ಬೆಂಗಳೂರು : ಪಡಿತರ ಚೀಟಿ ಹೊಂದಿರುವವರಿಗೆ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಮಹತ್ವದ ಮಾಹಿತಿ ನೀಡಿದ್ದು ರೇಷನ್ ಕಾರ್ಡ್ ಹೊಂದಿರುವವರ ಮೊಬೈಲ್ ನಂಬರ್, ಲಿಂಗ, ಸಂಬಂಧಗಳ ವಿವರಗಳ ಇ-ಕೆವೈಸಿ ಮಾಡಿಸಲು ಫೆಬ್ರವರಿ 8 ರವರೆಗೆ ಅವಕಾಶ ನೀಡಲಾಗಿದೆ. ನಿಗದಿತ ದಿನಾಂಕದ ಒಳಗೆ ಇ-ಕೆವೈಸಿ ಪೂರ್ಣಗೊಳಿಸುವಂತೆ ಸೂಚಿಸಿದೆ.
ವಾಸ್ತವವಾಗಿ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಫೆಬ್ರವರಿ 1 ರಿಂದ ಪಡಿತರ ಚೀಟಿ (Ration Card)ದಾರರಿಗೆ ಇ-ಕೆವೈಸಿ ಮತ್ತು ಇ-ಆಡಳಿತ ಇಲಾಖೆಗೆ ಪಡಿತರ ಚೀಟಿದಾರರ ವಿವರಗಳ ಸಂಗ್ರಹಣಾ ಕಾರ್ಯವನ್ನು ಆರಂಭಿಸಿದ್ದು ಇದಕ್ಕಾಗಿ ಫೆಬ್ರವರಿ 8 ರವರೆಗೆ ಅವಕಾಶ ಕಲ್ಪಸಿದೆ.
ಇದನ್ನೂ ಓದಿ - Aadhaar card ಇಲ್ಲದೆ ಸಿಗಲ್ಲ Ration-Pension! ಇಲ್ಲಿದೆ ಸತ್ಯಾಸತ್ಯತೆ
ಈ ಹಿನ್ನೆಲೆಯಲ್ಲಿ ಪಡಿತರ (Ration) ಚೀಟಿದಾರರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಹೋಗಿ ಬಾಕಿ ಇರುವ ಇ-ಕೆವೈಸಿ ನೀಡಬೇಕು ಎಂದು ಆಹಾರ ಇಲಾಖೆ ನಿರ್ದೇಶನ ನೀಡಿದೆ.
ನೀವೂ ಕೂಡ ಪಡಿತರ ಚೀಟಿ ಹೊಂದಿದ್ದರೆ ತಡಮಾಡದೆ ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಪೂರ್ಣಗೊಳಿಸಿ ಯಾವುದೇ ಅಡೆತಡೆಗಳು ಇಲ್ಲದೆ ಸರ್ಕಾರದ ಸೌಲಭ್ಯಗಳನ್ನು ಪಡೆಯಿರಿ.
ಇದನ್ನೂ ಓದಿ - ಮೃತರ ಹೆಸರಿನಲ್ಲಿ Pension, Ration ಪಡೆಯುತ್ತಿರುವವರಿಗೆ ಶಾಕ್ !
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.