ ಜೊತೆಗೆ ರಕ್ತ ಸಂಚಲನವಲ್ಲದೇ ತಲೆಯ ತುರಿಕೆಯನ್ನುಕಡಿಮೆ ಮಾಡಲು ಬೇವು ಬಹು ಉಪಯೋಗಿಯಾಗಿದೆ.
ಬಳಸುವ ವಿಧಾನ:
-ಅವಶ್ಯಕವಿರುವಷ್ಟೇ ಬೇವಿನ ಎಲೆಯನ್ನು ಮೊದಲು ಸ್ವಚ್ಛ ಮಾಡಿ ಬಳಸಿ
- ನಂತರ ಅದನ್ನು ನುಣ್ಣಗಾಗುವಂತೆ ಪೇಸ್ಟ್ ಮಾಡಿಕೊಳ್ಳಿ
ಇದನ್ನೂ ಓದಿ: Pregnancy Test : ಮನೆಯಲ್ಲಿ ಹೀಗೆ ಮಾಡಿಕೊಳ್ಳಿ Pregnancy ಟೆಸ್ಟ್ : ಯಾವುದೇ ಭಯ ಬೇಡ
-ರಾತ್ರಿ ಮಲಗುವ ಅರ್ಧ ಘಂಟೆಗೂ ಮೊದಲು ಬೇವಿನ ಪೇಸ್ಟ್ ಅನ್ನು ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಹಚ್ಚಿ
- ಹಚ್ಚಿರುವ ಬೇವಿನ ಪೇಸ್ಟ್ ಎಲ್ಲೂ ಹಾಳಾಗದಂತೆ ಶವರ್ ಕ್ಯಾಪ್ ಧರಿಸಿ ಮಲಗಿ
- ಮುಂಜಾನೆ ತಲೆಯನ್ನು ತೊಳೆದು, ಹೇನು ಬರುವ ಬಾಚಣಿಗೆಯಿಂದ ಬಾಚಿಕೊಳ್ಳಿ.
-ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಹೇನಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