ಕನ್ನಡ ಈಸ್ ಎ ಬ್ಯೂಟಿಫುಲ್ ಲ್ಯಾಂಗ್ವೇಜ್: ಮೋದಿ ಟ್ವೀಟ್

ಮೋದಿ ಅವರ ಕನ್ನಡ ಭಾಷೆಯ ವರ್ಣನೆಯ ಟ್ವೀಟ್ ಕನ್ನಡಿಗರ ಮನ ಗೆದ್ದಿದ್ದು, ಇದುವರೆಗೂ 4 ಸಾವಿರಕ್ಕೂ ಅಧಿಕ ನೆಟ್ಟಿಗರು ರೀಟ್ವೀಟ್‌ ಮಾಡಿದ್ದು, 17 ಸಾವಿರಕ್ಕೂ ಅಧಿಕ ಟ್ವೀಟಿಗರು ಲೈಕ್‌ ಕೊಟ್ಟಿದ್ದಾರೆ. 

Updated: Mar 12, 2019 , 11:36 AM IST
ಕನ್ನಡ ಈಸ್ ಎ ಬ್ಯೂಟಿಫುಲ್ ಲ್ಯಾಂಗ್ವೇಜ್: ಮೋದಿ ಟ್ವೀಟ್

ಬೆಂಗಳೂರು: ಕನ್ನಡ ಭಾಷೆ ಒಂದು ಸುಂದರವಾದ ಭಾಷೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿದ್ದಾರೆ.

ಟ್ವಿಟ್ಟರ್ ನಲ್ಲಿ ಮೋದಿ ಅಭಿಮಾನಿ ಸಹನಾ (ರೇಣುಕಾ) ಹೋಳಿಮಠ ಎಂಬುವವರು ಮಾರ್ಚ್ 6, 2019 ರಂದು, ''ಮೋದಿಜೀ ಕನ್ನಡದಲ್ಲಿ ಮಾತನಾಡಿದ ಆ ಕ್ಷಣ ಎಷ್ಟು ಖುಷಿ ಆಗುತ್ತೆ ಅಲ್ವಾ?'' ಎಂದು ಟ್ವೀಟ್‌ ಮಾಡಿದ್ದರು. ಇದಕ್ಕೆ ಸೋಮವಾರ ಟ್ವೀಟ್‌ ಮೂಲಕ ಸ್ವತಃ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ''ಕನ್ನಡ ಒಂದು ಸುಂದರ ಭಾಷೆ'' ಎಂದು ವರ್ಣನೆ ಮಾಡಿದ್ದಾರೆ. 

ಮೋದಿ ಅವರ ಕನ್ನಡ ಭಾಷೆಯ ವರ್ಣನೆಯ ಟ್ವೀಟ್ ಕನ್ನಡಿಗರ ಮನ ಗೆದ್ದಿದ್ದು, ಇದುವರೆಗೂ 4 ಸಾವಿರಕ್ಕೂ ಅಧಿಕ ನೆಟ್ಟಿಗರು ರೀಟ್ವೀಟ್‌ ಮಾಡಿದ್ದು, 17 ಸಾವಿರಕ್ಕೂ ಅಧಿಕ ಟ್ವೀಟಿಗರು ಲೈಕ್‌ ಕೊಟ್ಟಿದ್ದಾರೆ. ಈ ಟ್ವೀಟ್ ಸಾಕಷ್ಟು ಮಂದಿ ರಿಟ್ವೀಟ್ ಮಾಡಿದ್ದು, ಮೋದಿಜೀ ನಿಮ್ಮ ಕನ್ನಡದ ಅಭಿಮಾನಕ್ಕೆ, ಕನ್ನಡಿಗರ ಮೇಲಿನ ಪ್ರೀತಿಗೆ ಧನ್ಯವಾದ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.