ಸಿದ್ದಗಂಗಾ ಮಠದಿಂದ 2020 ವರ್ಷವನ್ನು ಪ್ರಾರಂಭಿಸುತ್ತಿರುವುದು ಅದೃಷ್ಟದ ಸಂಗತಿ- ಪ್ರಧಾನಿ ಮೋದಿ

ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಸಿದ್ದಗಂಗಾ ಮಠದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು.

Last Updated : Jan 2, 2020, 03:19 PM IST
ಸಿದ್ದಗಂಗಾ ಮಠದಿಂದ 2020 ವರ್ಷವನ್ನು ಪ್ರಾರಂಭಿಸುತ್ತಿರುವುದು ಅದೃಷ್ಟದ ಸಂಗತಿ- ಪ್ರಧಾನಿ ಮೋದಿ  title=
Photo courtesy: ANI

ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಸಿದ್ದಗಂಗಾ ಮಠದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ 'ಈ ಧಾರ್ಮಿಕ ಭೂಮಿಯಿಂದ ನಾನು 2020 ವರ್ಷವನ್ನು ಪ್ರಾರಂಭಿಸುತ್ತಿದ್ದೇನೆ ಎನ್ನುವುದಕ್ಕೆ ನಾನು ಅದೃಷ್ಟಶಾಲಿ. ಶ್ರೀ ಸಿದ್ದಗಂಗಾ ಮಠದ ಈ ಪವಿತ್ರ ಶಕ್ತಿಯು ನಮ್ಮ ದೇಶದ ಜನರ ಜೀವನವನ್ನು ಸಮೃದ್ಧಗೊಳಿಸುತ್ತದೆ ಎಂದು ನಾನು ಬಯಸುತ್ತೇನೆ' ಎಂದರು.

ಭಾರತವು 21 ನೇ ಶತಮಾನದ ಮೂರನೇ ದಶಕವನ್ನು ಹೊಸ ಶಕ್ತಿ ಮತ್ತು ಹೊಸ ಚೈತನ್ಯದೊಂದಿಗೆ ಪ್ರವೇಶಿಸಿದೆ. ಕಳೆದ ದಶಕ ಪ್ರಾರಂಭವಾದಾಗ ದೇಶದಲ್ಲಿ ಯಾವ ರೀತಿಯ ವಾತಾವರಣವಿತ್ತು ಎಂಬುದು ನಿಮಗೆ ನೆನಪಾಗುತ್ತದೆ. ಆದರೆ ಈ ಮೂರನೇ ದಶಕವು ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳ ಬಲವಾದ ಅಡಿಪಾಯದೊಂದಿಗೆ ಪ್ರಾರಂಭವಾಗಿದೆ'.

ಇದೇ ವೇಳೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು 'ಪಾಕಿಸ್ತಾನವನ್ನು ಧರ್ಮದ ಆಧಾರದ ಮೇಲೆ ರಚಿಸಲಾಯಿತು, ಧಾರ್ಮಿಕ ಅಲ್ಪಸಂಖ್ಯಾತರನ್ನು ಅಲ್ಲಿ ಹಿಂಸಿಸಲಾಗುತ್ತಿದೆ. ಕಿರುಕುಳಕ್ಕೊಳಗಾದವರು ನಿರಾಶ್ರಿತರಾಗಿ ಭಾರತಕ್ಕೆ ಬರಬೇಕಾಯಿತು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪಾಕಿಸ್ತಾನದ ವಿರುದ್ಧ ಮಾತನಾಡುವುದಿಲ್ಲ, ಬದಲಾಗಿ, ಅವರು ಈ ನಿರಾಶ್ರಿತರ ವಿರುದ್ಧ ರ್ಯಾಲಿಗಳನ್ನು ನಡೆಸುತ್ತಿದ್ದಾರೆ' ಎಂದು ಆರೋಪಿಸಿದರು.

ಇನ್ನು ಮುಂದುವರೆದು 'ಇಂದು ಭಾರತದ ಸಂಸತ್ತಿನ ವಿರುದ್ಧ ಆಂದೋಲನ ನಡೆಸುತ್ತಿರುವವರು, ಪಾಕಿಸ್ತಾನದ ಚಟುವಟಿಕೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗಪಡಿಸುವುದು ಇಂದಿನ ಅಗತ್ಯ ಎಂದು ನಾನು ಹೇಳಲು ಬಯಸುತ್ತೇನೆ. ನೀವು ಆಂದೋಲನ ಮಾಡಬೇಕಾದರೆ, ಕಳೆದ 70 ವರ್ಷಗಳ ಪಾಕಿಸ್ತಾನದ ಕ್ರಮಗಳ ವಿರುದ್ಧ ಧ್ವನಿ ಎತ್ತಿಕೊಳ್ಳಿ' ಎಂದು ಆಗ್ರಹಿಸಿದರು. 

 

Trending News