ವರ್ಲ್ಡ್ ವೈಡ್ KGF 2 ಬಾಕ್ಸ್ ಆಫೀಸ್ ಕಲೆಕ್ಷನ್‌ ₹1200 ಕೋಟಿಗೂ ಹೆಚ್ಚು!

ಅಮೀರ್ ಖಾನ್, ದಂಗಲ್ ಮತ್ತು ರಾಜಮೌಳಿ ಬಾಹುಬಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ ಕಲೆಕ್ಷನ್‌ ನಲ್ಲಿ 1200 ರೂ. ಬಾಚಿದ ಮೂರನೇ ಭಾರತೀಯ ಸಿನಿಮಾವಾಗಿ ಕೆಜಿಎಫ್‌ 2 ಹೊರಹೊಮ್ಮಿದೆ.

Written by - Channabasava A Kashinakunti | Last Updated : May 18, 2022, 04:22 PM IST
  • ವರ್ಲ್ಡ್ ವೈಡ್ ಕೆಜಿಎಫ್ 2 ಬಾಕ್ಸ್ ಆಫೀಸ್ ಕಲೆಕ್ಷನ್ಸ್
  • ಕೆಜಿಎಫ್ 2 ಬಾಕ್ಸ್ ಆಫೀಸ್ ದಾಖಲೆಗಳು
  • ಈ ಕುರಿತು ಮಾಹಿತಿ ನೀಡಿರುವ ಟ್ರೇಡ್ ಎನಾಲಿಸ್ಟ್ ಮನೋಬಾಲಾ ವಿಜಯಬಾಲನ್
ವರ್ಲ್ಡ್ ವೈಡ್ KGF 2 ಬಾಕ್ಸ್ ಆಫೀಸ್ ಕಲೆಕ್ಷನ್‌ ₹1200 ಕೋಟಿಗೂ ಹೆಚ್ಚು! title=

ಬೆಂಗಳೂರು : ಕೆಜಿಎಫ್‌ ಚಾಪ್ಟರ್ 2 ಅದ್ಭುತ ಯಶಸ್ಸಿನ ಮೂಡ್ ನಲ್ಲಿದೆ. ಅಮೀರ್ ಖಾನ್, ದಂಗಲ್ ಮತ್ತು ರಾಜಮೌಳಿ ಬಾಹುಬಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ ಕಲೆಕ್ಷನ್‌ ನಲ್ಲಿ 1200 ರೂ. ಬಾಚಿದ ಮೂರನೇ ಭಾರತೀಯ ಸಿನಿಮಾವಾಗಿ ಕೆಜಿಎಫ್‌ 2 ಹೊರಹೊಮ್ಮಿದೆ.

ವರ್ಲ್ಡ್ ವೈಡ್ ಕೆಜಿಎಫ್ 2 ಬಾಕ್ಸ್ ಆಫೀಸ್ ಕಲೆಕ್ಷನ್ಸ್

ಈ ಕುರಿತು ಮಾಹಿತಿ ನೀಡಿರುವ ಟ್ರೇಡ್ ಎನಾಲಿಸ್ಟ್  ಮನೋಬಾಲಾ ವಿಜಯಬಾಲನ್ ಅವರು ತಮ್ಮ  ಟ್ವಿಟ್ಟರ್‌ ಖಾತೆಯಲ್ಲಿ, "#KGFCchapter2 WW ಬಾಕ್ಸ್ ಆಫೀಸ್ ನಲ್ಲಿ ಮೊದಲ ವಾರ 1 - 720.31 ಕೋಟಿ ರೂ. ಎರಡನೇ ವಾರ - 223.51 ಕೋಟಿ ರೂ. ಮೂರನೇ ವಾರ - 140.55 ಕೋಟಿ ರೂ., ನಾಲ್ಕನೇ ವಾರ - 91.26 ಕೋಟಿ ರೂ. ಮೊದಲನೇ ವಾರ - 5 ದಿನದ ಕಲೆಕ್ಷನ್, 1 ದಿನ 5.20 ಕೋಟಿ ರೂ., 2 ದಿನ -  4.34 ಕೋಟಿ ರೂ., 3 ದಿನ -  6.07 ಕೋಟಿ ರೂ., 4 ದಿನ -  9.52 ಕೋಟಿ ರೂ., 5 ದಿನ -  3.61 ಕೋಟಿ ರೂ., ಒಟ್ಟು - 1204.37 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಮೇ 20ರಿಂದ ಕ್ರೇಜಿಸ್ಟಾರ್‌ ಪುತ್ರನ ಸಿನಿಮಾ "ಪ್ರಾರಂಭ"..!

ಕೆಜಿಎಫ್ 2 ಬಾಕ್ಸ್ ಆಫೀಸ್ ದಾಖಲೆಗಳು

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾವು ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿದೆ ಮತ್ತು ಅನೇಕ ದಾಖಲೆಗಳನ್ನು ಮುರಿದಿದೆ. ಇದು ಅಮೀರ್ ಖಾನ್‌ ನಟಿಸಿರುವ ದಂಗಲ್‌ ಕಲೆಕ್ಷನ್ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಹಿಂದಿ ಸಿನಿಮಾವಾಗಿದೆ.

ಕೆಜಿಎಫ್ 2 ಸಿನಿಮಾದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಬಾಲಕೃಷ್ಣ, ಅನಂತ್ ನಾಗ್, ಮಾಳವಿಕಾ ಅವಿನಾಶ್, ಸರಣ್ ಶಕ್ತಿ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.

ಕೆಜಿಎಫ್ 2' ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ ಮತ್ತು ವಿಜಯ್ ಕಿರುಗಂದೂರು ನಿರ್ಮಿಸಿದ್ದಾರೆ. ಮೂಲತಃ ಕನ್ನಡ ಚಿತ್ರವಾದ 'ಕೆಜಿಎಫ್ 2' ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಮಾಡಲಾಗಿದೆ. ಕೆಜಿಎಫ್: ಚಾಪ್ಟರ್ 2' ಏಪ್ರಿಲ್ 14, 2022 ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು.

ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್ - 'ಕೆಜಿಎಫ್: ಚಾಪ್ಟರ್ 2' ಈಗ ಭಾರತದ ಅತ್ಯಂತ ಜನಪ್ರಿಯ OTT ಪ್ಲೇಟ್ ಫಾರ್ಮ್ ಆದ Amazon Prime ವೀಡಿಯೊದಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ : ತೆರೆ ಮೇಲೆ ಅಬ್ಬರಿಸೋಕೆ "ಗರುಡ" ರೆಡಿ: ಹಾಡಿಗೆ ಗಣ್ಯರ ಮೆಚ್ಚುಗೆ..!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News