Araga Jnanendra : 'ಹಿಂದೂ ಧರ್ಮದ ಬುಡ ಅಲ್ಲಾಡುತ್ತಿತ್ತು : ಗೋ ಹತ್ಯೆ , ಮತಾಂತರ ಎರಡು‌ ಪಾಸ್ ಆಗಿದೆ'

ಈಗ ಬಿಲ್ ಎರಡು ಸದನದಲ್ಲಿ ಪಾಸ್ ಆಗಿದೆ ಎಂದು ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Written by - Channabasava A Kashinakunti | Last Updated : Sep 16, 2022, 12:10 PM IST
  • ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್ ವಿಚಾರ
  • ಬಹಳ ಸಂತೋಷ ವಿಚಾರಿದು, ನಿನ್ನೆ ಮತಾಂತರ ನಿಷೇಧ ಕಾಯ್ದೆ ಪಾಸ್ ಆಗಿದೆ
  • ಬೆಳಗಾವಿಯ ವಿಧಾನಸಭೆಯಲ್ಲಿ ಬಿಲ್ ಪಾಸ್ ಆಗಿತ್ತು
Araga Jnanendra : 'ಹಿಂದೂ ಧರ್ಮದ ಬುಡ ಅಲ್ಲಾಡುತ್ತಿತ್ತು : ಗೋ ಹತ್ಯೆ , ಮತಾಂತರ ಎರಡು‌ ಪಾಸ್ ಆಗಿದೆ' title=

ಬೆಂಗಳೂರು : ಬಹಳ ಸಂತೋಷ ವಿಚಾರಿದು, ನಿನ್ನೆ ಮತಾಂತರ ನಿಷೇಧ ಕಾಯ್ದೆ ಪಾಸ್ ಆಗಿದೆ. ಬೆಳಗಾವಿಯ ವಿಧಾನಸಭೆಯಲ್ಲಿ ಬಿಲ್ ಪಾಸ್ ಆಗಿತ್ತು. ಸುಗ್ರೀವಾಜ್ಞೆ ಮೂಲಕ ಕಾಯ್ದೆ ತಂದಿದ್ದೇವು. ಈಗ ಬಿಲ್ ಎರಡು ಸದನದಲ್ಲಿ ಪಾಸ್ ಆಗಿದೆ ಎಂದು ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಗೋ ಹತ್ಯೆ , ಮತಾಂತರ ಎರಡು‌ ಪಾಸ್ ಆಗಿದೆ. ವೈಯಕ್ತಿಕವಾಗಿ ಅತ್ಯಂತ ಸಂತೋಷವಾಗಿದೆ. ನಾನು ಗೃಹ ಸಚಿವನಾಗಿ ಬಿಲ್ ಮಂಡಿಸಿದ್ದೆ, ಹೆಮ್ಮೆ ಆಗುತ್ತಿದೆ. ಹಿಂದೂ ಧರ್ಮದ ಬುಡ ಅಲ್ಲಾಡುತ್ತಿತ್ತು. ಮತಾಂತರ ಮೂಲಕ ಧರ್ಮ ಒಡೆಯಲಾಗಿತ್ತು. ಸೇವೆಯ ಹೆಸರಲ್ಲಿ ಮತಾಂತರ ‌ಮಾಡಲಾಗಿತ್ತು. ಈಗ ಕಯ್ದೆ ಮೂಲಕ ಕಡಿವಾಣ ಹಾಕಲಾಗಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಒಲೈಕೆ ಹಿಂದಿನಿಂದ ಮಾಡುತ್ತಿದೆ. ಇದರ ಮೂಲಕ ಕಾಂಗ್ರೆಸ್ ಮುಖವಾಡ ಈಗ ಕಳಚಿದೆ ಎಂದು ಗುಡುಗಿದ್ದಾರೆ. 

ಇದನ್ನೂ ಓದಿ : Vegetable Price Today: ರಾಜ್ಯ ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತ! ಇಲ್ಲಿದೆ ನೋಡಿ ವಿವರ

ಮೇ 12, 2022 ರಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಸಮ್ಮತಿಸಲು ಅನುಮೋದನೆ ನೀಡಿತ್ತು. ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ಅಂಗೀಕಾರವಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು.

ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮತಾಂತರ ನಿಷೇಧ ಕಾಯ್ದೆಗೆ ಅನುಮೋದನೆಯನ್ನು ನೀಡಿದ್ದರು. ಆದರೂ ಸದನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಿ ಅಂಗೀಕಾರ ಪಡೆಯಲು ಸರ್ಕಾರ ತೀರ್ಮಾನಿಸಿತ್ತು. ಅದರಂತೆ ವಿಧಾನ ಪರಿಷತ್ತಿನಲ್ಲಿ ಮತಾಂತರ ನಿಷೇಧ ಕಾಯ್ದೆ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯು ಅಂಗೀಕಾರವಾಗಿದೆ.

ಇದನ್ನೂ ಓದಿ : KR Pete Kumbh Mela : ಕೆಆರ್ ಪೇಟೆ ಕುಂಭಮೇಳ ಉಧ್ಘಾಟನೆಗೆ ಯುಪಿ ಸಿಎಂ ಆದಿತ್ಯನಾಥ್ ಗೆ ಆಹ್ವಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News