PSI recruitment scam: ಕಾಂಗ್ರೆಸ್ ಹೋರಾಟಕ್ಕೆ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಜಯ ಸಿಕ್ಕಿದೆ!

PSI recruitment scam: ಅಕ್ರಮದಲ್ಲಿ ಭಾಗಿಯಾಗುವುದು, ಆರೋಪಿಗಳನ್ನು ರಕ್ಷಿಸುವುದು ಬಿಜೆಪಿಯ ಜಾಯಮಾನ ಇರಬಹುದು, ಆದರೆ ಕಾಂಗ್ರೆಸ್ ಯಾವುದೇ ಅಕ್ರಮವನ್ನು ಸಹಿಸುವುದಿಲ್ಲವೆಂದು ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Nov 10, 2023, 10:28 PM IST
  • ಬಿಜೆಪಿ ಸರ್ಕಾರದಲ್ಲಿ ನಡೆದ PSI ಅಕ್ರಮದಲ್ಲಿ ಹಲವು ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಮಂಕಾಗಿತ್ತು
  • ಮರುಪರೀಕ್ಷೆಗೆ ಹೈಕೋರ್ಟ್ ಆದೇಶಿಸಿದ್ದು, ಕಾಂಗ್ರೆಸ್ ಹೋರಾಟಕ್ಕೆ & ಪ್ರಾಮಾಣಿಕ ಅಭ್ಯರ್ಥಿಗಳಿಗೆ ಜಯ ಸಿಕ್ಕಂತಾಗಿದೆ
  • ಭ್ರಷ್ಟ ಬಿಜೆಪಿ 58 ಸಾವಿರ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ್ದು ಎಂದಿಗೂ ಕ್ಷಮಿಸಲಾರದ ಅಪರಾಧ
PSI recruitment scam: ಕಾಂಗ್ರೆಸ್ ಹೋರಾಟಕ್ಕೆ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಜಯ ಸಿಕ್ಕಿದೆ! title=
PSI recruitment scam

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ನಡೆದ PSI ಅಕ್ರಮದಲ್ಲಿ ಹಲವು ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಮಂಕಾಗಿತ್ತು. ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ, ಕಾಂಗ್ರೆಸ್ ನಡೆಸಿದ ಹೋರಾಟಕ್ಕೆ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಜಯ ಸಿಕ್ಕಂತಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಭ್ರಷ್ಟ ಬಿಜೆಪಿ ಸುಮಾರು 58 ಸಾವಿರ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ್ದು ಎಂದಿಗೂ ಕ್ಷಮಿಸಲಾರದ ಅಪರಾಧ. ಕಾಂಗ್ರೆಸ್ ಸರ್ಕಾರ ಯಾವುದೇ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ, ಅಕ್ರಮ ನಡೆಸಿದರನ್ನು ಬಿಡುವುದೂ ಇಲ್ಲ’ವೆಂದು ಕಾಂಗ್ರೆಸ್ ಎಚ್ಚರಿಕೆ ನಿಡಿದೆ.

‘PSI ಪರೀಕ್ಷೆ ಹಾಗೂ ಕೆಇಎ, ಎಫ್‍ಡಿಎ ಪರೀಕ್ಷೆಯ ಅಕ್ರಮದಲ್ಲಿ ಪ್ರಮುಖ ಆರೋಪಿಯಾಗಿದ್ದ ಆರ್.ಡಿ.ಪಾಟೀಲನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾಗುವುದು, ಆರೋಪಿಗಳನ್ನು ರಕ್ಷಿಸುವುದು ಬಿಜೆಪಿಯ ಜಾಯಮಾನ ಇರಬಹುದು, ಆದರೆ ಕಾಂಗ್ರೆಸ್ ಯಾವುದೇ ಅಕ್ರಮವನ್ನು ಸಹಿಸುವುದಿಲ್ಲ’ವೆಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಕರೆಂಟ್‌ ಶಾಕ್‌ ವದಂತಿಯಿಂದ ಹಾಸನಾಂಬೆ ದೇವಾಲಯದಲ್ಲಿ ಕಾಲ್ತುಳಿತ

"ಯಡಿಯೂರಪ್ಪನವರ ಮಗ"ನಿಗೆ ಅಭಿನಂದನೆಗಳು..

ಮಾಜಿ ಸಿಎಂ ‘ಬಿ.ಎಸ್.ಯಡಿಯೂರಪ್ಪನವರ ಮಗ’ ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ "ಯಡಿಯೂರಪ್ಪನವರ ಮಗ" ಬಿ.ವೈ. ವಿಜಯೇಂದ್ರನಿಗೆ ಅಭಿನಂದನೆಗಳು.. ‘ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ’ ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ!’ ಎಂದು ಬಿಜೆಪಿ ಟೀಕಿಸಿದೆ.

#BJPvsBJP ಕಿತ್ತಾಟ!  

#BJPvsBJP ಕಿತ್ತಾಟವು ಸರ್ವವ್ಯಾಪಿಯಾಗಿ ಆವರಿಸಿದೆ. ಹೈಕಮಾಂಡ್ vs ರಾಜ್ಯ ಬಿಜೆಪಿ, ವಲಸಿಗರು vs ಸಂಘದವರು, ಸಂತೋಷ ಕೂಟ vs BSY ಬಣ, ಹಿರಿಯ ನಾಯಕರು vs ಕಿರಿಯ ನಾಯಕರು, ಮುಖಂಡರು vs ಕಾರ್ಯಕರ್ತರು. ಹೀಗೆ ಹೈಕಮಾಂಡ್‍ನಿಂದ ಹಿಡಿದು ಗ್ರಾಮಮಟ್ಟದ ಮುಖಂಡರವರೆಗೂ ಬಿಜೆಪಿಯೊಳಗೆ ವೈಮಸ್ಸಿನ ಹೊಗೆ ಆವರಿಸಿದೆ. ಈ ದ್ವೇಷ ಹೊಡೆದಾಟದವರೆಗೂ ತಲುಪಿದ್ದು ಬಿಜೆಪಿ ದುರಂತ ಸ್ಥಿತಿಗೆ ಹಿಡಿದ ಕನ್ನಡಿ’ ಎಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: ಯಡಿಯೂರಪ್ಪನ ಮಗ ಅಂತ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ : ಬಿವೈ ವಿಜಯೇಂದ್ರ

‘ಬಿಜೆಪಿ ಹಿಂದಿನ ತಮ್ಮ ಕಮಿಷನ್ ವ್ಯವಹಾರಗಳ ಬಿಲ್ ಗಳನ್ನು ಹಿಡಿದು ಈಗ ಬೊಬ್ಬೆ ಹೊಡೆಯುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್‍ನಲ್ಲಿ ನಡೆದ ₹500 ಕೋಟಿ ಅಕ್ರಮ ಅವ್ಯವಹಾರಗಳು ಈಗ ಹೊರಬರುತ್ತಿವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಕಿಯೋನಿಕ್ಸ್ ಅಕ್ರಮದ ತನಿಖೆ ನಡೆಸಲು ಪ್ರಿಯಾಂಕ್ ಖರ್ಗೆಯವರು ತೀರ್ಮಾನಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಬಿಜೆಪಿಯ ಹಲವು ಮಾಜಿ ಸಚಿವರು ಪರಪ್ಪನ ಅಗ್ರಹಾರದ ಮುದ್ದೆಯ ರುಚಿ ನೋಡುವುದು ಖಚಿತ!’ವೆಂದು ಕಾಂಗ್ರೆಸ್ ಎಚ್ಚರಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News