ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ಮಾಡಲು ಮುಂದಾದ ಬಿಜೆಪಿ ಸರ್ಕಾರ

ಆಗಸ್ಟ್ 28 ಕ್ಕೆ ದೊಡ್ಡಬಳ್ಳಾಪುರ ದಲ್ಲಿ ಸರ್ಕಾರದ ಸಾಧನೆಯ ಜನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Written by - Prashobh Devanahalli | Edited by - Manjunath N | Last Updated : Aug 13, 2022, 08:27 PM IST
  • ಜುಲೈ 28 ಕ್ಕೆ ಆಗಬೇಕಿದ್ದ ಜನೋತ್ಸವವನ್ನು ಅನಿವಾರ್ಯ ಕಾರಣಗಳಿಂದ ರದ್ದು ಮಾಡಲಾಗಿತ್ತು.
  • 10 -15 ದಿನಗಳಿಂದ ಈ ಭಾಗದ ಜನರ ಒತ್ತಾಯ ಹೆಚ್ಚಾಗಿದೆ.
ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ಮಾಡಲು ಮುಂದಾದ ಬಿಜೆಪಿ ಸರ್ಕಾರ    title=

ಬೆಂಗಳೂರು : ಆಗಸ್ಟ್ 28 ಕ್ಕೆ ದೊಡ್ಡಬಳ್ಳಾಪುರ ದಲ್ಲಿ ಸರ್ಕಾರದ ಸಾಧನೆಯ ಜನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದ ಬಳಿ ಮಾಧ್ಯಮವರೊಂದಿಗೆ ಮಾತನಾಡಿದರು.ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ  ನಡೆಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ : PM Narendra Modi : ಕಾಮನ್‌ವೆಲ್ತ್ ಪದಕ ವಿಜೇತರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ!

ಜುಲೈ 28 ಕ್ಕೆ ಆಗಬೇಕಿದ್ದ ಜನೋತ್ಸವವನ್ನು ಅನಿವಾರ್ಯ ಕಾರಣಗಳಿಂದ ರದ್ದು ಮಾಡಲಾಗಿತ್ತು.10 -15 ದಿನಗಳಿಂದ ಈ ಭಾಗದ  ಜನರ ಒತ್ತಾಯ ಹೆಚ್ಚಾಗಿದೆ. ಬೇರೆ ಕಡೆ ಸಮಾವೇಶ ಮಾಡಲು ಜನ ಒಪ್ಪಲಿಲ್ಲ. ನಾವು ಸಾಕಷ್ಟು ತಯಾರಿ ನಡೆಸಿದ್ದು ದೊಡ್ಡಬಳ್ಳಾಪುರ ದಿಂದಲೇ  ಜನೋತ್ಸವ ಪ್ರಾರಂಭವಾಗಬೇಕು.ಮೊದಲ ಹೆಜ್ಜೆ ಇಟ್ಟಿದ್ದೇವೆ.ಇಲ್ಲಿಂದಲೇ ಜನೋತ್ಸವ ಆರಂಭ ಆಗಲಿ ಆಗಲಿ ಎಂದು ನಮಗಿಂತಲೂ ಹೆಚ್ಚಿನ ಧೃಢ ನಿರ್ಧಾರ ಅವರದಾಗಿದೆ. ಅವರ ಉತ್ಸಾಹ ನಿರ್ಣಯಕ್ಕೆ ತಲೆಬಾಗಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.

ಇದನ್ನೂ ಓದಿ: Khadi Flags : ಪಾಲಿಸ್ಟರ್ ಧ್ವಜಗಳ ಮಧ್ಯೆ, ಮಾರುಕಟ್ಟೆಯಲ್ಲಿ ಖಾದಿ ಧ್ವಜಗಳಿಗೆ  ಭಾರಿ ಬೇಡಿಕೆ!

ಜನೋತ್ಸವದ ಬಗ್ಗೆ ಇಂದು ವರಿಷ್ಠ ರೊಂದಿಗೆ ಮಾತನಾಡಿ ತಿಳಿಸಲಾಗುವುದು ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News