ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿಯಲ್ಲಿ ಭಾರಿ ಬಿಗಿ ಭದ್ರತೆ

ಹೊಸವರ್ಷದ ಭದ್ರತೆಗಾಗಿ ಬೆಂಗಳೂರಿನಲ್ಲಿ ಹೊಸದಾಗಿ 500 CCTV ಗಳ ಅಳವಡಿಕೆ ಮಾಡಲಾಗಿದೆ. 

Last Updated : Dec 28, 2017, 08:52 AM IST
ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿಯಲ್ಲಿ ಭಾರಿ ಬಿಗಿ ಭದ್ರತೆ title=

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ನಗರದಲ್ಲಿ ಕೈಗೊಂಡಿರುವ ಬಂದೋಬಸ್ತ್ ಕುರಿತಂತೆ ವಿವರಣೆ ನೀಡಿದರು. ನಗರದ ಬಂದೋಬಸ್ತ್ ಗಾಗಿ 15,000 ಪೊಲೀಸ್ ಅಧಿಕಾರಿಗಳು, 4 ಹೆಚ್ಚುವರಿ ಪೊಲೀಸ್ ಆಯುಕ್ತರು, 2 ಜಂಟಿ ಪೊಲೀಸ್ ಆಯುಕ್ತರು, 19 ಡಿಸಿಪಿ, 49 ಎಸಿಪಿ, 250 ಇನ್ಸ್ಪೆಕ್ಟರ್, 400 ಪಿಎಸ್ಐ, 700 ಎಎಸ್ಐ, 40 ಕೆಎಸ್ಆರ್ಪಿ, 30 ಕೆಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಹೆಚ್ಚುವರಿಯಾಗಿ 1500 ಹೋಮ್ ಗಾರ್ಡ್ಸ್, 1000 ಸಿವಿಲ್ ಡಿಫೆನ್ಸ್
500 ಹೊಯ್ಸಳ ವಾಹನ, 250 ಚೀತಾ ಗಸ್ತು ಪಡೆಯನ್ನು ಸಹ ನಿಯೋಜನೆಗೊಳಿಸಲಾಗಿದೆ ಎಂದು ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು ಹೊಸವರ್ಷದ ಭದ್ರತೆಗಾಗಿ ಹೊಸದಾಗಿ 500 CCTV ಗಳ ಅಳವಡಿಕೆ ಮಾಡಲಾಗಿದೆ. ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ನಲ್ಲಿಯೆ 300 CCTV ಗಳ ಅಳವಡಿಕೆ ಮಾಡಲಾಗಿದ್ದು, ಚರ್ಚ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ವಿಶೇಷ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ.

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ...
* ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕಬ್ಬನ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. 
* ಹೊಸವರ್ಷದಂದು ನಗರದ ಫ್ಲೈಓವರ್ ಗಳ ಮೇಲಿನ ಸಂಚಾರ ನಿಷೇಧ. 
* ಮಹಿಳೆಯರು, ಮಕ್ಕಳ ಜತೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ.
* ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಮಾಡಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು.
* ಯಾರಿಗಾದರೂ ಒತ್ತಾಯಪೂರ್ವಕವಾಗಿ ಹೊಸವರ್ಷದ ಶುಭಾಶಯ ಹೇಳಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಮಾಡದಂತೆ ಹೊಸವರ್ಷ ಆಚರಿಸುವಂತೆ ನಗರ ಪೋಲೀಸ್ ಆಯುಕ್ತ ಟಿ.ಸುನೀಲ್  ಕುಮಾರ್ ಮನವಿ ಮಾಡಿದರು.

Trending News