ಬೆಂಗಳೂರು: ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ, ತಾನು ಘೋಷಿಸಿದ ಎಲ್ಲಾ 5 ಗ್ಯಾರಂಟಿಗಳನ್ನು ಈಡೇರಿಸುತ್ತೇನೆ ಎಂದು ಜನರ ಕಿವಿ ಮೇಲೆ ಹೂವು ಇಟ್ಟಿದ್ದ #ATMSarkara, ಈಗ ಅಧಿಕಾರಕ್ಕೆ ಬಂದು ತನ್ನ ಬಜೆಟ್ ಮಂಡಿಸಿದರೂ ಆ ಬಗ್ಗೆ ಸ್ಪಷ್ಟತೆ ನೀಡುತ್ತಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಗ್ಯಾರಂಟಿ ಜಾರಿಗೊಳಿಸದೇ ಕಾಂಗ್ರೆಸ್ ಸರ್ಕಾರ "ನಾಳೆ ಬಾ" ಎಂದು ಟೈಂ ಪಾಸ್ ಮಾಡುತ್ತಿದೆ’ ಎಂದು ಟೀಕಿಸಿದೆ.
ಇದನ್ನೂ ಓದಿ: ಟೊಮ್ಯಾಟೋ ಬೆಲೆ ಏರಿಕೆ: ಲಕ್ಷ ಲಕ್ಷ ಲೆಕ್ಕದಲ್ಲಿ ಹಣ ಸಂಪಾದನೆ
5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಲು 15 ದಿನ ಬೇಕಾಯಿತು. ಆದರೇ ಈ ಬಜೆಟ್ನಲ್ಲಿ, ರಾಜ್ಯ ಸಾರಿಗೆ ಸಂಸ್ಥೆಗೆ ಶಕ್ತಿ ತುಂಬುವ ಅಂಶಗಳನ್ನು ಪ್ರಸ್ತಾಪಿಸಿಲ್ಲ.
ಇನ್ನು, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ತಾನು ನುಡಿದಂತೆ 10 ಕೆಜಿ ಅಕ್ಕಿ ನೀಡದೇ, 05 ಕೆಜಿ ಅಕ್ಕಿಯ ದರ ನೀಡುತ್ತೇನೆಂದು ಹೇಳಿ, ಕೇಂದ್ರ ಸರ್ಕಾರ ನೀಡುವ 05 ಕೆಜಿ…
— BJP Karnataka (@BJP4Karnataka) July 17, 2023
‘5 ಗ್ಯಾರಂಟಿಗಳಲ್ಲಿ ‘ಶಕ್ತಿ’ ಯೋಜನೆ ಜಾರಿಗೊಳಿಸಲು 15 ದಿನ ಬೇಕಾಯಿತು. ಆದರೇ ಈ ಬಜೆಟ್ನಲ್ಲಿ ರಾಜ್ಯ ಸಾರಿಗೆ ಸಂಸ್ಥೆಗೆ ಶಕ್ತಿ ತುಂಬುವ ಅಂಶಗಳನ್ನು ಪ್ರಸ್ತಾಪಿಸಿಲ್ಲ. ಇನ್ನು ‘ಅನ್ನಭಾಗ್ಯ’ ಯೋಜನೆಯ ಫಲಾನುಭವಿಗಳಿಗೆ ತಾನು ನುಡಿದಂತೆ 10 ಕೆಜಿ ಅಕ್ಕಿ ನೀಡದೇ, 5 ಕೆಜಿ ಅಕ್ಕಿಯ ದರ ನೀಡುತ್ತೇನೆಂದು ಹೇಳಿ, ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯಲ್ಲಿ 2 ಕೆಜಿ ಅಕ್ಕಿಗೆ ಕನ್ನ ಹಾಕಿದೆ’ ಎಂದು ಬಿಜೆಪಿ ಕುಟುಕಿದೆ.
