ಬೆಂಗಳೂರು: ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಉಂಟಾಗಿರುವ ಘರ್ಷಣೆಯಲ್ಲಿ ರಾಜಕೀಯ ಮಾಡುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ (Dineah Gundurao) ತರಾಟೆಗೆ ತೆಗೆದುಕೊಂಡಿದ್ದಾರೆ. ಶವದ ಮೇಲೆ ರಾಜಕಾರಣ ಮಾಡುವುದು ಬಿಜೆಪಿಯ ಚಾಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಫೇಸ್ ಬುಕ್ ಗೆ ಹಾಕಿರುವ ಫೋಸ್ಟ್ ಖಂಡಿನೀಯ. ಯಾವುದೇ ಧರ್ಮದವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಬಾರದು. ಪೊಲೀಸರು ಮೊದಲೇ ದೂರು ತೆಗೆದುಕೊಂಡಿದ್ದರೆ ಪ್ರಕರಣ ಈ ರೀತಿ ತಿರುವು ಪಡೆದುಕೊಳ್ಳುತ್ತಿರಲಿಲ್ಲ. ಆದರೂ ಜನರು ಕಾನೂನುನ್ನು ಕೈಗೆತ್ತಿಕೊಂಡಿರುವುದು ಸರಿಯಲ್ಲ. ಗಲಾಭೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಶಾಸಕನ ಮನೆ ಮೇಲೆ ಕಲ್ಲು ತೂರಾಟ, ಪೊಲೀಸ್ ಗುಂಡೇಟಿಗೆ ಇಬ್ಬರು ಬಲಿ
ಬಿಜೆಪಿ ನಾಯಕರಿಗೆ ಶವದ ಮೇಲೆ ರಾಜಕಾರಣ ಮಾಡುತ್ತಾರೆ. ಭಜರಂಗದಳ ಮತ್ತು ಆರ್ ಎಸ್ಎಸ್ (RSS) ಸಂಘಟನೆಯವರು ಇಂಥ ಎಷ್ಟು ಘಟನೆ ಮಾಡಿಲ್ಲ ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್, ಬಿ.ಎಲ್. ಸಂತೋಷ್ ಉನ್ನತ ಸ್ಥಾನದಲ್ಲಿ ಇದ್ದುಕೊಂಡು ಕೋಮು ಪ್ರಚೋದಿಸುವಂತಹ ರೀತಿ ಮಾತನಾಡುವುದು ಸರಿಯಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ರೀತಿ ಹೇಳಿಕೆ ಕೊಡುತ್ತಾರೆ. ಬಿ.ಎಲ್. ಸಂತೋಷ್ ಮತ್ತೊಂದು ರೀತಿಯ ಹೇಳಿಕೆ ಕೊಡುತ್ತಾರೆ. ಸಂತೋಷ್ ಅವರದು ಪ್ರಚೋದನೆ ನೀಡುವ ಕೆಲಸ ಎಂದು ಕಿಡಿಕಾರಿದರು.
ಬೆಂಕಿ ಹಚ್ಚುವುದು ಸುಲಭ, ಶಮನ ಮಾಡುವುದು ಕಷ್ಟ. ಯಾವುದೇ ಸಂಘಟನೆಯವರು ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಿ. ಹಿಂದು ಮುಸ್ಲಿಂ ಎನ್ನುವ ಭೇದಭಾವ ಇರಬಾರದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yadiyurappa) ಮತ್ತು ಗೃಹ ಸಚಿವ ಬಸವರಾಜ ಬೊಮ್ಮಯಿ ಮೇಲೆ ನನಗೆ ನಂಬಿಕೆ ಇದೆ. ಅವರು ಹೊರಗಡೆ ಕ್ರಮದ ಬಗ್ಗೆ ಮಾತನಾಡಿ ಒಳಗೆ ಕೋಮು ಸಂಘರ್ಷಕ್ಕೆ ಕುಮ್ಮಕ್ಕು ಕೊಡುವ ಕೆಲಸ ಮಾಡಬಾರದು ಎಂದಹ ಶಾಸಕ ದಿನೇಶ್ ಗುಂಡೂರಾವ್ ಒತ್ತಾಯಿಸಿದರು.
ಕೆಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗಲಭೆಗೆ ಪ್ರಚೋದನೆ ಹಿನ್ನಲೆಯಲ್ಲಿ SDPI ಮುಖಂಡನ ಬಂಧನ!
ನಿನ್ನೆ ನಡೆದಿರುವ ಘಟನೆ ಬಗ್ಗೆ ನಾವೆಲ್ಲರೂ ಖಂಡಿಸುತ್ತೇವೆ. ಯಾರೇ ತಪ್ಪು ಮಾಡಿದ್ರೂ ಅವರ ವಿರುದ್ಧ ಕ್ರಮ ತೆಗದುಕೊಳ್ಳಬೇಕು. ನಿನ್ನೆ ಠಾಣೆಯ ಅಧಿಕಾರಿಗಳು ದೂರು ತೆಗದುಕೊಂಡಿದ್ದರೆ ಈ ಘಟನೆ ಆಗ್ತಿರಲಿಲ್ಲ ಅನಿಸುತ್ತೆ. ಇದರ ಹಿಂದೆ ಯಾರು ಇದ್ದಾರೆ ಅನ್ನೋದು ತನಿಖೆಯಾಗಬೇಕು. ಕಾನೂನು ಅಡಿಯಲ್ಲಿ ಕ್ರಮ ತೆಗದುಕೊಳ್ಳಬೇಕು. ಬಿಜೆಪಿಯವರು ಇದನ್ನು ರಾಜಕೀಯ ಮಾಡೋದಕ್ಕೆ ಹೋಗಿದ್ದಾರೆ. ಅವರು ಯಾವಾಗಲೂ ಹೆಣದ ಮೇಲೆ ಬಿಜೆಪಿಯವರು ರಾಜಕೀಯ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಲ್. ಸಂತೋಷ್ ಅವರಂತಹ ಹಿರಿಯ ರಾಜಕಾರಣಿಗಳು ಜಾತಿ-ಜಾತಿಗಳ ಮಧ್ಯೆ, ಧರ್ಮ- ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಸಿ.ಟಿ. ರವಿ ಈ ರೀತಿ ಹೇಳಿಕೆ ನೀಡುವುದು ಮಾಮೂಲು. ಬಿಜೆಪಿ ನಾಯಕರು ಬಾಯಿಗೆ ಬಂದಾಗೆ ಮಾತನಾಡೋದನ್ನು ಮೊದಲು ನಿಲ್ಲಿಸಲಿ. ಇದನ್ನು ಸಿಎಂ ಯಡಿಯೂರಪ್ಪ ಎಲ್ಲರಿಗೂ ಹೇಳಬೇಕು ಎಂದು ಆಗ್ರಹಿಸಿದರು.