ಬೆಂಗಳೂರು : ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಳೆಯಿಂದ ಪ್ರಾರಂಭವಾಗಲಿರುವ ವಿಧಾನಸಭೆ-ಪರಿಷತ್ ಅಧಿವೇಶನದಲ್ಲಿ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಸಮರ ಸಾರಲು ನಿರ್ಧಾರ ಮಾಡಿವೆ.
40% ಕಮಿಷನ್ ಆರೋಪ, ಪಿ ಎಸ್ ಐ ಹಗರಣ, ಬೆಂಗಳೂರು ಪ್ರವಾಹ ಸೇರಿದಂತೆ ಹಲವು ವಿಚಾರಗಳನ್ನ ಚರ್ಚೆಗೆ ತರುವ ಮೂಲಕ ಸರ್ಕಾರದ ವೈಫಲ್ಯ ಬೆಟ್ಟುಮಾಡಲು ಸಿದ್ಧತೆಗಳನ್ನ ನಡೆಸಿದೆ.
ಬೆಂಗಳೂರು ಪ್ರವಾಹ : ನಗರದಲ್ಲಿ ಸೇರದಂತೆ ರಾಜ್ಯದಲ್ಲಿ ಆದ ವರುಣನ ಆರ್ಭಟ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಿರ್ವಹಣೆ ಬಗ್ಗೆ ತೀವ್ರವಾಗಿ ಖಂಡಿಸಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್, "Brand Bengaluru" ಘನತೆಯನ್ನ ಸರ್ಕಾರ ನೀರು ಪಾಲು ಮಾಡಿದೆ ಎಂದು ಟೀಕೆ ಮಾಡಲಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಈ ಅಪಾಯಕಾರಿ ಆಟಗಾರನಿಗೆ ಸ್ಥಾನ ಪಕ್ಕಾ!
40% ಕಮಿಷನ್ ಆರೋಪ : ಇತ್ತೀಚಿಗೆ ಮತ್ತೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ರಾಜ್ಯದಲ್ಲಿ ಇನ್ನು 40% ಕಮಿಷನ್ ನಿಂತಿಲ್ಲ ಎಂದು ಆರೋಪ ಮಾಡುವ ಜೊತೆಗೆ ಕೋಲಾರ ಜಿಲ್ಲೆ ಉಸ್ತುವಾರಿ ಸಚಿವ ಮುನಿರತ್ನ ಹಣ ಸಂಗ್ರಹಿಸಿ ನೀಡಿ ಎಂದು ಹೇಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಲ್ಲದೆ ಪ್ರಧಾನಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದರು ಹಾಗೂ 40% ಕಮಿಷನ್ ಪ್ರಕಾರಣವನ್ನು ನ್ಯಾಯಾಂಗ ತನಿಖೆಗೆ ನೀಡಲು ಒತ್ತಾಯಿಸಿದ್ದರು. ಈ ವಿಷಯವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, 40% ಕಮಿಷನ್ ಪ್ರಕರಣವನ್ನ ನ್ಯಾಯಾಂಗ ತನಿಖೆ ಮಾಡಲು ಸರ್ಕಾರಕ್ಕೆ ಆಗ್ರಹ ಮಾಡಲಿದ್ದಾರೆ.
ಪಿ ಎಸ್ ಐ ಹಗರಣ: ಕಳೆದ ಅಧಿವೇಶನದಲ್ಲಿ ಭಾರಿ ಸದ್ದು ಮಾಡಿದ್ದ ಪಿ ಎಸ್ ಐ ನೇಮಕಾತಿ ಹಗರಣ ಸಂದರ್ಭದಲ್ಲಿ ಸರ್ಕಾರ ಯಾವುದೇ ಹಗರಣ ಆಗಿಲ್ಲ, ಬಿಜೆಪಿ ಸರ್ಕಾರದಲ್ಲಿ ಇದು ಸಾಧ್ಯವಿಲ್ಲ ಎನ್ನುವ ಮೂಲಕ ಜಾರಿಕೊಂದಿತ್ತು. ನಂತರ ನಡೆದ ಬೆಳವಣಿಗೆ ಇಡೀ ರಾಜ್ಯಕ್ಕೆ ಪಿ ಎಸ್ ಐ ಪರೀಕ್ಷೆ ಹಾಗೂ ನೇಮಕಾತಿ ಅಕ್ರಮ ವಿಚಾರ ತಿಳಿಯಿತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮೊದಲ ಭಾರಿಗೆ ಹಾಲಿ ಹಿರಿಯ ಐಪಿಸ್ ಅಧಿಕಾರಿ ಬಂಧನವಾಯಿತು.ಈ ವಿಷಯವಾಗಿ ಕಾಂಗ್ರೆಸ್ ಪಕ್ಷ ನಡೆಯುವ ಕಲಾಪದಲ್ಲಿ ಸರ್ಕಾರವನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಿದೆ.
ಹಿಂದೂ ಕಾರ್ಯಕರ್ತರ ಹತ್ಯೆ : ಹಿಂದೂ ಕಾರ್ಯಕರ್ತರ ಹತ್ಯೆ ದೇಶದಲ್ಲೇ ಸಂಚಲನ ಸೃಷ್ಟಿ ಆಗಿತ್ತು, ಬಿಜೆಪಿ ಪಕ್ಷ ಹಿಂದೂ ಕಾರ್ಯಕರ್ತರ ಬೆನ್ನಿಗೆ ನಿಂತಿಲ್ಲ ಎಂದು ಸ್ವಪಾಕ್ಷದಲ್ಲೇ ಕೂಗು ಕೇಳಿಬಂದಿತ್ತು. ಈ ವಿಚಾರ ಜೆಡಿಎಸ್ ಪ್ರಶ್ನೆ ಮಾಡಲಿದ್ದು, ಎಸ್ ಎಫ್ ಐ ಹಾಗೂ ಪಿ ಎಫ್ ಐ ಸಂಘಟನೆ ಬ್ಯಾನ್ ಮಾಡಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಲಿದ್ದಾರೆ.
ಒಟ್ಟಾರೆ ನಾಳೆ ಆರಂಭವಾಗುವ ಅಧಿವೇಶನದಲ್ಲಿ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ, ಯಾವ ರೀತಿ ಸರ್ಕಾರಕ್ಕೆ ಇಕ್ಕಟಿಗೆ ಸಿಲುಕಿಸಬೇಕು ಎಂದು ನಾಳೆ ನಡೆಯುವ ಶಾಸಕಾಂಗ ಸಭೆಯಲ್ಲಿ ನಿರ್ದಾರ ಆಗಲಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಸಮರ್ಥನೆ ಯಾವ ರೀತಿ ಇರಲಿದೆ ಎಂದು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.