ಭೂತ ಬಂಗಲೆ ಆದ ಕಲಾಸಿಪಾಳ್ಯ ಬಸ್ ಸ್ಟಾಂಡ್ : ಆರು ವರ್ಷವಾದ್ರೂ ಸಿಗ್ತಿಲ್ಲ ಉದ್ಘಾಟನೆ ಭಾಗ್ಯ

ಕಲಾಸಿಪಾಳ್ಯ ನಿಲ್ದಾಣದ ಮೂಲಕ ಪ್ರತಿ ದಿನ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ನಗರದ ಹೊರವಲಯದ ರೈತರು ಹೂವು, ಹಣ್ಣು, ತರಕಾರಿಗಳನ್ನು ಬಸ್​ಗಳಲ್ಲಿಯೇ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಟರ್ಮಿನಲ್ ಏಕಕಾಲದಲ್ಲಿ 18 ಬಿಎಂಟಿಸಿ, 6 ಕೆಎಸ್​ಆರ್​ಟಿಸಿ ಹಾಗೂ 6 ಖಾಸಗಿ ಬಸ್​ಗಳಿಗೆ ಅವಕಾಶ ಕಲ್ಪಿಸುತ್ತದೆ.  

Written by - Manjunath Hosahalli | Edited by - Manjunath N | Last Updated : Feb 15, 2023, 07:09 PM IST
  • ಕಲಾಸಿಪಾಳ್ಯ ನಿಲ್ದಾಣದ ಮೂಲಕ ಪ್ರತಿ ದಿನ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ.
  • ನಗರದ ಹೊರವಲಯದ ರೈತರು ಹೂವು, ಹಣ್ಣು, ತರಕಾರಿಗಳನ್ನು ಬಸ್​ಗಳಲ್ಲಿಯೇ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ.
  • ಟರ್ಮಿನಲ್ ಏಕಕಾಲದಲ್ಲಿ 18 ಬಿಎಂಟಿಸಿ, 6 ಕೆಎಸ್​ಆರ್​ಟಿಸಿ ಹಾಗೂ 6 ಖಾಸಗಿ ಬಸ್​ಗಳಿಗೆ ಅವಕಾಶ ಕಲ್ಪಿಸುತ್ತದೆ.
 ಭೂತ ಬಂಗಲೆ ಆದ ಕಲಾಸಿಪಾಳ್ಯ ಬಸ್ ಸ್ಟಾಂಡ್ : ಆರು ವರ್ಷವಾದ್ರೂ ಸಿಗ್ತಿಲ್ಲ ಉದ್ಘಾಟನೆ ಭಾಗ್ಯ title=

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದ ಅಷ್ಟ ದಿಕ್ಕುಗಳಿಗೂ ಸಂಪರ್ಕ ಕಲ್ಪಿಸುವುದಲ್ಲದೇ ಭಾರತದ ವಿವಿಧ ಪ್ರಮುಖ ನಗರಗಳಿಗೆ ತೆರಳಲು ಖಾಸಗಿ ಬಸ್​ಗಳ ಪ್ರದೇಶವಾಗಿರುವ ಕಲಾಪಿಪಾಳ್ಯ ಬಸ್​ ಟರ್ಮಿನಲ್ ಸಿದ್ಧಗೊಂಡು ವರ್ಷಗಳೇ ಕಳೆದಿವೆ. ಕಳೆದ ಆರು ವರ್ಷಗಳ ಹಿಂದೆ ಕಲಾಸಿಪಾಳ್ಯ ಬಸ್​ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಂಕು ಸ್ಥಾಪನೆ ನೆರವೇರಿಸಿದ್ದು, ಸಧ್ಯ ಇದು ಸಿದ್ದವಾಗಿ ಉದ್ಘಾಟನೆಯೊಂದೇ ಭಾಕಿ ಇದೆ.

