ಬ್ರಿಟಿಷರ ‘ಒಡೆದಾಳುವ ನೀತಿಯೇ’ ಕಾಂಗ್ರೆಸ್‌ನ ಪ್ರಮುಖ ಅಸ್ತ್ರ: ‘INDIA’ ವಿರುದ್ಧ ಬಿಜೆಪಿ ಆಕ್ರೋಶ!

Divide and rule Policy: ತುಕ್ಡೆ ಗ್ಯಾಂಗಿನ ಜೊತೆಗಿರುವ ಆಪ್ತ ಸ್ನೇಹವು ರಾಹುಲ್‌ ಗಾಂಧಿಯವರಿಗೆ ಹೋದಲ್ಲಿ, ಬಂದಲ್ಲಿ ಸದಾ ಭಾರತವನ್ನು ವಿಭಜಿಸುವ, ಅವಹೇಳನಗೈಯುವ ದುರ್ಬುದ್ಧಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Written by - Puttaraj K Alur | Last Updated : Sep 16, 2023, 09:23 PM IST
  • “ಒಡೆದಾಳುವ ನೀತಿಯನ್ನು” ಭಾರತದಲ್ಲಿ ಮುಂದುವರೆಸುತ್ತಿರುವುದು ಕಾಂಗ್ರೆಸ್
  • ನೆಹರುರಿಂದ ಹಿಡಿದು ರಾಹುಲ್‌ ಗಾಂಧಿವರೆಗೂ ಒಡೆದಾಳುವುದೇ ಕಾಂಗ್ರೆಸ್‌ನ ಪ್ರಮುಖ ಅಸ್ತ್ರ
  • ಟೀ ಶರ್ಟ್‌ ಧರಿಸಿದರೂ ರಾಹುಲ್‌ ಗಾಂಧಿಗೆ ಭಾರತದ ಒಕ್ಕೂಟ ವ್ಯವಸ್ಥೆಯ ಘನತೆ ತಿಳಿದಿಲ್ಲ
ಬ್ರಿಟಿಷರ ‘ಒಡೆದಾಳುವ ನೀತಿಯೇ’ ಕಾಂಗ್ರೆಸ್‌ನ ಪ್ರಮುಖ ಅಸ್ತ್ರ: ‘INDIA’ ವಿರುದ್ಧ ಬಿಜೆಪಿ ಆಕ್ರೋಶ! title=
ಒಡೆದಾಳುವುದೇ ಕಾಂಗ್ರೆಸ್‌ನ ಪ್ರಮುಖ ಅಸ್ತ್ರ!

ಬೆಂಗಳೂರು: ಬ್ರಿಟಿಷರ ‘ಒಡೆದಾಳುವ ನೀತಿಯೇ’ ಕಾಂಗ್ರೆಸ್‌ನ ಪ್ರಮುಖ ಅಸ್ತ್ರವೆಂದು ಇಂಡಿಯಾ ಒಕ್ಕೂಟದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಬ್ರಿಟಿಷರು ಆರಂಭಿಸಿದ “ಒಡೆದಾಳುವ ನೀತಿಯನ್ನು” ಭಾರತದಲ್ಲಿ ಮುಂದುವರೆಸುತ್ತಿರುವುದು ಕಾಂಗ್ರೆಸ್.‌ ಮುತ್ತಾತ ಜವಾಹರಲಾಲ್‌ ನೆಹರುರಿಂದ ಹಿಡಿದು ಮೊಮ್ಮಗ ರಾಹುಲ್‌ ಗಾಂಧಿಯವರೆಗೂ ಒಡೆದಾಳುವುದೇ ಕಾಂಗ್ರೆಸ್‌ನ ಪ್ರಮುಖ ಅಸ್ತ್ರ’ವೆಂದು ಟೀಕಿಸಿದೆ.

‘ಬೇಧ-ಭಾವ ನಮ್ಮಲ್ಲಿಲ್ಲ ಎಂದು ಹೇಳುತ್ತಾ, ಒಳಗೊಳಗೆ ರಾಜ್ಯ, ಭಾಷೆ, ಪ್ರಾದೇಶಿಕತೆ, ಜಾತಿ, ಧರ್ಮಗಳ ಹೆಸರಿನಲ್ಲಿ ದೇಶ ಹಾಗೂ ಮನಸ್ಸುಗಳನ್ನು ಒಡೆಯುವ ಪ್ರಯತ್ನವನ್ನು ರಾಹುಲ್‌ ಗಾಂಧಿಯವರ ಕಾಂಗ್ರೆಸ್‌ ನಿರಂತರವಾಗಿ ಮಾಡುತ್ತಿದೆ. ಸೂಟು-ಬೂಟಿನಿಂದ ಆರಂಭವಾಗಿ, ಜುಬ್ಬಾ ಪೈಜಾಮಕ್ಕೆ ಬಂದು, ನಂತರ ಟೀ ಶರ್ಟ್‌ ಧರಿಸಿದರೂ ರಾಹುಲ್‌ ಗಾಂಧಿಯವರಿಗೆ ಭಾರತದ ಒಕ್ಕೂಟ ವ್ಯವಸ್ಥೆಯ ಘನತೆ ತಿಳಿದಿಲ್ಲ. ವೇಷಭೂಷಣದ ಜೊತೆ ತಮ್ಮ ಯೋಚನಾ ಲಹರಿಯನ್ನು ಕೊಂಚ ಬದಲಿಸಿಕೊಂಡಿದ್ದರೆ, ಬಹುಷಃ ಭಾರತದ ಭವ್ಯ ಪರಂಪರೆಯ ಪರಿಚಯವಾಗುತ್ತಿತ್ತು’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಪೊಲೀಸರು ದರ್ಪ ಬಿಟ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು: ಸಿಎಂ ಸಿದ್ದರಾಮಯ್ಯ

