ಸೀರೆಗಳನ್ನೂ ಬಿಡದೆ ಹಗರಣ ನಡೆಸಿದ್ದು ಬಿಜೆಪಿಯ ಸಾಧನೆ!: ಕಾಂಗ್ರೆಸ್‌ ಟೀಕೆ

Bhagyalakshmi Yojana Scam: 2011ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 23 ಕೋಟಿ ರೂ. ಅಕ್ರಮ ನಡೆದಿರುವ ಬಗ್ಗೆ ಬಿಜೆಪಿ ಮೌನವಾಗಿರುವುದೇಕೆ? ಈ ಹಗರಣದಲ್ಲಿ ಲೆಹರ್ ಸಿಂಗ್ ಪಾತ್ರವೇನು? ಭ್ರಷ್ಟ ಹಣದಲ್ಲಿ ಪಾಲೆಷ್ಟು? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

Written by - Puttaraj K Alur | Last Updated : Sep 6, 2024, 08:22 PM IST
  • 2011ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 23 ಕೋಟಿ ಅಕ್ರಮ ನಡೆದಿರುವ ಬಗ್ಗೆ ಬಿಜೆಪಿ ಮೌನವಾಗಿರುವುದೇಕೆ?
  • ತಮ್ಮ ಹುಳುಕು ಮುಚ್ಚಿಕೊಳ್ಳಲು ಲೆಹರ್ ಸಿಂಗ್‌ರಿಂದ ಇನ್ನೊಬ್ಬರ ಮೇಲೆ ಸುಳ್ಳು ಆರೋಪ
  • ಸೀರೆಗಳನ್ನೂ ಬಿಡದೆ ಹಗರಣ ನಡೆಸಿದ್ದು ಬಿಜೆಪಿಯ ಸಾಧನೆ! ಎಂದು ಟೀಕಿಸಿದ ಕಾಂಗ್ರೆಸ್
ಸೀರೆಗಳನ್ನೂ ಬಿಡದೆ ಹಗರಣ ನಡೆಸಿದ್ದು ಬಿಜೆಪಿಯ ಸಾಧನೆ!: ಕಾಂಗ್ರೆಸ್‌ ಟೀಕೆ title=
ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 23 ಕೋಟಿ ಅಕ್ರಮ!

Congress vs BJP: ಸೀರೆಗಳನ್ನೂ ಬಿಡದೆ ಹಗರಣ ನಡೆಸಿದ್ದು ಬಿಜೆಪಿಯ ಸಾಧನೆ! ಎಂದು ಕರ್ನಾಟಕ ಕಾಂಗ್ರೆಸ್‌ ಟೀಕಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭಾಗ್ಯಲಕ್ಷ್ಮಿ ಯೋಜನೆ ಹಗರಣದ ಬಗ್ಗೆ ಕಿಡಿಕಾರಿದೆ. 

2011ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಗಾಗಿ ಸೀರೆ ಖರೀದಿಯಲ್ಲಿ ಭಾರೀ ಅಕ್ರಮ ನಡೆಸಿರುವ ಲೆಹರ್ ಸಿಂಗ್ ಇಂದು ಇನ್ನೊಬ್ಬರ ಮೇಲೆ ಸುಳ್ಳು ಆರೋಪಗಳನ್ನು ಹೊರೆಸುತ್ತಿರುವುದು ತಮ್ಮ ಹುಳುಕು ಮುಚ್ಚಿಕೊಳ್ಳಲಿಕ್ಕಾಗಿ ಎಂದು ಕಾಂಗ್ರೆಸ್‌ ಟೀಕಿಸಿದೆ. 

ಇದನ್ನೂ ಓದಿ: ಹಾಸನದಲ್ಲಿ ಏಳು ಪತ್ರಕರ್ತ ರಿಗೆ ಸಣ್ಣಪುಟ್ಟ ಗಾಯ

ಸೀರೆ ಖರೀದಿಯಲ್ಲಿ ನಡೆರುವ ಭ್ರಷ್ಟಾಚಾರದ ಬಗೆಗಿನ ಪ್ರಶ್ನೆಗಳಿಗೆ ಬಿಜೆಪಿ ರಾಜ್ಯದ ಜನರಿಗೆ ಉತ್ತರಿಸುವ ನೈತಿಕತೆ ತೋರಬೇಕು. ರಾಜಸ್ಥಾನ ಮೂಲದ ಲೆಹರ್ ಸಿಂಗ್ ಕರ್ನಾಟಕದ ತಾಯಂದಿರಿಗೆ ಮೋಸ ಮಾಡಿದ್ದರ ಬಗ್ಗೆ ಬಿಜೆಪಿಗರು ಮಾತಾಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. 

2011ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 23 ಕೋಟಿ ರೂ. ಅಕ್ರಮ ನಡೆದಿರುವ ಬಗ್ಗೆ ಬಿಜೆಪಿ ಮೌನವಾಗಿರುವುದೇಕೆ? ಈ ಹಗರಣದಲ್ಲಿ ಲೆಹರ್ ಸಿಂಗ್ ಪಾತ್ರವೇನು? ಭ್ರಷ್ಟ ಹಣದಲ್ಲಿ ಪಾಲೆಷ್ಟು? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಇದನ್ನೂ ಓದಿ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಚಾಲನೆ

ನಾಡಿನ ಮಹಿಳೆಯರಿಗೆ ಕೊಡುವ ಸೀರೆ ಖರೀದಿಯಲ್ಲಿ ಲೂಟಿ ಹೊಡೆದ ಪ್ರಕರಣದ ತನಿಖೆಯ ಬಗ್ಗೆ ಸದನದಲ್ಲೇ ಕಾಂಗ್ರೆಸ್ ಒತ್ತಾಯಿಸಿದ್ದರೂ ಅಂದಿನ ಬಿಜೆಪಿ ಸರ್ಕಾರ ತನಿಖೆಗೆ ಮುಂದಾಗದಿರುವುದೇಕೆ? ಎಂದು ಕಾಂಗ್ರೆಸ್‌ ಕುಟುಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News