'ಚುನಾವಣಾ ಆಯೋಗಕ್ಕೆ ಸ್ವಾಭಿಮಾನ, ಸಂವಿಧಾನದ ಬಗ್ಗೆ ಕಿಂಚಿತ್ತು ಕಾಳಜಿ ಇದ್ದರೆ ಹಗಲು ದರೋಡೆಗೆ ಕಡಿವಾಣ ಹಾಕಬೇಕು'

ಚುನಾವಣಾ ಆಯೋಗಕ್ಕೆ ಸ್ವಾಭಿಮಾನ, ಸಂವಿಧಾನದ ಬಗ್ಗೆ ಕಿಂಚಿತ್ತು ಕಾಳಜಿ ಇದ್ದರೆ ಹಗಲು ದರೋಡೆಗೆ ಕಡಿವಾಣ ಹಾಕಬೇಕು ಎಂದು ಸಚಿವ ಕೃಷ್ಣಭೈರೇಗೌಡ ಒತ್ತಾಯಿಸಿದ್ದಾರೆ.

Written by - Manjunath N | Last Updated : Apr 21, 2024, 10:07 PM IST
  • ಚುನಾವಣಾ ಅಧಿಕಾರಿಗಳಿಗೆ ನಿಷ್ಪಕ್ಷಪಾತ ಚುನಾವಣೆ ಮಾಡುವ ಉದ್ದೇಶ ಇದ್ದರೆ, ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪರವಾಗಿ ಆಗ್ರಹಿಸುತ್ತೇನೆ.
  • ಇಲ್ಲದಿದ್ದರೆ ಇವರೇ ತೋರಿಸಿಕೊಟ್ಟ ದಾರಿಯಲ್ಲಿ ನಾಳೆ ಹಣದ ಹೊಳೆ ಹರಿಯುವ ಸಾಧ್ಯತೆ ಇದೆ.
  • ಚುನಾವಣಾ ಬಾಂಡ್ ಹಗರಣದ ಮೂಲಕ ಅಕ್ರ ಮಾಡಿದವರು ಈಗ ಕಪ್ಪು ಹಣವನ್ನು ಕಾನೂನು ಪ್ರಕಾರವಾಗಿ ಮಾಡುವ ಹೊಸ ದಾರಿಯನ್ನು ತೋರಿಸಿಕೊಟ್ಟಿದ್ದಾರೆ.
'ಚುನಾವಣಾ ಆಯೋಗಕ್ಕೆ ಸ್ವಾಭಿಮಾನ, ಸಂವಿಧಾನದ ಬಗ್ಗೆ ಕಿಂಚಿತ್ತು ಕಾಳಜಿ ಇದ್ದರೆ ಹಗಲು ದರೋಡೆಗೆ ಕಡಿವಾಣ ಹಾಕಬೇಕು' title=

ಬೆಂಗಳೂರು: ಚುನಾವಣಾ ಆಯೋಗಕ್ಕೆ ಸ್ವಾಭಿಮಾನ, ಸಂವಿಧಾನದ ಬಗ್ಗೆ ಕಿಂಚಿತ್ತು ಕಾಳಜಿ ಇದ್ದರೆ ಹಗಲು ದರೋಡೆಗೆ ಕಡಿವಾಣ ಹಾಕಬೇಕು ಎಂದು ಸಚಿವ ಕೃಷ್ಣಭೈರೇಗೌಡ ಒತ್ತಾಯಿಸಿದ್ದಾರೆ.

ಅವರು ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ನಿನ್ನೆ ಬಿಜೆಪಿಗೆ ಸೇರಿದ 2 ಕೋಟಿ ನಗದನ್ನು ಚುನಾವಣೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಾಟನ್ ಪೇಟೆ ಚೆಕ್ ಪೋಸಟ್ ನಲ್ಲಿ ಸೀಜ್ ಮಾಡಲಾಗಿದೆ.

