ದಸರಾ ಹಬ್ಬ ಹಿನ್ನೆಲೆ - ಹೂವು, ಕುಂಬಳಕಾಯಿ ದರ ದುಪ್ಪಟ್ಟು, ಹಣ್ಣು ಬಲು ದುಬಾರಿ

ಹಬ್ಬದ ಹಿನ್ನೆಲೆಯಲ್ಲಿ ಬೂದು ಕುಂಬಳ ಕಾಯಿ ದುಬಾರಿಯಾಗಿದೆ.  ಒಂದು ಬೂದುಗುಂಬಳಕಾಯಿ 40 ರೂ.ಗೆ ಮಾರಾಟವಾಗುತ್ತಿದೆ. ಕೆಜಿ ಕುಂಬಳಕಾಯಿ ದರ ಕಳೆದ ವಾರ 15-20 ರೂ. ವರೆಗೆ ಇತ್ತು

Written by - Ranjitha R K | Last Updated : Oct 3, 2022, 01:02 PM IST
  • ದೇಶಾದ್ಯಂತ ದಸರಾ ವೈಭವ ಕಳೆ ಕಟ್ಟಿದೆ.
  • ರಾಜ್ಯದಲ್ಲೂ ದಸರಾ ನವರಾತ್ರಿ ಸಂಭ್ರಮ ಜೋರಾಗಿದೆ.
  • ಬೂದು ಕುಂಬಳ ಕಾಯಿ ದುಬಾರಿಯಾಗಿದೆ.
ದಸರಾ ಹಬ್ಬ ಹಿನ್ನೆಲೆ - ಹೂವು, ಕುಂಬಳಕಾಯಿ ದರ ದುಪ್ಪಟ್ಟು, ಹಣ್ಣು ಬಲು ದುಬಾರಿ  title=
Ash Gourd Price today

ಬೆಂಗಳೂರು : ದೇಶಾದ್ಯಂತ ದಸರಾ ವೈಭವ ಕಳೆ ಕಟ್ಟಿದೆ. ರಾಜ್ಯದಲ್ಲೂ ದಸರಾ ನವರಾತ್ರಿ ಸಂಭ್ರಮ ಜೋರಾಗಿದೆ. ಆದರೆ ಹಬ್ಬದ  ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು  ಹಣ್ಣಿನ ದರ ಗಗನಕ್ಕೇರಿದೆ. ಕುಂಬಳಕಾಯಿ ದರವು ದುಪ್ಪಟ್ಟಾಗಿದೆ. 

ಹಬ್ಬದ ಹಿನ್ನೆಲೆಯಲ್ಲಿ ಬೂದು ಕುಂಬಳ ಕಾಯಿ ದುಬಾರಿಯಾಗಿದೆ.  ಒಂದು ಬೂದುಗುಂಬಳಕಾಯಿ 40 ರೂ.ಗೆ ಮಾರಾಟವಾಗುತ್ತಿದೆ. ಕೆಜಿ ಕುಂಬಳಕಾಯಿ ದರ ಕಳೆದ ವಾರ 15-20 ರೂ. ವರೆಗೆ ಇತ್ತು. ಆದರೆ, ದಸರಾಹಬ್ಬ ಮತ್ತು ಮಳೆ ಕಾರಣ ಇದೀಗ ಕುಂಬಳಕಾಯಿ ದರ ಹೆಚ್ಚಾಗಿದೆ. ಇಳುವರಿ ಕಡಿಮೆ ಇರುವ ಕುಂಬಳಕಾಯಿ  ಬೆಲೆ ದುಪ್ಪಟ್ಟಾಗಿದೆ. 

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ : ನಾಲ್ವರ ದುರ್ಮರಣ, 20ಕ್ಕೂ ಅಧಿಕ ಜನರಿಗೆ ಗಾಯ

ಮಾರುಕಟ್ಟೆಯಲ್ಲಿ ಎಷ್ಟಿದೆ ಹೂವಿನ ಬೆಲೆ : 

ಕುಂಬಳಕಾಯಿಯಂಟೆ ಹೂವಿನ ದರವೂ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಹೂವಿನ ದರ ಎಷ್ಟಿದೆ ನೋಡೋಣ. 

ಮಲ್ಲಿಗೆ ಹೂ ಪ್ರತೀ ಮಾರು 190-220 ರೂ.
ಸೇವಂತಿಗೆ ಪ್ರತೀ ಮಾರು 180-200 ರೂ.
ಚೆಂಡು ಹೂ ಮಾರಿಗೆ 100-130 ರೂ.
ಕನಕಾಂಬರ ಹೂ 450 - 500 ರೂ.
ಸುಗಂಧರಾಜ 250-280 ರೂ. ಕೆಜಿ
ಕಾಕಡ 800 ರೂ. ಕೆಜಿ

ಇದನ್ನೂ ಓದಿ : Sonia Gandhi : ಭಾರತ್‌ ಜೋಡೋ ಯಾತ್ರೆಗೆ ಕೈ ಅಧಿನಾಯಕಿ ಬಲ : ಇಂದು ರಾಜ್ಯಕ್ಕೆ ಸೋನಿಯಾ ಭೇಟಿ

ಹಣ್ಣಿನ ದರ:
ಆಪಲ್  -  120 ರಿಂದ 150 ರೂ
ದಾಳಿಂಬೆ - 80 ರಿಂದ 120 ರೂ 
ಮೂಸಂಬಿ - 80ರಿಂದ 100 ರೂ
ದ್ರಾಕ್ಷಿ - 80 ರೂ
ಕಪ್ಪು ದ್ರಾಕ್ಷಿ -70ರೂ
ಬಾಳೆಹಣ್ಣು - 80-90ರೂ
ಪಚ್ಚಬಾಳೆ - 60ರೂ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News