ಬದುಕಿದ್ದರೆ ಇದೇ ಅವಧಿಯಲ್ಲಿಯೇ ನಾನು ಸಿಎಂ ಆಗ್ತೀನಿ: ಉಮೇಶ್ ಕತ್ತಿ ಹೊಸ ಬಾಂಬ್..!

ಉಮೇಶ್ ಕತ್ತಿ ಹೇಳಿಕೆಯಿಂದ ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕಾರ ಪೂರ್ಣಗೊಳಿಸಲ್ವಾ ಎನ್ನುವ ಪ್ರಶ್ನೆ ಮೂಡಿದೆ.

Written by - Zee Kannada News Desk | Last Updated : Aug 15, 2021, 01:12 PM IST
  • ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಹೊಸ ‘ಕತ್ತಿ ವರಸೆ’..!
  • ನಾನು ಮುಖ್ಯಮಂತ್ರಿ ಆಗುತ್ತೇನೆ ಅಂತಾ ಹೊಸ ಬಾಂಬ್ ಸಿಡಿಸಿದ ಸಚಿವ ಉಮೇಶ್ ಕತ್ತಿ
  • ನಾನು ಬದುಕಿದ್ದರೆ ಇದೇ ಅವಧಿಯಲ್ಲಿ, ಸತ್ತರೆ ಮುಂದಿನ ಅವಧಿಯಲ್ಲಿ ಸಿಎಂ ಆಗುವೆ ಎಂದ ಕತ್ತಿ
ಬದುಕಿದ್ದರೆ ಇದೇ ಅವಧಿಯಲ್ಲಿಯೇ ನಾನು ಸಿಎಂ ಆಗ್ತೀನಿ: ಉಮೇಶ್ ಕತ್ತಿ ಹೊಸ ಬಾಂಬ್..! title=
ಹೊಸ ಬಾಂಬ್ ಸಿಡಿಸಿದ ಸಚಿವ ಉಮೇಶ್ ಕತ್ತಿ

ಬೆಂಗಳೂರು: ಬಿಜೆಪಿ ಸಚಿವರ ಖಾತೆ ಕ್ಯಾತೆ ನಡುವೆಯೇ ಉಮೇಶ್ ಕತ್ತಿ(Umesh Katti) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬರುವ ದಿನಗಳಲ್ಲಿ ನಾನು ಕೂಡ ಮುಖ್ಯಮಂತ್ರಿ ಆಗಬಹುದು. ಇದೇ ಅವಧಿಯಲ್ಲಿ ಸಿಎಂ ಆಗುತ್ತೇನೆ ಅಂತಾ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ.

75ನೇ ಸ್ವಾತಂತ್ರ್ಯ ದಿನಾಚರಣೆ(75th Independence Day) ಸಂಭ್ರಮ ಹಿನ್ನೆಲೆ ಬಾಗಲಕೋಟೆ(Bagalkot)ಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ  ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಧ್ವಜಾರೋಹಣ‌ ನೆರವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಾನು ಜೀವಂತ ಇದ್ದರೇ ಇದೇ ಅವಧಿಯಲ್ಲಿ, ಸತ್ತರೇ ಮುಂದಿನ ಅವಧಿಯಲ್ಲಿ ಸಿಎಂ ಆಗುವೆ. ಸತ್ತರೆ ನನ್ನ ಕಡೆಯಿಂದ ಏನೂ ಮಾಡಲು ಆಗಲ್ಲವೆಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೆ ನಗುನಗುತ್ತಲೇ ಸಿಎಂ ಆಗುವ ಆಸೆಯನ್ನು ಉಮೇಶ್ ಕತ್ತಿ(Umesh Katti) ತೇಲಿಬಿಟ್ಟಿದ್ದಾರೆ. ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.

ಇದನ್ನೂ ಓದಿ: ಕೊನೆಗೂ ಹರಾಜಾದ ವಿಜಯ್ ಮಲ್ಯಗೆ ಸೇರಿದ Kingfisher House, ಎಷ್ಟು ಬೆಲೆ ಬಂತು ಗೊತ್ತಾ?