ಇದನ್ನು ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಲಾಗಿದೆ. ಈ ಸಂದರ್ಭದಲ್ಲಿ ಆಸಕ್ತಿ ತೋರಿದ ಅಧಿಕಾರಿಗಳು ಶರವೇಗದಲ್ಲಿ ಮಾ.22ರಂದು ಕೆನರಾ ಬ್ಯಾಂಕ್ ನಿಂದ 5 ಕೋಟಿ ಹಣ ಪಡೆದಿದ್ದು, ಅಲ್ಲಿಂದ ಇಲ್ಲಿಯವೆರೂ ಒಂದು ರೂಪಾಯಿಯೂ ಖರ್ಚು ಮಾಡಿಲ್ಲ. ಮೋದಿ, ಅಮಿತ್ ಶಾ ಬಂದು ಹೋಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದ್ದರೂ ಬಿಜೆಪಿಯ ಈ 5 ಕೋಟಿಯ ಹಣದಲ್ಲಿ 1 ರೂಪಾಯಿಯೂ ಖರ್ಚಾಗಿಲ್ಲ. ಇದರಲ್ಲಿ 2 ಕೋಟಿಯನ್ನು ಮೈಸೂರು, ಚಾಮರಾಜನಗರ ಹಾಗೂ ಮಂಗಳೂರಿನಲ್ಲಿ ಚುನಾವಣಾ ಖರ್ಚಿಗೆ ರವಾನಿಸಲಾಗುತ್ತಿದೆ ಎಂದು ಬಿಜೆಪಿಯವರಿಂದ ಪತ್ರ ಬರೆಸಿಕೊಂಡಿದ್ದಾರೆ. 

ಇದನ್ನೂ ಓದಿ-IPL 2024: 'ನಿನ್ನ ಪತ್ನಿ' ಈ ಒಂದು ಉತ್ತರ ನೀಡಿ Dinesh Karthik ನನ್ನು ಸೈಲೆಂಟಾಗಿಸಿದ Virat Kohli, ವಿಡಿಯೋ ನೋಡಿ!

ಡಿಜಿಟಲ್ ಇಂಡಿಯಾ ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ, ಆರ್ ಟಿಜಿಎಸ್ ಇಲ್ಲದ ರೀತಿಯಲ್ಲಿ ಎಲ್ಲೆಡೆ ನಗದು ರೂಪದಲ್ಲೇ ರವಾನೆ ಮಾಡುತ್ತಿದ್ದಾರೆ. ಬಿಜೆಪಿಯವರು ವಸೂಲಿ ಮಾಡಿದ ಹಣವನ್ನು ಈ ಮೂರು ಕ್ಷೇತ್ರಗಳಿಗೆ ಕಳುಹಿಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರ ಕೊಟ್ಟ ಕೂಡಲೇ ಐಟಿ ಇಲಾಖೆ ಅಧಿಕಾರಿಗಳ ಉತ್ಸುಕತೆ ನೋಡಿ ಸಂತೋಷ ಪಡಬೇಕೋ, ಭ್ರಮನಿರಸನವಾಗಬೇಕೋ ಗೊತ್ತಿಲ್ಲ. ರಾತ್ರಿ 8 ಗಂಟೆ ವೇಳೆಗೆ ಈ 5 ಕೋಟಿಯಲ್ಲಿ 2 ಕೋಟಿ ಹಣ ರವಾನೆ ಮಾಡುತ್ತಿದ್ದಾರೆ ಅವರ ಹಣ ಲೆಕ್ಕ ಸರಿಯಾಗಿದೆ. ಹೀಗಾಗಿ ಆ ಹಣ ನೀಡಿ ಎಂದು ಐಟಿ ಅಧಿಕಾರಿಗಳು ಸೂಚನೆ ನೀಡುತ್ತಾರೆ.

2 ಕೋಟಿ ಹಣ ವಶಪಡಿಸಿಕೊಂಡ ನಂತರ ಅದನ್ನು ವಾಪಸ್ ನೀಡುವಂತೆ ಐಟಿ ಅಧಿಕಾರಿಗಳೇ ಸೂಚಿಸಿರುವ ಘಟನೆ ನೋಡಿದರೆ ನಾವು ಯಾವ ವ್ಯವಸ್ಥೆಯಲ್ಲಿದ್ದೇವೆ? ನಾನು 7 ಬಾರಿ ಚುನಾವಣೆ ಅಭ್ಯರ್ಥಿಯಾಗಿದ್ದೇನೆ. ನಾನು ಪ್ರತಿ ಬಾರಿ ಹಣ ರವಾನೆ ಮಾಡುವಾಗ ಪ್ರತಿ ರೂಪಾಯಿಗೂ ಲೆಕ್ಕ ನೀಡಬೇಕು. ಖಾತೆ ಮೂಲಕವೇ ಎಲ್ಲವನ್ನು ನಡೆಸಬೇಕು. 50 ಸಾವಿರಕ್ಕಿಂತ ಹೆಚ್ಚಿನ ಹಣ ನಗದು ರೂಪದಲ್ಲಿ ವರ್ಗಾವಣೆ ಆಗಬಾರದು ಎಂದು ದೇಶದ ಕಾನೂನು ಹೇಳುತ್ತದೆ. ಚುನಾವಣಾ ನೀತಿ ಸಂಹಿತೆ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚಿನ ನಗದು ಇರಬಾರದು ಎಂದು ಹೇಳುತ್ತದೆ. ಆದರೆ ಇಲ್ಲಿ 2 ಕೋಟಿಗೆ ಕ್ಲೀನ್ ಚಿಟ್ ನೀಡಿ, ವಾಪಸ್ ನೀಡುವಂತೆ ಆದೇಶ ಮಾಡಲಾಗಿದೆ. ಈ ಚುನಾವಣೆ ಪ್ರಜಾಪ್ರಭುತ್ವಕ್ಕಾಗಿ ಚುನಾವಣೆ ಮಾಡುತ್ತಿದ್ದೇವಾ? ಇದು ಇಡೀ ವ್ಯವಸ್ಥೆ ಮೇಲೆ ನಡೆಯುತ್ತಿರುವ ಸರ್ಜಿಕಲ್ ದಾಳಿಯಾಗಿದೆ ಎಂದು ಕಿಡಿ ಕಾರಿದರು.

