ಆರ್‌ಎಸ್‌ಎಸ್ ಅಂಗ ಸಂಸ್ಥೆಗಳಿಗೆ ನೀಡಿದ್ದ ಎಲ್ಲಾ ಜಮೀನು ವಾಪಸ್..!

ಬಿಜೆಪಿಗರು ಸರ್ಕಾರಿ ಭೂಮಿಯನ್ನ ತಮ್ಮ ಸಂಸ್ಥೆಗಳಿಗೆ ಪರಭಾರೆ ಮಾಡಿದ್ದಾರೆ. ರಾಜ್ಯದ ನೂರಾರು ಎಕರೆ ಸರ್ಕಾರಿ ಜಾಗವನ್ನು ಪರಭಾರೆ ಮಾಡಿದ್ದಾರೆ. ಆರ್‌ಎಸ್‌ಎಸ್ ಸೇರಿದಂತೆ ತಮ್ಮ ಸಂಸ್ಥೆಗಳಿಗೆ ನೀಡಿದ್ದಾರೆ. ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಗೆ ಹೀಗೆ ಮಾಡಿದ್ದಾರೆ, ಕಾನೂನು ಉಲ್ಲಂಘಿಸಿ ಭೂಮಿ ನೀಡಿರುವುದು ಸತ್ಯ. 

Written by - Prashobh Devanahalli | Edited by - Krishna N K | Last Updated : Jun 9, 2023, 03:29 PM IST
ಆರ್‌ಎಸ್‌ಎಸ್ ಅಂಗ ಸಂಸ್ಥೆಗಳಿಗೆ ನೀಡಿದ್ದ ಎಲ್ಲಾ ಜಮೀನು ವಾಪಸ್..! title=

ಬೆಂಗಳೂರು : ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿ ಆರ್‌ಎಸ್‌ಎಸ್ ಹಾಗೂ ಅದರ ಅಂಗ ಸಂಸ್ಥೆಗಳಿಗೆ ನೀಡಿದ ಎಲ್ಲಾ ಜಮೀನು ಹಾಗೂ ಭೂಮಿಯನ್ನ ವಾಪಾಸ್ ಪಡೆಯಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯೆ ನೀಡಿ, ಕಳೆದ ಆರು ತಿಂಗಳಲ್ಲಿ ಯಾರಿಗೆಲ್ಲ ಸರ್ಕಾರಿ ಭೂಮಿ ಹಂಚಿಕೆಯಾಗಿದೆ ಮಂಜೂರಾಗಿದೆ ಪರಿಶೀಲನೆ ಮಾಡ್ತೇವೆ. ತರಾತುರಿಯಲ್ಲಿ ಯಾರಿಗೆಲ್ಲ ಭೂಮಿ ಹಂಚಿಕೆಯಾಗಿದೆ ಪರಿಶೀಲನೆ ಮಾಡ್ತೇವೆ. ಯಾವ ಧರ್ಮ ಯಾವ ಸಂಘಟನೆ ಎನ್ನೋದಕ್ಕಿಂತ, ಯಾರಿಗೆ ಇದು ಹಂಚಿಕೆಯಾಗಿದೆ ಎಂಬ ಬಗ್ಗೆ ಸಿಎಂ ಪರಿಶೀಲನೆ ಮಾಡಲು ಸೂಚಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯಾದ್ಯಂತ ಏಕ‌ಕಾಲಕ್ಕೆ 'ಶಕ್ತಿ'ಗೆ ಚಾಲನೆ

ನನ್ನ ನೆನಪಿನ ಪ್ರಕಾರ ಚಾಣಕ್ಯ ಯುನಿವರ್ಸಿಟಿಗೆ ಕೆಐಎಡಿಬಿಯಿಂದ ಜಮೀನು ನೀಡಿದ್ದಾರೆ, ಕಂದಾಯ ಇಲಾಖೆಯಿಂದ ಜಮೀನು ಮಂಜೂರಾದ ಬಗ್ಗೆ ಚೆಕ್ ಮಾಡಬೇಕು. ಡಿಸೆಂಬರ್ ನಂತರ ಸರ್ಕಾರ ಕೊನೆ ದಿನಗಳಲ್ಲಿ ನೀಡಿದ ಜಮೀನುಗಳ ಬಗ್ಗೆ ಪರಿಶೀಲನೆ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ತರಾತುರಿಯ ತೀರ್ಮಾನಗಳ ಮರು ಪರಿಶೀಲನೆ ಮಾಡಲು ನಿರ್ಧರಿಸಿದ್ದೇವೆ ಎಂದರು.

