ವಿಜಯಪುರ: ಬಿಜೆಪಿ ನಾಯಕ ಮತ್ತು ಶಾಸಕ ಈಗ ಭಾರಿ ವಿವಾದ ಹೇಳಿಕೆಯ ಮೂಲಕ ಸುದ್ದಿಯಲ್ಲಿದ್ದಾರೆ.
ಕಾರ್ಗಿಲ್ ದಿನದ ಕಾರ್ಯಕ್ರಮದಂದು ಮಾತನಾಡುತ್ತಾ " ನಮ್ಮ ದೇಶದಲ್ಲಿರುವ ಕೆಲ ಬುದ್ಧಿ ಜೀವಿಗಳಿಂದ ಈ ದೇಶ ಹಾಳಾಗುತ್ತಿದೆ. ಅವರು ಪಾಕ್‌ನಂತೆ ಅಪಾಯಕಾರಿಯಾಗಿದ್ದಾರೆ. ನಾನೇನಾದರೂ ಗೃಹ ಮಂತ್ರಿಯಾಗಿದ್ದರೆ ಅವರನ್ನು ಗುಂಡಿಕ್ಕಿ ಕೊಲ್ಲಲು ಆದೇಶಿಸುತ್ತಿದ್ದೆ" ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ತಮ್ಮ ಭಾಷಣದಲ್ಲಿ ಬುದ್ದಿ ಜೀವಿಗಳನ್ನು ದೇಶದ್ರೋಹಿಗಳೆಂದು ಅವರು ವಾಖ್ಯಾನಿಸಿದ್ದಾರೆ.ಈ ಹಿಂದೆ ಯತ್ನಾಳ ಮುಸ್ಲಿಮರಿಗೆ ಸಹಾಯ ಮಾಡಬೇಡಿ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ 1994ರಿಂದ 1999ರಲ್ಲಿ ಶಾಸಕರಾಗಿದ್ದರು ಅಲ್ಲದೆ 1999 ಮತ್ತು 2009ರ ಅವಧಿಯಲ್ಲಿ ಬಿಜಾಪುರದ ಸಂಸದರಾಗಿ ಅವರು ಕಾರ್ಯನಿವಹಿಸಿದ್ದರು.
ವಾಜಪೇಯಿ ಸರ್ಕಾರದಲ್ಲಿ ಯತ್ನಾಳ ಕೇಂದ್ರ ಮಂತ್ರಿಯಾಗಿ 2002 ರಿಂದ 2004 ರ ವರೆಗೆ ಕಾರ್ಯ ನಿರ್ವಹಿಸಿದ್ದರು.2010 ರಲ್ಲಿ ಬಿಜೆಪಿಯನ್ನು ತೊರೆದಿದ್ದ ಯತ್ನಾಳ್ ಮುಂದೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.ಆದರೆ ಕಾಲಾಂತರದಲ್ಲಿ 2013ರಲ್ಲಿ ಬಿಜೆಪಿಗೆ ಮರಳಿದ್ದರು.
ಈಗ ರಾಜ್ಯದಲ್ಲಿ ಯತ್ನಾಳ್ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.