ಮಾಸ್ಕ್ ನಿಯಮ ಪಾಲಿಸದಿದ್ರೆ ಮುಂದಿನ ಹಂತ ದಂಡ ಪ್ರಯೋಗ: ಬಿಬಿಎಂಪಿ

ಜನರು ನಿಯಮ ಪಾಲಿಸದಿದ್ರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಅನ್ನುವ ಮೂಲಕ ಮಾಸ್ಕ್ ದಂಡ ಮತ್ತೆ ಜಾರಿಗೊಳಿಸಬೇಕಾಗುತ್ತದೆ ಎಂಬುದನ್ನು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ. 

Written by - Sowmyashree Marnad | Edited by - Chetana Devarmani | Last Updated : Apr 26, 2022, 04:42 PM IST
  • ಕೊರೊನಾ ನಾಲ್ಕನೇ ಅಲೆಯ ಭೀತಿ
  • ಮಾಸ್ಕ್ ನಿಯಮ ಪಾಲಿಸದಿದ್ರೆ ಮುಂದಿನ ಹಂತ ದಂಡ ಪ್ರಯೋಗ
  • ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಹೇಳಿಕೆ
ಮಾಸ್ಕ್ ನಿಯಮ ಪಾಲಿಸದಿದ್ರೆ ಮುಂದಿನ ಹಂತ ದಂಡ ಪ್ರಯೋಗ: ಬಿಬಿಎಂಪಿ title=
ಕೊರೊನಾ

ಬೆಂಗಳೂರು: ಬೆಂಗಳೂರಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಮಾಸ್ಕ್ ಧರಿಸುವುದು ಸರ್ಕಾರ ಕಡ್ಡಾಯಗೊಳಿಸಿದೆ. ಮಾಸ್ಕ್ ಹಾಕುವಂತೆ ಮಾರ್ಷಲ್ಸ್ ಮೂಲಕ ಜನಜಾಗೃತಿ ಮೂಡಿಸಲಾಗುವುದು. ಜನರು ನಿಯಮ ಪಾಲಿಸದಿದ್ರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಅನ್ನುವ ಮೂಲಕ ಮಾಸ್ಕ್ ದಂಡ ಮತ್ತೆ ಜಾರಿಗೊಳಿಸಬೇಕಾಗುತ್ತದೆ ಎಂಬುದನ್ನು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ. 

ಇದನ್ನೂ ಓದಿ: ‘777 ಚಾರ್ಲಿ’ ಡಿಜಿಟಲ್‌ ರೈಟ್‌ ಪಡೆದ ಕಲರ್ಸ್‌ ಕನ್ನಡ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡೊದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ಮುಖ್ಯ ಅಂಶಗಳಿಗೆ ಹೆಚ್ಚು ಗಮನವಹಿಸಲಾಗುತ್ತದೆ. ಟೆಸ್ಟಿಂಗ್ ಹೆಚ್ಚಳ ಹಾಗೂ ಲಸಿಕೆ ಎಲ್ಲರೂ ಪಡೆಯಬೇಕೆಂದು ಕರೆ ಮಾಡಿ ತಿಳಿಸಲಾಗ್ತಿದೆ. 60 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಅಷ್ಟೇ ಅಲ್ಲ ಬೂಸ್ಟರ್ ಡೋಸ್ ಕೂಡಾ ಪಡೆಯಬೇಕು. ಈವರೆಗೆ ನಗರದಲ್ಲಿ 3 ಲಕ್ಷ ಮಂದಿ ಎರಡನೇ ಡೋಸ್ ಅನ್ನೇ ಪಡೆದಿಲ್ಲ ಎಂದರು. 

ಡಯಾಬಿಟಿಸ್, ಕ್ಯಾನ್ಸರ್ ಮೊದಲಾದ ಅನ್ಯ ಖಾಯಿಲೆ ಇರುವವರು ಹಾಗೂ ಲಸಿಕೆ ಪಡೆಯದವರೇ ಕೋವಿಡ್ ನಾಲ್ಕನೇ ಅಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿಶೇಷ ಆಯುಕ್ತರು ತಿಳಿಸಿದರು. 

ನಗರದಲ್ಲಿ ಪ್ರತೀದಿನ ಸರಾಸರಿ 4 ಸಾವಿರ ಟೆಸ್ಟಿಂಗ್ ಆಗುತ್ತಿದೆ . ಪ್ರತಿನಿತ್ಯ 80-100 ಪ್ರಕರಣಗಳು ದೃಢಪಡುತ್ತಿವೆ. ಬೆಂಗಳೂರಿನ ಪೂರ್ವ ಹಾಗೂ ಮಹದೇವಪುರ ವಲಯದಲ್ಲಿ ಹೆಚ್ಚಾಗುತ್ತಿವೆ, ಹೆಚ್ಚಾಗಿ ಸೋಂಕಿತರಲ್ಲಿ ಸೌಮ್ಯ ಗುಣಲಕ್ಷಣಗಳು ಕಂಡುಬರುತ್ತಿವೆ, ಆಸ್ಪತ್ರೆ ದಾಖಲೀಕರಣ ಸದ್ಯಕ್ಕೆ ಕಡಿಮೆ ಇದೆ ಎಂದರು. ಇದರ ಜೊತೆ ಚರಂಡಿಯ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಕೋವಿಡ್ ಪರೀಕ್ಷೆ ಮಾಡುವುದರ ಮೂಲಕ ಯಾವ ಪ್ರದೇಶದಲ್ಲಿ ಕೋವಿಡ್ ಜಾಸ್ತಿ ಇದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು. 

ಇದನ್ನೂ ಓದಿ: Arecanut Price: ಮತ್ತೆ ಭರ್ಜರಿ ಏರಿಕೆ ಕಂಡ ಅಡಿಕೆ ಧಾರಣೆ

ನಾಲ್ಕನೇ ಅಲೆ ಮುನ್ನೆಚ್ಚರಿಕೆ ಕೈಗೊಳ್ಳಲು ಪಾಲಿಕೆಗೆ ಸಿಬ್ಬಂದಿಗಳ ಕೊರತೆ ಉಂಟಾಗಲಿದೆ. ಹೆಚ್ಚು ಸಿಬ್ಬಂದಿಗಳು ಬೇಕಾಗಿದೆ. ಟ್ರಯಾಜಿಂಗ್ ಮೂಲಕ ಮನೆಗೆ ಹೋಗಿ ಟೆಸ್ಟ್ ಮಾಡಲು, ಸ್ಯಾಂಪಲ್ ಸಂಗ್ರಹಕ್ಕೆ, ಲಸಿಕೆ ವಿತರಣೆಗೆ ಹೆಚ್ಚು ಸಿಬ್ಬಂದಿ ಬೇಕಾಗಿದೆ ಎಂದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News