‘ಆದರೆ ತುಕ್ಡೆ ಗ್ಯಾಂಗಿನ ಜೊತೆಗಿರುವ ಆಪ್ತ ಸ್ನೇಹವು ರಾಹುಲ್‌ ಗಾಂಧಿಯವರಿಗೆ ಹೋದಲ್ಲಿ, ಬಂದಲ್ಲಿ ಸದಾ ಭಾರತವನ್ನು ವಿಭಜಿಸುವ, ಅವಹೇಳನಗೈಯುವ ದುರ್ಬುದ್ಧಿಯನ್ನು ಮತ್ತಷ್ಟು ಹೆಚ್ಚಿಸಿದೆ. ಕುಟುಂಬ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ರಾಹುಲ್‌ ಗಾಂಧಿಯವರು, ಭಾರತವನ್ನು ರಾಜಮನೆತನವೆಂದು ಭಾವಿಸಬೇಡಿ ಎಂದು ಹೇಳುವುದೇ ಅತ್ಯಂತ ಹಾಸ್ಯಾಸ್ಪದ. ಅಭಿಪ್ರಾಯ ಸ್ವಾತಂತ್ರವಿಲ್ಲದ ಏಕೈಕ ಪಕ್ಷ ಕಾಂಗ್ರೆಸ್. ಇಂತಹವರಿಗೆ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಪ್ರಶ್ನಿಸಲು ಯಾವ ನೈತಿಕತೆ ಸಹ ಇಲ್ಲ. ಭಾರತದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿ, ಭಾರತೀಯರೆಲ್ಲರೂ ಒಂದೇ ಎಂದು ಹೇಳಿದರೆ, ಅದನ್ನು ಸಹ ರಾಹುಲ್‌ ಗಾಂಧಿಯವರು ಸಹಿಸುವುದಿಲ್ಲ. ಬರೆದುಕೊಟ್ಟ ಭಾಷಣವನ್ನು ಸಹ ಸರಿಯಾಗಿ ಹೇಳಲು ಬಾರದ ಎಡವಟ್ಟಣ್ಣಯ್ಯ ಈ ರಾಹುಲ್‌ ಗಾಂಧಿಯವರು’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ತಮಿಳುನಾಡಿಗೆ ಹೋಗಿ ಬೇರೆ ರಾಜ್ಯಗಳನ್ನು ಹೋಲಿಸುವುದು, ಈಶಾನ್ಯ ಭಾರತಕ್ಕೆ ಹೋದಾಗ ಭಾರತವೇ ಬೇರೆ, ಈಶಾನ್ಯ ಭಾರತವೇ ಬೇರೆ ಎಂದು ಅಲ್ಲಿನ ಜನರನ್ನು ಎತ್ತಿ ಕಟ್ಟುವುದು, ಉತ್ತರ ಭಾರತ, ದಕ್ಷಿಣ ಭಾರತ ಎಂಬ ಬೇಧ-ಭಾವ ಮಾಡುವುದು, ಇವೆಲ್ಲವೂ ರಾಹುಲ್‌ ಗಾಂಧಿಯವರು ದಶಕಗಳಿಂದ ಮಾಡಿಕೊಂಡು ಬರುತ್ತಿರುವ ಒಡೆದಾಳುವ ರಾಜಕೀಯದ ಸ್ಯಾಂಪಲ್‌ಗಳು. ಇನ್ನು ಜಾತಿ-ಧರ್ಮದ ವಿಚಾರದಲ್ಲಿ ಪಕ್ಕಾ ಅವಕಾಶವಾದಿಯಾಗಿರುವ ರಾಹುಲ್‌ ಗಾಂಧಿಯವರು ಚುನಾವಣೆ ಸಮಯದಲ್ಲಿ ಮಾತ್ರ ಹಿಂದೂವಾಗಿ ನೂರೆಂಟು ವೇಷ ತೊಡುತ್ತಾರೆ. ಚುನಾವಣೆ ಮುಗಿದ ಬಳಿಕ ಆ ವೇಷಗಳಿಗೆ ಗುಡ್‌ ಬೈ ಹೇಳಿ, ಮತ್ತೊಮ್ಮೆ ಹಿಂದೂ ವೇಷವನ್ನು ತೊಡುವುದು ಯಾವುದಾದರೂ ಚುನಾವಣೆ ಬಂದರೆ ಮಾತ್ರ’ವೆಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನ ನಾಶಗೊಳಿಸಿ ಮನುಸ್ಮೃತಿ ಜಾರಿಗೆ ಹುನ್ನಾರ: ಸಿಎಂ ಸಿದ್ದರಾಮಯ್ಯ