ಇನ್ನು ಈ ಮೊದಲು ಸಚಿವ ದಿನೇಶ್ ಗುಂಡೂರಾವ್ ಮಾತಾನ್ನಾಡಿ, ಸರ್ಕಾರಿ ಭೂಮಿಯನ್ನ ತಮ್ಮ ಸಂಸ್ಥೆಗಳಿಗೆ ಪರಭಾರೆ ಮಾಡಿದ್ದಾರೆ. ರಾಜ್ಯದ ನೂರಾರು ಎಕರೆ ಸರ್ಕಾರಿ ಜಾಗವನ್ನು ಪರಭಾರೆ ಮಾಡಿದ್ದಾರೆ. ಆರ್‌ಎಸ್‌ಎಸ್ ಸೇರಿದಂತೆ ತಮ್ಮ ಸಂಸ್ಥೆಗಳಿಗೆ ನೀಡಿದ್ದಾರೆ. ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಗೆ ಹೀಗೆ ಮಾಡಿದ್ದಾರೆ, ಕಾನೂನು ಉಲ್ಲಂಘಿಸಿ ಭೂಮಿ ನೀಡಿರುವುದು ಸತ್ಯ. ಸಿಎಂ ಹಾಗೂ ಕಂದಾಯ ಇಲಾಖೆ ಈ ಬಗ್ಗೆ ಗಮನಹರಿಸಲಿದೆ. ಹೇಗೆ ಕಾನೂನಾತ್ಮಕ ನಡೆದಿದೆ ಎಂಬುದನ್ನ ಪರಿಶೀಲಿಸಿ ಕ್ರಮ‌ಕೈಗೊಳ್ಳಲಿದ್ದಾರೆ.

ಹೆಸರಘಟ್ಟ ಹೋಬಳಿ ಹೋಲಿಚಿಕ್ಕಂನಹಳ್ಳಿ ಗ್ರಾಮ : 24.8 ಎಕರೆ ಪೈಕಿ 9.32 ಎಕರೆ ಮಂಜೂರು ಮಾಡಲಾಗಿದೆ. ಅಲ್ಲದೆ ಹೊಸಪೇಟೆಯ ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ಶಾಲೆಗೆ ನಿಗದಿ ಪಡಿಸಿದ ಜಮೀನಿನ ಪೈಕಿ 5ಎಕರೆ ರಾಷ್ಟ್ರೋತ್ಥಾನ ಪರಿಷತ್ ಶಾಲೆಗೆ ಮಂಜೂರಾಗಿದೆ.

ಚಾಣಕ್ಯ ವಿಶ್ವವಿದ್ಯಾಲಯಕ್ಕೆ 116 ಎಕರೆ

ಇದನ್ನೂ ಓದಿ: ಚುಚ್ಚು ಮದ್ದು ಹಾಕಿದ ಕೆಲವೇ ಗಂಟೆಗಳಲ್ಲಿ ಮೂರು ತಿಂಗಳ ಮಗು ಸಾವು!

ಒಟ್ಟಾರೆ ಬಿಜೆಪಿ ಸರ್ಕಾರ ಸಂದರ್ಭದಲ್ಲಿ  ಬಿಜೆಪಿ ಕಚೇರಿಗೆ ಗೋಮಾಳ, ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಎಕರೆಗಟ್ಟಲೆ ಜಮೀನು, ರಾಷ್ಟ್ರೋತ್ಥಾನ ಶಾಲೆಗೆ ಜಮೀನು ಮಂಜೂರು ಮಾಡಿದ್ದನ್ನ ಸೇರಿದಂತೆ ಅನೇಕ ಜಮೀನುಗಳನ್ನ ವಾಪಸ್ ಪಡೆಯುವ ಚಿಂತನೆಯಲ್ಲಿ ಕಾಂಗ್ರೆಸ್ ಸರ್ಕಾರ ಇದೇ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News