ಕಾನೂನಿಗೆ ತಿರುಮಂತ್ರಿ ಹಾಕಿ, ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಎಳ್ಳು ನೀರು ಬಿಟ್ಟು ಚುನಾವಣೆ ನಡೆಸಿದರೆ ಇದನ್ನು ಪ್ರಜಾಪ್ರಭುತ್ವ ಎಂದು ಕರೆಯಬೇಕಾ? ಕೆಲವು ಅದಿಕಾರಿಗಳು ಸ್ವಾಭಿಮಾನ ಬಿಟ್ಟು ದೇಶದ ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿ ಅದೇ ಸಂವಿಧಾನಕ್ಕೆ ಕೊಡಲಿ ಏಟು ಹಾಕುವಂತೆ ಕೋಟ್ಯಂತರ ರೂಪಾಯಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಇದು ಅಕ್ರಮ ಹಣಕಾಸು ವ್ಯವಹಾರ ಹಾಗೂ ಕಪ್ಪು ಹಣವನ್ನು ಬಿಳಿಯಾಗಿಸುವ ಕೆಲಸಕ್ಕೆ ಅಧಿಕಾರಿಗಳು ಶಾಮೀಲಾಗಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಇನ್ನುಮುಂದೆ ಕೆಪಿಸಿಸಿಯಿಂದ ಒಂದು ಕೋಟಿ ಡ್ರಾ ಮಾಡಿ ಇಟ್ಟುಕೊಳ್ಳುತ್ತೇವೆ. ನಮ್ಮ ಪಕ್ಷದವರ ಹಣ ಎಳ್ಲೆ ಸಿಕ್ಕರೂ ನಾವು ಇದೇ ರೀತಿಯ ಪತ್ರವನ್ನು ರವಾನಿಸುತ್ತೇವೆ. ಆ ಹಣಕ್ಕೆ ನೀವು ಕ್ಲೀನ್ ಚಿಟ್ ಕೊಟ್ಟು ವಾಪಸ್ ನೀಡುತ್ತೀರಾ?  ಎಂದು ಪ್ರಶ್ನಿಸಿದರು.

ಇದನ್ನೂ ಓದಿ-ʼಈʼ ಕಾರಣಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?

