ಕೂಡಲಸಂಗಮದಲ್ಲಿ ಜ್ಞಾನಜ್ಯೋತಿ ಸಿದ್ದೇಶ್ವರ ಸ್ವಾಮೀಜಿ ಚಿತಾ ಭಸ್ಮ ಲೀನ. ಜಗಜ್ಯೋತಿ ಬಸವಣ್ಣನ ಐಕ್ಯ ಸ್ಥಳದಲ್ಲಿ ಚಿತಾ ಭಸ್ಮ ವಿಸರ್ಜನೆ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯ ಆಶಯದಂತೆ ಈ ಕಾರ್ಯ ನಡೆದಿದೆ ಎಂದು ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹೇಳಿದ್ರು.
ಸಿದ್ದೇಶ್ವರ ಸ್ವಾಮೀಜಿಗಳ 3ನೇ ದಿನದ ಕಾರ್ಯ ನಡೆದಿದೆ.. ಸಕಲ ವಿಧಿವಿಧಾನಗಳ ಮೂಲಕ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮ ಸಂಗ್ರಹ ಮಾಡಲಾಗಿದೆ. ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕೈಂಕರ್ಯ ನೆರವೇರಿದೆ.
ʻಸತ್ಯವೂ ಇಲ್ಲ, ಅಸತ್ಯವೂ ಇಲ್ಲ ಸಹಜವೂ ಇಲ್ಲ, ಅಸಹಜವೂ ಇಲ್ಲ ನಾನೂ ಇಲ್ಲ, ನೀನೂ ಇಲ್ಲ. ಇಲ್ಲ,ಇಲ್ಲ ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು. ಕೆಲವು ವರ್ಷಗಳ ಹಿಂದೆಯೇ ತಮ್ಮ ಅಂತ್ಯಕ್ರಿಯೆಯ ವಿಧಿವಿಧಾನಗಳ ತಮ್ಮ ಇಚ್ಛೆಯನ್ನು ಸಿದ್ದೇಶ್ವರ ಶ್ರೀಗಳು ಸ್ಪಷ್ಟವಾಗಿ ತಿಳಿಸಿದ್ದರು.
ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ಧಾರವಾಡದಲ್ಲಿ ಕಲಾವಿದರೊಬ್ಬರು ವಿಶೇಷ ಗೌರವ ಹಾಗೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಧಾರವಾಡದ ಪರಿಸರ ಪ್ರೇಮಿ ಕಲಾವಿದ ಮಂಜುನಾಥ ಹಿರೇಮಠ ಎಂಬುವರ ಕೈಚಳಕದಲ್ಲಿ ಸಿದ್ದೇಶ್ವರ ಶ್ರೀಗಳ ಮೂರ್ತಿ ಅರಳಿದೆ.
ಕೇಂದ್ರ ಸರ್ಕಾರವು ನನ್ನನ್ನು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನನಗೆ ಸಂತಸ ತಂದಿದೆ. ಆದರೆ, ನನಗೆ ಈ ಪ್ರಶಸ್ತಿಯನ್ನು ಸ್ವೀಕರಿಸಲು ಇಷ್ಟವಿಲ್ಲ ಎಂದು ಗೌರವಯುತವಾಗಿ ಪ್ರಶಸ್ತಿಯನ್ನು ನಿರಾಕರಿಸಿ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.