ತಾಂತ್ರಿಕ ದೋಷ; ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕ್ಯಾಪ್ಟರ್

ಮೈಸೂರು ದಸರಾಕ್ಕಾಗಿ ನಿಯೋಜನೆಗೊಂಡಿದ್ದ ಐಎಎಫ್ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ಬಾನಂಗಳದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.

Last Updated : Oct 2, 2019, 06:55 PM IST
ತಾಂತ್ರಿಕ ದೋಷ; ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕ್ಯಾಪ್ಟರ್ title=

ಬೆಂಗಳೂರು: ಭಾರತೀಯ ವಾಯುಪಡೆಯ (ಐಎಎಫ್) ಎಂಐ 17 ಹೆಲಿಕಾಪ್ಟರ್ ಬುಧವಾರ ಕರ್ನಾಟಕದ ಮಂಡ್ಯ ಜಿಲ್ಲೆಯ ಚನ್ನಹಳ್ಳಿ ಬೋರೆ ಗ್ರಾಮದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.

ಮೈಸೂರು ದಸರಾಕ್ಕಾಗಿ ನಿಯೋಜನೆಗೊಂಡಿದ್ದ ಐಎಎಫ್ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ಬಾನಂಗಳದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲೆಟ್‍ಗಳು ತಕ್ಷಣ ಚನ್ನಹಳ್ಳಿ ಬೋರೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಸೇಫ್ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ದೇನಾ ಹೆಲಿಕ್ಯಾಪ್ಟರ್ ಗ್ರಾಮದಲ್ಲಿ ಬಂದಿಳಿದಿದ್ದು ಕಂಡು ಜನರೆಲ್ಲಾ ನೋಡಲು ಮುಗಿಬಿದ್ದರು. ಕೆಲ ಸಮಯದ ಬಳಿಕ ಪೋಲೀಸರ ಸಹಾಯದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು. 

Trending News