ಇಷ್ಟು ದಿನ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎನ್ನುತ್ತಿದ್ದ ಸಚಿವ ಉಮೇಶ್ ಕತ್ತಿ(Umesh Katti) ಇದೀಗ ಹೊಸ ವರಸೆ ಶುರು ಮಾಡಿದ್ದಾರೆ. ಕತ್ತಿ ಹೇಳಿಕೆಯಿಂದ ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕಾರ ಪೂರ್ಣಗೊಳಿಸಲ್ವಾ..? ಎನ್ನುವ ಪ್ರಶ್ನೆ ಮೂಡಿದೆ. ಕತ್ತಿ ಹೇಳಿಕೆ ಹಿಂದಿರುವ ಒಳ ಮರ್ಮವೇನು ಅನ್ನೋ ಪ್ರಶ್ನೆಯೂ ಕಾಡುತ್ತಿದೆ. ಸಿಎಂ ಕುರ್ಚಿ ಮೇಲೆ ಕತ್ತಿ ಕಣ್ಣು ಇಟ್ಟಿದ್ದು, ಕೇಸರಿ ಕೋಟೆಯಲ್ಲಿ ಕಿಚ್ಚು ಹಚ್ಚಿದ್ದಾರೆ. ಕತ್ತಿ ಹಚ್ಚಿರುವ ಈ ಹೊಸ ಕಿಡಿ ಕೇಸರಿ ಕೋಟೆಯನ್ನು ಧಗಧಗಿಸಲಿದ್ಯಾ ಅನ್ನೋ ಪ್ರಶ್ನೆ ಮೂಡಿದೆ.

ನಾಳೆ ಆನಂದ್ ಸಿಂಗ್ ರಾಜಕೀಯ ಭವಿಷ್ಯ?

ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್(Anand Singh)ಮುಂದಿನ ನಡೆ ಏನು ಅನ್ನೋ ಪ್ರಶ್ನೆ ಮೂಡಿದೆ. ನಾಳೆ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ ಅನ್ನೋ ಮಾತುಕಳು ಕೇಳಿಬರುತ್ತಿವೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಆನಂದ್ ಸಿಂಗ್, ರಾಜಕೀಯದ ಬಗ್ಗೆ ಇಂದು ನನ್ನ ಬಳಿ ಏನನ್ನೂ ಕೇಳಬೇಡಿ ಅಂತಾ ಹೇಳಿ ಅಡ್ಡಗೋಡೆ ಮೇಲೆ ದೀಪವನ್ನಿಟ್ಟಿದ್ದಾರೆ.

ಇದನ್ನೂ ಓದಿ: ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಮದುವೆ ಸಂಭ್ರಮ..!

ಇಂದು ಸ್ವಾತಂತ್ರ್ಯ ದಿನವಾಗಿದ್ದು, ನನ್ನನ್ನು ಸ್ವಾತಂತ್ರನಾಗಿರಲು ಬಿಡಿ. ನಾಳೆ ನನ್ನ ಬಳಿ ರಾಜಕೀಯದ ಬಗ್ಗೆ ಪ್ರಶ್ನೆ ಮಾಡಿ. ನಾಳೆ ನಾನು ಈ ವಿಚಾರದ ಬಗ್ಗೆ ಮಾತನಾಡುತ್ತೇನೆ ಅಂತಾ ವಿಜಯನಗರದಲ್ಲಿ ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ. ನಾಳೆ ಸಚಿವ ಆನಂದ್ ಸಿಂಗ್ ಹೊಸ ಬಾಂಬ್ ಸಿಡಿಸುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ನಿನ್ನೆ(ಆಗಸ್ಟ್ 14) ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai)ನನಗೆ ಕರೆ ಮಾಡಿದ್ದು ನಿಜ. ಆದರೆ ರಾಜಕೀಯ ವಿಚಾರವಾಗಿ ಏನನ್ನೂ ಮಾತನಾಡಿಲ್ಲ ಅಂತಾ ಆನಂದ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News