ಜಯಮಾಲಾಗೆ ಒಲಿದ ಮಂತ್ರಿ ಸ್ಥಾನ

ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯೆ ಹಾಗೂ ಹಿರಿಯ ನಟಿ ಜಯಮಾಲ ಕೊನೆ ಕ್ಷಣದಲ್ಲಿ ಅವಕಾಶ ಪಡೆದಿದ್ದಾರೆ.

Last Updated : Jun 6, 2018, 11:50 AM IST
ಜಯಮಾಲಾಗೆ ಒಲಿದ ಮಂತ್ರಿ ಸ್ಥಾನ title=

ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕ್ಯಾಬಿನೆಟ್ ಸಚಿವರು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯೆ ಹಾಗೂ ಹಿರಿಯ ನಟಿ ಜಯಮಾಲ ಅವರಿಗೆ ಮಂತ್ರಿ ಸ್ಥಾನ ಒಲಿದಿದೆ.

ಮೊದಲ ಬಾರಿಗೆ ಗೆದ್ದ ಶಾಸಕರಿಗೆ ಮಂತ್ರಿ ಸ್ಥಾನ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ಕಾಂಗ್ರೆಸಿನಿಂದ ಆಯ್ಕೆಯಾಗಿರುವ ನಾಲ್ವರು ಮಹಿಳಾ ಶಾಸಕರೂ ಮೊದಲ ಬಾರಿಗೆ ಗೆದ್ದವರು. ಹಾಗಾಗಿ MLC ಜಯಮಾಲಾಗೆ ಅವಕಾಶ ಕಲ್ಪಿಸಲಾಗಿದೆ.

ಈಡಿಗ ಸಮುದಾಯದವರಾಗಿರುವ ಜಯಮಾಲಾ ಅವರಿಗೆ ಹಿಂದುಳಿದ ವರ್ಗದವರು ಹಾಗೂ ಮಹಿಳೆ ಎಂಬ ಅಂಶಗಳಿಂದ ಮಂತ್ರಿಸ್ಥಾನವನ್ನು ನೀಡಲಾಗಿದೆ. ಇದರಿಂದಾಗಿ ಪುತ್ರಿ ರೂಪಾ ಶಶಿಧರ್ ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಲಾಬಿ ನಡೆಸಿದ್ದ ಸಂಸದ ಕೆ.ಎಚ್. ಮುನಿಯಪ್ಪ ಅವರಿಗೆ ನಿರಾಸೆಯಾಗಿದೆ.

Trending News