Sri Lanka Crisis: ಮಂಗಳೂರಿನ ಕರಾವಳಿಯಲ್ಲಿ ಹದ್ದಿನ ಕಣ್ಣು, ಪೊಲೀಸ್‌ ನೋಟಿಸ್‌

ಪ್ರಸ್ತುತ ಇಡೀ ವಿಶ್ವದಲ್ಲೇ ಸುದ್ದಿಯಲ್ಲಿರುವ ವಿಚಾರ ಎಂದರೆ ಅದು ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು. ಎಕನಾಮಿಕ್‌ ಕ್ರೈಸಿಸ್‌ನಿಂದ ನಲುಗಿರುವ ಲಂಕೆಯಲ್ಲಿ ಜನ ತಿನ್ನುವ ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.  

Written by - Chetana Devarmani | Last Updated : May 12, 2022, 03:02 PM IST
  • ಪ್ರಸ್ತುತ ಇಡೀ ವಿಶ್ವದಲ್ಲೇ ಸುದ್ದಿಯಲ್ಲಿರುವ ವಿಚಾರ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು
  • ಮಂಗಳೂರಿನ ಕರಾವಳಿಯಲ್ಲಿ ಹದ್ದಿನ ಕಣ್ಣು, ಪೊಲೀಸ್‌ ನೋಟಿಸ್‌
  • ಮಂಗಳೂರಿನ ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ
Sri Lanka Crisis: ಮಂಗಳೂರಿನ ಕರಾವಳಿಯಲ್ಲಿ ಹದ್ದಿನ ಕಣ್ಣು, ಪೊಲೀಸ್‌ ನೋಟಿಸ್‌  title=
ಕರಾವಳಿ

ದಕ್ಷಿಣ ಕನ್ನಡ: ಪ್ರಸ್ತುತ ಇಡೀ ವಿಶ್ವದಲ್ಲೇ ಸುದ್ದಿಯಲ್ಲಿರುವ ವಿಚಾರ ಎಂದರೆ ಅದು ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು. ಎಕನಾಮಿಕ್‌ ಕ್ರೈಸಿಸ್‌ನಿಂದ ನಲುಗಿರುವ ಲಂಕೆಯಲ್ಲಿ ಜನ ತಿನ್ನುವ ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಆ ದೇಶದಲ್ಲಿ ದೊಂಬೆ, ಗಲಭೆಗಳು ಕೂಡ ನಡೆಯುತ್ತಿದ್ದು, ಇದರಿಂದ ಜನ ಕಂಗೆಟ್ಟಿದ್ದಾರೆ. ಇದೇ ಕಾರಣಕ್ಕೆ ಅಲ್ಲಿನ ಪ್ರಜೆಗಳು ದೇಶ ಬಿಟ್ಟು ಬರುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಹಾಗಾಗಿ ಶ್ರೀಲಂಕಾದ  ಜನರು ಭಾರತದತ್ತ ಧಾವಿಸಿ ಬರದಂತೆ ತಡೆಯಲು ಮಂಗಳೂರಿನ ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರವಹಿಸಲಾಗಿದೆ. 

ಇದನ್ನೂ ಓದಿ: ಬೇಸಿಗೆಯಲ್ಲಿ ಅತಿಯಾಗಿ ಸೇವಿಸದಿರಿ ಮ್ಯಾಂಗೋ ಶೇಕ್, ಎದುರಾಗಬಹುದು ಈ ಸಮಸ್ಯೆ

ಶ್ರೀಲಂಕಾದಿಂದ ದೊಡ್ಡ ಮಟ್ಟದ ಜನರು ಭಾರತ ಪ್ರವೇಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಮಂಗಳೂರಿನ ಎಲ್ಲಾ ದೇವಾಲಯಗಳು, ಚರ್ಚ್‌ಗಳು, ಮಸೀದಿಗಳು, ಮೀನುಗಾರಿಕಾ ಒಕ್ಕೂಟ, ಮೀನುಗಾರರ ಸಂಘ ಮತ್ತು ಆಟೋ ಯೂನಿಯನ್‌ಗಳಿಗೆ ಸೂಚನೆ ನೀಡಿದ್ದಾರೆ. ಕೋಸ್ಟಲ್ ಸೆಕ್ಯುರಿಟಿ ಪೊಲೀಸರು ಸಭೆ ನಡೆಸಿ ಮುಂಜಾಗ್ರತಾ ಕ್ರಮವಾಗಿ ಈ ಸೂಚನೆ ನೀಡಲಾಗಿದೆ.

ಶ್ರೀಲಂಕಾ ದೇಶದಲ್ಲಿ ತೀವ್ರ ಆರ್ಥಿ ಬಿಕ್ಕಟ್ಟು ಉಂಟಾಗಿರುವುದರಿಂದ, ದೇಶದಲ್ಲಿ ಅರಾಜಕತೆಯುಂಟಾಗಿದೆ. ಆಹಾರ ಪದಾರ್ಥಗಳಿಗೆ ಪರದಾಟ ನಡೆಯುತ್ತಿರುವುದರಿಂದ ಅಲ್ಲಿಯ ಜನರು ಸಮುದ್ರ ಮಾರ್ಗ ಮುಖೇನ ಅಥವಾ ಇನ್ನಿತರ ಮಾರ್ಗಗಳಿಂದ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ. ಆದ ಕಾರಣ ತಮ್ಮ ಊರಿನಲ್ಲಿ ಅಥವಾ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಒಳನುಸುಳುವ ಸಾಧ್ಯತೆಯಿದೆ. ಆದ್ದರಿಂದ ಅಪರಿಚಿತ ವ್ಯಕ್ತಿಗಳಿಗೆ ಮನೆ ಬಾಡಿಗೆ ನೀಡುವ ಸಮಯದಲ್ಲಿ ಅವರುಗಳ ಪೂರ್ವಪರ ಮಾಹಿತಿಯನ್ನು ತಿಳಿದು ಸೂಕ್ತ ದಾಖಲಾತಿಗಳನ್ನು ಪಡೆದುಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ: ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News