ಬೆಂಗಳೂರು: ಕೇಂದ್ರದ ಕೆಲ ಜಡ ಕಾನೂನುಗಳೂ ಈ ಮ್ಯಾನ್ಯುಯೆಲ್ ಸ್ಕಾವೆಂಜಿಂಗ್ ಪದ್ದತಿಗೆ ಕೊನೆಗಾಣಿಸುವ ಕಾರ್ಯಕ್ಕೆ ಅಡ್ಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಸೆಕ್ಷನ್ 26ರನ್ವಯ ರಾಜ್ಯ ಮೇಲ್ವಿಚಾರಣ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಅವರು ,ಮಾತನಾಡುತ್ತಿದ್ದರು.
ಇದನ್ನೂ ಓದಿ: ಆದಿತ್ಯ ಎಲ್-1 ಯಶಸ್ವಿ ಉಡಾವಣೆ: ಬಾಹ್ಯಾಕಾಶದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು!
ಮ್ಯಾನ್ಯುಯೆಲ್ ಸ್ಕಾವೆಂಜಿಂಗ್ ಪದ್ದತಿಯನ್ನು ಕಾನೂನು ಬಾಹಿರಗೊಳಿಸಲಾಗಿದ್ದರೂ,ಅವರ ಗುರುತಿಸುವಿಕೆ ಹಾಗೂ ಜೀವನ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಹಾಗೂ ಪುನರ್ವಸತಿ ಒದಗಿಸದ ಕಾರಣ ಇದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಈ ಪೂರ್ಣ ವ್ಯವಸ್ಥೆಯನ್ನು ಕಾರ್ಯಸಾಧುಗೊಳಿಸಬೇಕಿರುವ ಜವಾಬ್ದಾರಿ ಹೊತ್ತವರ ತಿರಸ್ಕಾರ ಮನೋಭಾವವೋ, ಬೇಜವಾಬ್ದಾರಿತನವೋ ಅಥವಾ ಮಾನವೀಯ ಗುಣಗಳ ಅಭಾವದ ಕಾರಣವೋ, ಈ ಕೆಟ್ಟ ವ್ಯವಸ್ಥೆ ಇನ್ನೂ ಜೀವಂತವಾಗಿದೆ.ಕೇಂದ್ರದ ಕೆಲ ಜಡ ಕಾನೂನುಗಳೂ ಸಹ ಈ ವ್ಯವಸ್ಥೆ ಕೊನೆಗಾಣಿಸುವ ಕಾರ್ಯಕ್ಕೆ ತೊಡಕಾಗಿವೆ.ಈ ಹಿನ್ನಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಮ್ಯಾನ್ಯುಯೆಲ್ ಸ್ಕಾವೆಂಜರ್ ಗಳಿಗೆ ಆದ್ಯತೆಯ ಮೇರೆಗೆ ಪರ್ಯಾಯ ಜೀವನ ನಿರ್ವಹಣೆ ವ್ಯವಸ್ಥೆಗೆ ಮೊದಲು ಅವರೆಲ್ಲರ ಜೀವನಾಕಾಂಕ್ಷೆಗಳ ಗುರುತಿಸುವಿಕೆಗೆ ಸಮಿತಿ ತೀರ್ಮಾನಿಸಿದೆ. ಇದನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
ವೈಜ್ಞಾನಿಕ ಸಲಕರಣೆಗಳ ಪರಿಣಾಮಕಾರಿ ಬಳಕೆ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇಡೀ ಸಮಾಜವೇ ಈ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಕಂಡು ಜೊತೆಯಾಗಿ ಪರಿಹಾರ ಕಂಡುಕೊಳ್ಳಬೇಕಿದೆ.ಈ ಕಾರ್ಯದಲ್ಲಿ ನಮ್ಮ ಸರ್ಕಾರ ಎಲ್ಲಾ ರೀತಿಯಲ್ಲೂ ಕೆಲಸ ಮಾಡಲು ಬದ್ಧವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