Siddeshwara Swamiji: ಪಂಚಭೂತಗಳಲ್ಲಿ ಲೀನರಾದ ʻಶತಮಾನದ ಸಂತʼ

Siddeshwara Swamiji Funeral : ಆಧ್ಯಾತ್ಮಿಕ ಪ್ರವಚನಕಾರ, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಪಾರ ಭಕ್ತ ಸಮೂಹವನ್ನು ಅನಾಥರನ್ನಾಗಿಸಿ ತೆರಳಿರುವ ʻಶತಮಾನದ ಸಂತʼನ ಅಂತ್ಯಕ್ರಿಯೆ ಮುಕ್ತಾಯಗೊಂಡಿದೆ.

Written by - Chetana Devarmani | Last Updated : Jan 3, 2023, 08:53 PM IST
  • ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು
  • ಪಂಚಭೂತಗಳಲ್ಲಿ ಲೀನರಾದ ʻಶತಮಾನದ ಸಂತʼ
  • ಜ್ಞಾನಯೋಗಾಶ್ರಮದ ಜ್ಞಾನದ ಜ್ಯೋತಿ ಅಸ್ತಂಗತ
Siddeshwara Swamiji: ಪಂಚಭೂತಗಳಲ್ಲಿ ಲೀನರಾದ ʻಶತಮಾನದ ಸಂತʼ   title=
ಸಿದ್ದೇಶ್ವರ ಶ್ರೀಗಳು

ವಿಜಯಪುರ : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಅನಾರೋಗ್ಯದಿಂದಾಗಿ ತಮ್ಮ 82 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಶ್ರೀಗಳ ನಿಧನದ ಸುದ್ದಿ ಕೇಳಿ ಲಕ್ಷಾಂತರ ಭಕ್ತರು ಸಾಗರ ಅಂತಿಮ ದರ್ಶನಕ್ಕೆ ಹರಿದು ಬಂದಿತ್ತು. ಆಧ್ಯಾತ್ಮಿಕ ಪ್ರವಚನಕಾರ, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಪಾರ ಭಕ್ತ ಸಮೂಹವನ್ನು ಅನಾಥರನ್ನಾಗಿಸಿ ತೆರಳಿರುವ ʻಶತಮಾನದ ಸಂತʼನ ಅಂತ್ಯಕ್ರಿಯೆ ಮುಕ್ತಾಯಗೊಂಡಿದೆ. ನಿಸ್ವಾರ್ಥ ಸೇವೆ, ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಬದುಕಿದ ಸಾರ್ಥಕ ಜೀವಿ ಸಿದ್ಧೇಶ್ವರ ಶ್ರೀಗಳು. 

ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತ ಸರಳವಾದ ಜೀವನ ನಡೆಸಿದರು. ಅವರ ಆಚಾರ, ವಿಚಾರ, ಸರಳತೆ ಎಲ್ಲರಿಗೂ ಮಾದರಿ. ನಾಡಿನ ಮಹಾನ್ ಸಂತ, ಜಾತಿಭೇದ ಪಂತವಿಲ್ಲದೇ ಜೀವಿಸಿದವರು, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸಿದ್ದೇಶ್ವರ ಶ್ರೀಗಳು ಶೂನ್ಯದಂತೆ ಬದುಕಿ ಎಂಬ ಸಂದೇಶ ಸಾರಿದ ಯೋಗಿ ಇದೀಗ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. 

ಇದನ್ನೂ ಓದಿ : Gavisiddeshwara Swamiji : ಸಿದ್ಧೇಶ್ವರ ಶ್ರೀಗಳ ಅಗಲಿಕೆ ಸಂತಾಪ ಸೂಚಕ ಪತ್ರ ಬರೆದ ಗವಿಸಿದ್ದೇಶ್ವರ ಶ್ರೀ!