‘ಇನ್ನೂ ‘ಗೃಹ ಜ್ಯೋತಿ’ ಗ್ಯಾರಂಟಿಯನ್ನು ಜಾರಿಗೊಳಿಸದೇ, ವಿದ್ಯುತ್ ದರ ಏರಿಸಿ, ಜನರ ಜೇಬಿಗೆ ಶಾಕ್ ನೀಡಿದೆ. ಈ ತಿಂಗಳ ಬಿಲ್ ಪಾವತಿಸಿ, ಮುಂದಿನ ತಿಂಗಳು ಬಿಲ್ ಬರುವುದಿಲ್ಲವೆಂದು ಹೇಳುತ್ತಾ ಜನತೆಯನ್ನು ವಂಚಿಸುತ್ತಿದೆ. ‘ಗೃಹಲಕ್ಷ್ಮಿ’ಗೆ ನೂರಾರು ಷರತ್ತು ವಿಧಿಸಿ ಕೊನೆಗೆ ಸರ್ವರ್ ಹ್ಯಾಕ್ ಎಂಬ ಸುಳ್ಳು ಸುದ್ದಿಯನ್ನು ಸಚಿವರು ಹೇಳಿದ್ದರು, ಈಗ ಷರತ್ತುಗಳ ಬಗ್ಗೆ ಮಾತನಾಡುತ್ತಿದ್ದಾರೆ’ ಅಂತಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಯುವನಿಧಿಗೆ ಗ್ರಹಣ ಬಡಿದಿದ್ದು, ಅದು ಕಾಗದದ ಮೇಲಿನ ಯೋಜನೆಯಾಗಿ ಉಳಿಯುವ ಸಾಧ್ಯತೆ ದಟ್ಟವಾಗಿದೆ.
ಹೀಗೆ ಮೊದಲ ಕ್ಯಾಬಿನೆಟ್ ನಲ್ಲಿಯೇ ಜಾರಿಯಾಗಬೇಕಿದ್ದ ಗ್ಯಾರಂಟಿಗಳನ್ನು ಈಡೇರಿಸದೇ, ಬಜೆಟ್ ನಲ್ಲಿ ಅನುಷ್ಠಾನದ ಬಗ್ಗೆ ಸ್ಪಷ್ಟನೆ ನೀಡದೇ, ತಾನು ನುಡಿದಂತೆ ನಡೆಯದ ಸರ್ಕಾರ ಎಂಬುದನ್ನು @siddaramaiahರವರ ಬಜೆಟ್ ಸಾಬೀತುಪಡಿಸಿದೆ.
4/4— BJP Karnataka (@BJP4Karnataka) July 17, 2023
ಇದನ್ನೂ ಓದಿ: "ದೇಶದ ಹಿತಾಸಕ್ತಿ ಕಾಯಲು ವಿರೋಧ ಪಕ್ಷಗಳು ಒಂದುಗೂಡುತ್ತಿರುವುದು ಉತ್ತಮ ಆರಂಭ"
‘ಇನ್ನು ‘ಯುವನಿಧಿ’ಗೆ ಗ್ರಹಣ ಬಡಿದಿದ್ದು, ಅದು ಕಾಗದದ ಮೇಲಿನ ಯೋಜನೆಯಾಗಿ ಉಳಿಯುವ ಸಾಧ್ಯತೆ ದಟ್ಟವಾಗಿದೆ. ಹೀಗೆ ಮೊದಲ ಕ್ಯಾಬಿನೆಟ್ ನಲ್ಲಿಯೇ ಜಾರಿಯಾಗಬೇಕಿದ್ದ ಗ್ಯಾರಂಟಿಗಳನ್ನು ಈಡೇರಿಸದೇ, ಬಜೆಟ್ನಲ್ಲಿ ಅನುಷ್ಠಾನದ ಬಗ್ಗೆ ಸ್ಪಷ್ಟನೆ ನೀಡದೇ, ತಾನು ನುಡಿದಂತೆ ನಡೆಯದ ಸರ್ಕಾರ ಎಂಬುದನ್ನು ಸಿಎಂ ಸಿದ್ದರಾಮಯ್ಯನವರ ಬಜೆಟ್ ಸಾಬೀತುಪಡಿಸಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.