ಬೆಂಗಳೂರು: ಹೆಣಕ್ಕೆ ಬಳಸುವ ಉಪ್ಪನ್ನೇ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಆಹಾರಕ್ಕೆ ಉಪಯೋಗಿಸಲಾಗುತ್ತದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೇ ವಿಚಾರಚಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಮನುಷ್ಯತ್ವ ಇಲ್ಲದ ಈ ಕಡುಭ್ರಷ್ಟ ಕಾಂಗ್ರೆಸ್ ಸರ್ಕಾರ ಉಪ್ಪನ್ನೂ ಬಿಡ್ತಿಲ್ವಲ್ಲಾ’ ಎಂದು ಟೀಕಿಸಿದೆ.
ಉಪ್ಪನ್ನೂ ಬಿಡ್ತಿಲ್ವಲ್ಲಾ ಈ ಕಡುಭ್ರಷ್ಟ @INCKarnataka ಸರ್ಕಾರ!! pic.twitter.com/2WOUEYFZJu
— BJP Karnataka (@BJP4Karnataka) August 28, 2023
ಸಾರಿಗೆ ನೌಕರರು ಬೀದಿ ಪಾಲಾಗಿದ್ದಾರೆ!
ಕಾಂಗ್ರೆಸ್ ಸರ್ಕಾರದ ಹಠದ ಫಲವಾಗಿ ಸಾರಿಗೆ ನೌಕರರು ಬೀದಿ ಪಾಲಾಗಿದ್ದಾರೆ. ಟ್ಯಾಕ್ಸಿ, ಆಟೋ, ಖಾಸಗಿ ಬಸ್ ಚಾಲಕರು, ನಿರ್ವಾಹಕರು ದುಡಿಮೆ ಇಲ್ಲದೆ ಒಂದೊತ್ತಿನ ಗಂಜಿಗೂ ಕಷ್ಟಪಡುವಂತಾಗಿದೆ. ಶಕ್ತಿ ಯೋಜನೆಯ ಅಸಮರ್ಪಕ ಜಾರಿಯಿಂದ ನಿಶಕ್ತರಾದ ಕುಟುಂಬಗಳಿಗೆ ಶಕ್ತಿ ತುಂಬಲು ಸಿಎಂ ಸಿದ್ದರಾಮಯ್ಯನವರು ಸೋತಿದ್ದಾರೆ’ ಎಂದು ಟೀಕಿಸಿದೆ.
ಇದನ್ನೂ ಓದಿ: ವೇತನ ನಿಯಮಗಳಲ್ಲಿ ಬದಲಾವಣೆ ! ಮುಂದಿನ ತಿಂಗಳಿನಿಂದಲೇ ಕೈ ಸೇರುವುದು ಹೆಚ್ಚಿನ ವೇತನ
‘ಈ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ಬಂದ್ ಮಾಡಲು ಖಾಸಗಿ ಸಾರಿಗೆ ನೌಕರರು ನಿರ್ಧರಿಸಿರುವುದು ಸರಿಯಾಗಿಯೇ ಇದೆ. #ATMSarkara ಕುಂಭಕರ್ಣ ನಿದ್ದೆಯಿಂದ ಎಚ್ಚರಗೊಳ್ಳದೆ ಹೋದರೆ ರಾಜ್ಯದ ಜನರು ಇಂತಹ ಇನ್ನೂ ಅನೇಕ ಬಂದ್-ಮುಷ್ಕರಗಳಿಂದ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ..!’ವೆಂದು ಬಿಜೆಪಿ ಕುಟುಕಿದೆ.
.@INCKarnataka ಸರ್ಕಾರದ ಹಠದ ಫಲವಾಗಿ ಸಾರಿಗೆ ನೌಕರರು ಬೀದಿ ಪಾಲಾಗಿದ್ದಾರೆ.
ಟ್ಯಾಕ್ಸಿ, ಆಟೋ, ಖಾಸಗಿ ಬಸ್ ಚಾಲಕರು, ನಿರ್ವಾಹಕರು ದುಡಿಮೆ ಇಲ್ಲದೆ ಒಂದೊತ್ತಿನ ಗಂಜಿಗೂ ಕಷ್ಟಪಡುವಂತಾಗಿದೆ. ಶಕ್ತಿ ಯೋಜನೆಯ ಅಸಮರ್ಪಕ ಜಾರಿಯಿಂದ ನಿಶಕ್ತರಾದ ಕುಟುಂಬಗಳಿಗೆ ಶಕ್ತಿ ತುಂಬಲು @siddaramaiah ಅವರು ಸೋತಿದ್ದಾರೆ.
ಈ ಸಮಸ್ಯೆ ಬಗೆಹರಿಸುವಂತೆ… pic.twitter.com/qPP6ssg2uv
— BJP Karnataka (@BJP4Karnataka) August 28, 2023
800 ಪಿಡಿಓಗಳ ವರ್ಗಾವಣೆ ದಂಧೆ!
ಮೊದಲ ಹಂತದ ಕಾಸಿಗಾಗಿ ಪೋಸ್ಟಿಂಗ್ ದಂಧೆ ಮುಗಿಯುತ್ತಿದ್ದಂತೆ ಇದೀಗ #Trollminister ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಬರೋಬ್ಬರಿ 800 ಪಿಡಿಓಗಳ ವರ್ಗಾವಣೆ ದಂಧೆಗೆ #ATMSarkara ಮುಂದಾಗಿದೆ. ಟ್ರಾನ್ಸಫರ್ಗೂ ಮುನ್ನವೇ ಕಡತ ಸೋರಿಕೆ ಆಗಿದ್ದು, ಬೀದಿಯಲ್ಲಿ ಹರಾಜಾದ ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ನ ತುಘಲಕ್ ಸರ್ಕಾರ ಸೋರಿಕೆ ಮಾಡಿದವರನ್ನು ಹತ್ತಿಕ್ಕಲು ಮುಂದಾಗಿದೆ’ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ರೈಲಿನ ಪೂರ್ತಿ ಕೋಚ್ ಅನ್ನು ಸುಲಭವಾಗಿ ಬುಕ್ ಮಾಡಲು ಈ ವೆಬ್ ಸೈಟ್ ಬಳಸಿ
‘ಸಿಎಂ ಸಿದ್ದರಾಮಯ್ಯನವರು ತಮ್ಮ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯರಿಗೆ ಸಾಂವಿಧಾನಿಕ ಹುದ್ದೆಯನ್ನು ನೀಡುವುದರಿಂದ ಹಿಡಿದು ವರ್ಗಾವಣೆ ದಂಧೆಯವರೆಗೂ ಗುಟ್ಟಾಗಿಯೇ ಎಲ್ಲವನ್ನೂ ಮಾಡಲು ಯತ್ನಿಸಿ ಇದೀಗ ಬೆತ್ತಲಾಗುತ್ತಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.