ಮಾ.27ರಂದು ಡ್ರಾ ಮಾಡಿ ಏ.21ರವರೆಗೆ ಖರ್ಚೆ ಆಗಿಲ್ಲ ಎಂದು ಗೋಲ್ಮಾಲ್ ಮಾಡಿದರೆ, ಇದೇ ಕಾರ್ಯವಿಧಾನವನ್ನು ನಾವು ಅಳವಡಿಸಿಕೊಂಡರೆ, ಅಲ್ಲಿಗೆ ಎಲ್ಲವೂ ಸರಿಯಾಗುತ್ತಾ? ಈಗಾಗಲೇ ವಶಪಡಿಸಿಕೊಂಡಿರುವ ಹಣವನ್ನು ಇಂತಹ ದಾಖಲೆ ಕೊಟ್ಟರೆ ವಾಪಸ್ ನೀಡುತ್ತಾರಾ? ಈ ರೀತಿ ವಶಪಡಿಸಿಕೊಳ್ಳಲಾದ ಹಣವನ್ನು 4 ತಾಸಿನ ಒಳಗಾಗಿ ಶರವೇಗದಲ್ಲಿ ವಾಪಸ್ ಕೊಡಿಸುವಷ್ಟು ಕಾರ್ಯಕ್ಷಮತೆ ಎಲ್ಲಾ ಕ್ಷೇತ್ರಗಳಲ್ಲೂ ತೋರಿಸುತ್ತೀರಾ? ಇದು ಕಾನೂನು ಬಾಹೀರ ಅಕ್ರಮ ಹಣವ್ಯವಹಾರವನ್ನು ಕಾನೂನು ಪ್ರಕಾರ ಮಾಡುವ ವಿಧಾನವಲ್ಲವೇ? ಈಮೂಲಕ ದೇಶದಲ್ಲಿ ಹೊಸ ಮನಿ ಲಾಂಡರಿಂಗ್ ವ್ಯವಸ್ಥೆ ಪರಿಚಯಿಸುತ್ತಿದ್ದಾರಾ? ಇದೇನಾ ಪಾರಕದರ್ಶಕ, ನಿಷ್ಪಕ್ಷಪಾತ ಚುನಾವಣೆ? ಎಂದು ಐಟಿ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಕೇಳಬಯಸುತ್ತೇನೆ. ಇದು ಇಡೀ ದೇಶ ಹಾಗೂ ವ್ಯವಸ್ಥೆಗೆ ಅಪಮಾನ ತರುವಂತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಚುನಾವಣಾ ಅಧಿಕಾರಿಗಳಿಗೆ ನಿಷ್ಪಕ್ಷಪಾತ ಚುನಾವಣೆ ಮಾಡುವ ಉದ್ದೇಶ ಇದ್ದರೆ, ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪರವಾಗಿ ಆಗ್ರಹಿಸುತ್ತೇನೆ. ಇಲ್ಲದಿದ್ದರೆ ಇವರೇ ತೋರಿಸಿಕೊಟ್ಟ ದಾರಿಯಲ್ಲಿ ನಾಳೆ ಹಣದ ಹೊಳೆ ಹರಿಯುವ ಸಾಧ್ಯತೆ ಇದೆ. ಚುನಾವಣಾ ಬಾಂಡ್ ಹಗರಣದ ಮೂಲಕ ಅಕ್ರ ಮಾಡಿದವರು ಈಗ ಕಪ್ಪು ಹಣವನ್ನು ಕಾನೂನು ಪ್ರಕಾರವಾಗಿ ಮಾಡುವ ಹೊಸ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. 

ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಈಗಾಗಲೇ 57 ಲಕ್ಷ ಖರ್ಚಾಗಿದೆ ಎಂದು ಚುನಾವಣಾ ಆಯೋಗಕ್ಕೆ ಲೆಕ್ಕ ನೀಡಿದ್ದಾರೆ. ಮೈಸೂರಿನಲ್ಲಿ 70 ಲಕ್ಷ ಹಾಗೂ ಮಂಗಳೂರಿನಲ್ಲೂ ಇದೇ ರೀತಿ ಬಿಜೆಪಿ ಅಭ್ಯರ್ಥಿಗಳು 50 ಲಕ್ಷ ಖರ್ಚು ಮಾಡಿದ್ದರೆ, ಈಗ ಅಲ್ಲಿಗೆ 2 ಕೋಟಿ ಸೇರಿದರೆ ಚುನಾವಣಾ ಖರ್ಚಿನ ಮಿತಿ ಮೀರುವುದಿಲ್ಲವೇ? ಈ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ಮಾಡಿದರಾ?   ಎಂದು ಅವರು ಪ್ರಶ್ನಿಸಿದರು. 

ಇನ್ನಾದರೂ ಚುನಾವಣಾ ಆಯೋಗ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಿ, ಮುಂದೆ ಆಗಬಹುದಾದ ಅಕ್ರಮಗಳನ್ನು ಕಡಿವಾಣ ಹಾಕುವ ಕೆಲಸ ಮಾಡಬೇಕು. ಇಂತಹ ತಪ್ಪು ಯಾರೇ ಮಾಡಿದರೂ ತಪ್ಪೇ. ಇಂದು ಇವರು ಮಾಡಿದ್ದು ಸರಿ ಎನ್ನುವುದಾದರೆ, ನಾಳೆ ಕಾಂಗ್ರೆಸ್ ನವರು ಈ ರೀತಿ ಮಾಡಬಹುದಾ? ಕಾನೂನಿಗೆ ಅಪಚಾರ ಮಾಡಬಹುದಾ? ಚುನಾವಣಾ ಆಯೋಗಕ್ಕೆ ಸ್ವಾಭಿಮಾನ, ಸಂವಿಧಾನದ ಬಗ್ಗೆ ಕಿಂಚಿತ್ತು ಕಾಳಜಿ ಇದ್ದರೆ ಇಂತಹ ಹಗಲು ದರೋಡೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News