ಇದನ್ನೂ ಓದಿ: ‘ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಎದ್ವಾತದ್ವಾ ಲೂಟಿ ಮಾಡಲು ಆರಂಭ ಮಾಡಿದೆ”

4.13 ಎಕರೆ ವಿಸ್ತೀರ್ಣದ 60 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ ಪೂರ್ಣವಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿರ್ಮಿಸಿರುವ ಬಹುಕಾಲದಿಂದ ಬಾಕಿ ಉಳಿದಿದ್ದ ಕಲಾಸಿಪಾಳ್ಯ ಬಸ್ ಟರ್ಮಿನಲ್ ನಿರ್ಮಾಣ ಯೋಜನೆಯು 2018ರ ಡಿಸೆಂಬರ್​ನಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ತಡವಾಗಿ ಕೊನೆಗೂ 4 ವರ್ಷದ ಬಳಿಕ ಸಿದ್ಧವಾಗಿದೆ.

ಸದ್ಯ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಅಂತಾರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್​ಗಳು ಪಕ್ಕದ ರಸ್ತೆಯಲ್ಲೇ ನಿಲುಗಡೆ ಮಾಡುತ್ತಿವೆ. 60 ಕೋಟಿ ರೂ. ಪೈಕಿ ಕೇಂದ್ರ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯವು 25 ಕೋಟಿ ರೂ.ಗಳನ್ನು ನೀಡಿದೆ. ಉಳಿದ ಹಣವನ್ನು ಬಿಎಂಟಿಸಿಯೇ ಭರಿಸಿದೆ.

ಇದನ್ನೂ ಓದಿ : ಬೆಳ್ಳಿ ಚೈನ್‌ ಗಿಫ್ಟ್‌ ಕೊಟ್ರೂ ಬಂಗಾರದ್ದು ಬೇಕು ಎಂದ ಗೆಳತಿ ಹತ್ಯೆ..!

ಕಲಾಸಿಪಾಳ್ಯ ನಿಲ್ದಾಣದ ಮೂಲಕ ಪ್ರತಿ ದಿನ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ನಗರದ ಹೊರವಲಯದ ರೈತರು ಹೂವು, ಹಣ್ಣು, ತರಕಾರಿಗಳನ್ನು ಬಸ್​ಗಳಲ್ಲಿಯೇ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಟರ್ಮಿನಲ್ ಏಕಕಾಲದಲ್ಲಿ 18 ಬಿಎಂಟಿಸಿ, 6 ಕೆಎಸ್​ಆರ್​ಟಿಸಿ ಹಾಗೂ 6 ಖಾಸಗಿ ಬಸ್​ಗಳಿಗೆ ಅವಕಾಶ ಕಲ್ಪಿಸುತ್ತದೆ.

ಇಷ್ಟೆಲ್ಲಾ ಸೌಕರ್ಯಗಳಿರುವ ಈ ನೂತನ ಬಸ್ ನಿಲ್ದಾಣ ಇದೀಗ ಹಾಳು ಕೊಂಪೆಯಾಗಿದೆ. ಸಿದ್ದವಾಗಿ ನಿಗಿನಿಗಿ ಎನ್ನಬೇಕಿದ್ದ ನಿಲ್ದಾಣದಲ್ಲಿ ರಾತ್ರಿ ಕಳೆದರೆ ಬಿಕೋ ಎನ್ನುತ್ತಿರುತ್ತೆ.‌ ಕಾರಣ ಯಾರು ಕೂಡ ಈ ನಿಲ್ದಾಣವನ್ನ ನಿರ್ವಹಣೆ ಮಾಡುತ್ತಿಲ್ಲ. ಉದ್ಘಾಟನೆ ಆದ ಬಳಿಕ ನಿರ್ವಹಣೆ ಮಾಡಿದರೆ ಆಯ್ತು ಅಂತ ಭೂತ ಬಂಗಲೆ ರೀತಿ ಬಿಟ್ಟಿದ್ದಾರೆ. ಇದರಿಂದಾಗಿ ಬಸ್ ನಿಕ್ದಾಣದಲ್ಲಿ ರಾತ್ರೋ ರಾತ್ರಿ ಕಿಡಿಗೇಡಿಗಳ ಸಂಚಾರವೂ ಇದೆ ಎನ್ನಲಾಗ್ತಿದೆ. ಹೀಗಾಗಿ ಈ ನಿಲ್ದಾಣ ಆದಷ್ಟು ಬೇಗ ಉದ್ಘಾಟನೆ ಆದರೆ ಒಳಿತು ಎಂದು ಸ್ಥಳೀಯರ ವಾದವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News