‘ರಾಹುಲ್‌ ಗಾಂಧಿಯವರ ಅತ್ಯಂತ ಆಪ್ತ ಪಕ್ಷವಾಗಿರುವ ಡಿಎಂಕೆಯ ನಾಯಕರು ಕಳೆದ 15 ದಿನಗಳಿಂದ ಸನಾತನ ಹಿಂದೂ ಧರ್ಮದ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆಗಳನ್ನು ಸ್ಪರ್ಧೆಗೆ ಬಿದ್ದವರಂತೆ ನೀಡುತ್ತಿದ್ದಾರೆ. ಆದರೆ ಚುನಾವಣಾ ಹಿಂದೂ ರಾಹುಲ್‌ ಗಾಂಧಿಯವರು ಈ ಬಗ್ಗೆ ತುಟಿಕ್‌ ಪಿಟಿಕ್‌ ಅಂದಿಲ್ಲ. ಕೊನೆ ಪಕ್ಷ ಡಿಎಂಕೆಯವರ ಹೇಳಿಕೆಯನ್ನು ಖಂಡಿಸುವ ಟ್ವೀಟ್‌ ಸಹ ಮಾಡಿಲ್ಲ. ಇದು ರಾಹುಲ್‌ ಗಾಂಧಿಯವರಿಗೆ ಹಿಂದೂ ಧರ್ಮದ ಮೇಲಿರುವ ಅಸಲಿ ಗೌರವ. ಪದೇ ಪದೇ ವಿದೇಶಗಳಿಗೆ ತೆರಳುವ ರಾಹುಲ್‌ ಗಾಂಧಿಯವರು, ಅಲ್ಲಿ ಭಾರತವನ್ನು ದ್ವೇಷಿಸುವ ಮನಸ್ಥಿತಿಯವರೊಂದಿಗೆ ಸೇರಿಕೊಂಡು, ಭಾರತವನ್ನು ವಿರೋಧಿಸುವ ಟೂಲ್‌ ಕಿಟ್‌ನ ಪ್ರಮುಖ ಅಂಗವಾಗಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಡೋಕ್ಲಾಮ್‌ ವಿವಾದದ ಸಮಯದಲ್ಲಿ ನಮ್ಮ ಹೆಮ್ಮೆಯ ಸೈನಿಕರು, ಚೀನಾದ ಸೈನಿಕರೊಂದಿಗೆ ವೀರಾವೇಷದಿಂದ ಹೋರಾಡುತ್ತಿರುವ ಸಂದರ್ಭದಲ್ಲಿ, ರಾಹುಲ್‌ ಗಾಂಧಿಯವರು ರಹಸ್ಯವಾಗಿ ಚೀನಾದ ರಾಯಭಾರಿಯನ್ನು ಭೇಟಿ ಮಾಡಿ, ಅವರೊಂದಿಗೆ ಏಕೆ ನ್ಯೂಡಲ್ಸ್‌ ತಿಂದರು ಎಂಬ ಪ್ರಶ್ನೆಗೆ ಇದುವರೆಗೂ ರಾಹುಲ್‌ ಗಾಂಧಿಯವರಿಂದ ಉತ್ತರ ಬಂದಿಲ್ಲ. ಆದರೆ ಈಗ ದೇಶವನ್ನು ಕಾಯ್ದ ಹೆಮ್ಮೆಯ ಸೈನಿಕರ ನಡುವೆ ಬೆಂಕಿ ಹಚ್ಚುವಂತಹ ಕೆಲಸಕ್ಕೆ ರಾಹುಲ್ ಗಾಂಧಿಯವರು ಮುಂದಾಗಿರುವುದು ಕ್ಷಮಿಸಲಾರದಂತಹ ಅಪರಾಧ. ತಮ್ಮ ಸ್ವಾರ್ಥ ರಾಜಕಾರಣದ ಸಾಧನೆಗಾಗಿ ರಾಹುಲ್‌ ಗಾಂಧಿಯವರು ಎಂತಹ ಕೆಳ ಮಟ್ಟಕ್ಕಾದರೂ ಇಳಿಯುತ್ತಾರೆಂಬುದು ಅವರ ನಡೆಗಳಿಂದಲೇ ಸಾಬೀತಾಗಿದೆ. ಪ್ರತಿಕ್ಷಣ ಭಾರತವನ್ನು ಒಡೆಯುವ ಬಗ್ಗೆ ಯೋಚಿಸುವವರು, ಭಾರತ್‌ ಜೋಡೋ ಹೆಸರಿನಲ್ಲಿ ಯಾತ್ರೆ ಮಾಡಿದ್ದು ಸಹ ಬರೀ ನಾಟಕ..!!!’ ಎಂದು ಬಿಜೆಪಿ ಟೀಕಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News