ಜ್ಞಾನಯೋಗಾಶ್ರಮದ ಜ್ಞಾನದ ಜ್ಯೋತಿಯಾಗಿದ್ದರು ಶ್ರೀ ಸಿದ್ದೇಶ್ವರ ಸ್ವಾಮೀಜಿ. ತಮ್ಮ ಅಗಲಿಕೆಯ ಮುನ್ನವೇ ಶ್ರೀಗಳು ಅಂತ್ಯಕ್ರಿಯೆ ಯಾವ ರೀತಿ ನಡೆಯಬೇಕೆಂದು ಅಭಿವಂದನ ಪತ್ರ ಬರೆದಿದ್ದು ಗಮನಾರ್ಹವಾಗಿದೆ. "ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯಿಂದ ಸ್ಪರ್ಶಿಸಿ. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸಿ. ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು" ಎಂದು ಪರಮಪೂಜ್ಯರು ಬರೆದಿಟ್ಟಿದ್ದರು. 

ವಿಜಯಪುರದ ಜ್ಞಾನಯೋಗಾಶ್ರಮದ ಆವರಣದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಡೆಯಿತು. ಚಿತೆಗೆ ಶ್ರೀ ಗಂಧದ ಕಟ್ಟಿಗೆ ಬಳಸಲಾಗಿದ್ದು, ಕಟ್ಟಿಗೆಗಳನ್ನು ಬಾಲಗೋಟೆ ಜಿಲ್ಲೆ ಜಮಖಂಡಿ ತಾಲೂಕು ಹುಲ್ಯಾಳ ಗ್ರಾಮದಲ್ಲಿರುವ ಶ್ರೀಗಳ ಶಿಷ್ಯರಾದ, ಹರ್ಷಾನಂದ ಮಹಾಸ್ವಾಮಿಜಿ ಅವರ ಶ್ರೀ ಗುರುದೇವಾಶ್ರಮದಿಂದ ತರಲಾಯಿತು. 

ಇದನ್ನೂ ಓದಿ : Siddheshwar swamiji Death : ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಕಲಾವಿದನಿಂದ ವಿಶೇಷ ಗೌರವ ಶ್ರದ್ಧಾಂಜಲಿ!

ಭಕ್ತರಾದ ವಿಜಯಪುರ ಜಿಲ್ಲೆಯ ಕೋಲ್ಲಾರ ಪಟ್ಟಣದ ಸಿದ್ದಪ್ಪ ಬಾಲಗೊಂಡ ಎಂಬುವರು ತಮ್ಮ ಹೊಲದಲ್ಲಿ ಬೆಳೆದ 5 ಕ್ವಿಂಟಾಲ್​ ಶ್ರೀ ಗಂಧದ ಮರಗಳನ್ನು ಶ್ರೀಗಳ ಅಂತ್ಯಕ್ರಿಯೆಗೆ ನೀಡಿದ್ದಾರೆ. ಬಸವನ ಬಾಗೇವಾಡಿ ಮನಗೂಳಿ ರೈತರು ಶ್ರೀಗಳ ಅಂತ್ಯಕ್ರಿಯೆಗೆ 10 Kg ಆಕಳ ತುಪ್ಪ ಕೊಟ್ಟಿದ್ದಾರೆ. ಅಲ್ಲದೇ, ಬಬಲೇಶ್ವರದ ಲಕ್ಷ್ಮೀ ಶಿರಮಗೊಂಡ ಎಂಬುವರು ಆಕಳ ಸಗಣಿಯಿಂದ ತಯಾರಿಸಿದ ಬೆರಣಿ ಕೊಟ್ಟಿದ್ದು, ಶ್ರೀಗಳ ಆಶಯದಂತೆಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಶ್ರೀಗಳನ್ನು ಪೂರ್ವ ದಿಕ್ಕಿಗೆ ತಲೆ ಮಾಡಿ ಅಗ್ನಿ ಸ್ಪರ್ಶ ಮಾಡಲಾಯಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News