ನಾನು ಬೇಗ್‍ರನ್ನು ಕಾಂಗ್ರೆಸ್ಸಿನಿಂದ ಅಮಾನತು ಮಾಡಿಲ್ಲ: ಸಿದ್ದರಾಮಯ್ಯ

ರೋಷನ್​ ಬೇಗ್​ರನ್ನು ಅಮಾನತು ಮಾಡಿರುವುದು ಕಾಂಗ್ರೆಸ್ ಪಕ್ಷ. ನಾನು ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿಲ್ಲ ಎಂದು ರೋಷನ್​ ಬೇಗ್​ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Last Updated : Jun 19, 2019, 04:37 PM IST
ನಾನು ಬೇಗ್‍ರನ್ನು ಕಾಂಗ್ರೆಸ್ಸಿನಿಂದ ಅಮಾನತು ಮಾಡಿಲ್ಲ: ಸಿದ್ದರಾಮಯ್ಯ title=

ನವದೆಹಲಿ: ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ದೆಹಲಿಗೆ ಆಗಮಿಸಿರುವ ಸಿದ್ದರಾಮಯ್ಯ ಅವರು, ರೋಷನ್​ ಬೇಗ್​ರನ್ನು ಅಮಾನತು ಮಾಡಿರುವುದು ಕಾಂಗ್ರೆಸ್ ಪಕ್ಷ. ನಾನು ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿಲ್ಲ ಎಂದು ರೋಷನ್​ ಬೇಗ್​ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಇದೇ ವೇಳೆ ನಾನು ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿಲ್ಲ, ಇಂಡಿಯನ್ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಎಂದು ಕಾಂಗ್ರೆಸ್ ಪಕ್ಷವನ್ನು ವಿಭಜಿಸಿ ಹೇಳಿಕೆ ನೀಡಿದ್ದ ರೋಷನ್ ಬೇಗ್ ಅವರಿಗೆ ಅವರದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, "ನಾನು ಸಿದ್ದರಾಮಯ್ಯ ಪಕ್ಷದಲ್ಲಿಲ್ಲ, ಇಂಡಿಯನ್ ಕಾಂಗ್ರೆಸ್ ನಲ್ಲೆ ನಾವೆಲ್ಲಾ ಇದ್ದೇವೆ. ಆದರೆ ರೋಷನ್ ಬೇಗ್ ಎಲ್ಲಿದ್ದಾರೋ ಗೊತ್ತಿಲ್ಲ" ಎಂದರು.

ಜೆಡಿಎಸ್ ನಾಯಕ ವಿಶ್ವನಾಥ್ ಅವರ ಹೇಳಿಕೆ ಬಗ್ಗೆ ಮಾತನಾಡಿ, ಜಿಂದಾಲ್ ಪ್ರಕರಣದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಿ. ನಾನೇಕೆ ಮಾತನಾಡಬೇಕು? ನನ್ನ ಹೆಸರನ್ನು ಏಕೆ ಪ್ರಸ್ತಾಪಿಸುತ್ತಾರೆ? ನಾನು ಜಾರ್ಜ್ ಜೊತೆ ಮಾತನಾಡಿ ಪರಿಶೀಲಿಸುವಂತೆ ಹೇಳಿದ್ದೇನೆ ಎಂದು ಕಿಡಿಕಾರಿದರು.

Trending News