ಬೆಂಗಳೂರು: ಪ್ರಧಾನಿ ಮೋದಿಗೆ ಸಾಲ ಮಾಡಿ ತುಪ್ಪ ತಿನ್ನುವ ಚಾಳಿ ಇದೆ. ಹೀಗಾಗಿ ಸರ್ಕಾರಿ ಆಸ್ತಿಯನ್ನು ಮಾರುತ್ತಿದ್ದಾರೆಂಬ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ಕರ್ನಾಟಕ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಮಾನ್ಯ ಖರ್ಗೆ ಅವರೇ ಒಂದೇ ಸಾಲಿನಲ್ಲಿ ಉತ್ತರಿಸಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಒಟ್ಟಾರೆ ಆಸ್ತಿ ಎಷ್ಟು ಸಾವಿರ ಕೋಟಿ?’ ಎಂದು ಪ್ರಶ್ನಿಸಿದೆ.
#ಉತ್ತರಿಸಿಖರ್ಗೆ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಬೇನಾಮಿ ರೂಪದಲ್ಲಿರುವುದನ್ನೂ ಸೇರಿಸಿ ನಿಮ್ಮ ಆಸ್ತಿ ಎಷ್ಟಿದೆ ಎಂದು ಹೇಳುವ ಧೈರ್ಯ ಇದೆಯೇ?’ ಎಂದು ಪ್ರಶ್ನಿಸಿದೆ. ‘ಮಲ್ಲಿಕಾರ್ಜುನ್ ಖರ್ಗೆ ಅವರೇ ನೀವು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಾಗ ನಿಮ್ಮ ಕುಟುಂಬದ ಸಂಪತ್ತು ಎಷ್ಟಿತ್ತು? ಈಗ ಅದು ಎಷ್ಟು ಪಟ್ಟು ಹೆಚ್ಚಾಗಿದೆ? ಹಾಗೆಯೇ ಆದಾಯದ ಮೂಲವನ್ನೂ ತಿಳಿಸಿ. ಕಲ್ಯಾಣ ಕರ್ನಾಟಕದ ಜನತೆಗಾಗಿ ಒಮ್ಮೆಯಾದರೂ ಸತ್ಯ ನುಡಿಯಿರಿ’ ಎಂದು ಬಿಜೆಪಿ ಟೀಕಿಸಿದೆ.
ಮಲ್ಲಿಕಾರ್ಜುನ ಖರ್ಗೆ ಅವರೇ,
ನೀವು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಾಗ ನಿಮ್ಮ ಕುಟುಂಬದ ಸಂಪತ್ತು ಎಷ್ಟಿತ್ತು? ಈಗ ಅದು ಎಷ್ಟು ಪಟ್ಟು ಹೆಚ್ಚಾಗಿದೆ? ಹಾಗೆಯೇ ಆದಾಯದ ಮೂಲವನ್ನೂ ತಿಳಿಸಿ.
ಕಲ್ಯಾಣ ಕರ್ನಾಟಕದ ಜನತೆಗಾಗಿ ಒಮ್ಮೆಯಾದರೂ ಸತ್ಯ ನುಡಿಯಿರಿ.#ಉತ್ತರಿಸಿಖರ್ಗೆ
— BJP Karnataka (@BJP4Karnataka) October 4, 2021
ಇದನ್ನೂ ಓದಿ: ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ: ಕಾಂಗ್ರೆಸ್ ಟೀಕೆ
‘ಮೊನ್ನೆಯಷ್ಟೇ ಗಾಂಧಿ ತತ್ತ್ವದ ಬಗ್ಗೆ ಖರ್ಗೆ ಅವರು ಪುಂಖಾನುಪುಂಖವಾಗಿ ಮಾತನಾಡಿದ್ದಾರೆ. ಸತ್ಯ ಮತ್ತು ಅಹಿಂಸೆಯ ಮಹತ್ವ ತಿಳಿಸಿದ್ದಾರೆ. ಖರ್ಗೆಯವರೇ ಇಂದು ಆ ವಿಚಾರವನ್ನು ಕಾರ್ಯರೂಪಕ್ಕೆ ತರುವ ಅವಕಾಶವಿದೆ ನಿಮಗಿದೆ. ಸತ್ಯ ನುಡಿಯಿರಿ, ನೀವು ಮತ್ತು ನಿಮ್ಮ ಕುಟುಂಬ ಎಷ್ಟು ಕೋಟಿಗೆ ಸರದಾರರು?’ ಅಂತಾ ಪ್ರಶ್ನಿಸಿದೆ.
ಮೊನ್ನೆಯಷ್ಟೇ ಗಾಂಧಿ ತತ್ತ್ವದ ಬಗ್ಗೆ @kharge ಅವರು ಪುಂಖಾನುಪುಂಖವಾಗಿ ಮಾತನಾಡಿದ್ದಾರೆ. ಸತ್ಯ ಮತ್ತು ಅಹಿಂಸೆಯ ಮಹತ್ವ ತಿಳಿಸಿದ್ದಾರೆ.
ಖರ್ಗೆಯವರೇ, ಇಂದು ಆ ವಿಚಾರವನ್ನು ಕಾರ್ಯರೂಪಕ್ಕೆ ತರುವ ಅವಕಾಶವಿದೆ ನಿಮಗೆ.
ಸತ್ಯ ನುಡಿಯಿರಿ, ನೀವು ಮತ್ತು ನಿಮ್ಮ ಕುಟುಂಬ ಎಷ್ಟು ಕೋಟಿಗೆ ಸರದಾರರು?#ಉತ್ತರಿಸಿಖರ್ಗೆ
— BJP Karnataka (@BJP4Karnataka) October 4, 2021
‘ಪ್ರಧಾನಿ ನರೇಂದ್ರ ಮೋದಿಗೆ ಸಾಲ ಮಾಡಿ ತುಪ್ಪು ತಿನ್ನುವ ಚಾಳಿ ಇದೆ. ಅದಕ್ಕಾಗಿಯೇ ಅವರು ಎಲ್ಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಬರುವ ತೆರಿಗೆ ಹಣ, ಜಿಎಸ್ ಟಿ ತೆರಿಗೆ ಸಾಕಷ್ಟು ಬಂದರೂ ಸರ್ಕಾರದ ಎಲ್ಲ ಆಸ್ತಿ ಮಾರಾಟ ಮಾಡಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿದರೆ ಮೋದಿ ಕೊಟ್ಟ ಉದ್ಯೋಗ ಸೃಷ್ಟಿ ಭರವಸೆ ಏನಾಗುತ್ತದೆ’ ಎಂದು ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನಿಸಿದ್ದರು.
ಇದನ್ನೂ ಓದಿ: ಬಿ.ಸಿ.ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.