ದ್ವೀತಿಯ ಪಿಯು ಪರೀಕ್ಷೆಗೆ ಕ್ಷಣಗಣನೆ: ಪರೀಕ್ಷಾ ಕೇಂದ್ರಗಳಿಗೆ ನೋ ಹಿಜಾಬ್, ಓನ್ಲಿ ಸಮವಸ್ತ್ರ!

ದ್ವಿತೀಯ ಪಿಯು ಪರೀಕ್ಷೆಗೆ ಕ್ಷಣಗಣನೆ ಪ್ರಾರಂಭಾಗಿದ್ದು, ಒಟ್ಟು 6.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Written by - Manjunath Hosahalli | Edited by - Puttaraj K Alur | Last Updated : Apr 21, 2022, 09:06 PM IST
  • ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು
  • ಯಾವುದೇ ರೀತಿಯ ಧಾರ್ಮಿಕ ವಸ್ತ್ರ ಧರಿಸಿ ಬಂದರೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ
  • ಪಾರದರ್ಶಕ ಪರೀಕ್ಷೆ ನಡೆಸುವ ಉದ್ದೇಶದಿಂದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ
ದ್ವೀತಿಯ ಪಿಯು ಪರೀಕ್ಷೆಗೆ ಕ್ಷಣಗಣನೆ: ಪರೀಕ್ಷಾ ಕೇಂದ್ರಗಳಿಗೆ ನೋ ಹಿಜಾಬ್, ಓನ್ಲಿ ಸಮವಸ್ತ್ರ! title=
ನಾಳೆಯಿಂದ ದ್ವೀತಿಯ ಪಿಯುಸಿ ಪರೀಕ್ಷೆ

ಬೆಂಗಳೂರು: ಹಿಜಾಬ್ ಗೊಂದಲದ ನಡುವೆಯೇ SSLC ಪರೀಕ್ಷೆ ಮುಕ್ತಾಯವಾಗಿದೆ. ಇದೀಗ ನಾಳೆಯಿಂದ ದ್ವೀತಿಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿವೆ. ವಿದ್ಯಾರ್ಥಿಗಳಿಗೆ ಇದು 2ನೇ ಹಂತದ ಪರೀಕ್ಷೆಯಾಗಿದ್ದು, ಮಕ್ಕಳ ಮುಂದಿನ ಭವಿಷ್ಯಕ್ಕೆ ಈ ಪರೀಕ್ಷೆ ತುಂಬಾ ಮುಖ್ಯ. ಹೀಗಾಗಿ ಏಪ್ರಿಲ್ 22ರಿಂದ ನಡೆಯುವ ದ್ವೀತಿಯ ಪಿಯುಸಿ ಪರೀಕ್ಷೆಗೆ ಮಕ್ಕಳು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಮತ್ತೊಂದು ಕಡೆ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ SOP ಪ್ರಕಾರ ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ.

ಏಪ್ರಿಲ್ 22ರಿಂದ ಮೇ 18ರವರೆಗೆ ನಡೆಯಲಿರುವ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳೆ ಮೊದಲ ಪರೀಕ್ಷೆ ತರ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ಇರಲಿದೆ‌. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30 ರವರೆಗೆ ಪರೀಕ್ಷೆ ನಡೆಯಲಿದೆ. ಒಟ್ಟು 6 ಲಕ್ಷ 84 ಸಾವಿರ 255 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದು, ಈ ಪೈಕಿ 3 ಲಕ್ಷ 46 ಸಾವಿರ 936 ವಿದ್ಯಾರ್ಥಿಗಳು ಹಾಗೂ 3 ಲಕ್ಷ 37 ಸಾವಿರ 319 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ.

ಇದನ್ನೂ ಓದಿ: ಅರುಂಧತಿ ನಕ್ಷತ್ರದ ಬದಲು ಪುನೀತ್ ಭಾವಚಿತ್ರ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಪರೀಕ್ಷಾ ಪ್ರೇವಶಪತ್ರ ತೋರಿಸಿದ್ರೆ ಉಚಿತ ಬಸ್ ಸೇವೆ

ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದ್ದು, 6,00,519 ರೆಗ್ಯುಲರ್ ವಿದ್ಯಾರ್ಥಿಗಳು, 61,808 ಪುನರಾವರ್ತಿತ ಅಭ್ಯರ್ಥಿಗಳು ಹಾಗೂ 21,928 ಖಾಸಗಿ ಅಭ್ಯರ್ಥಿಗಳ ಸಂಖ್ಯೆ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಇರಲಿದ್ದು, 200 ಮೀಟರ್ ನಿಷೇಧಾಜ್ಞೆ ಜಾರಿಯಾಗಿದೆ. ಪರೀಕ್ಷಾ ಪ್ರವೇಶ ಪತ್ರ ತೋರಿಸಿದರೆ KSRTC ಹಾಗೂ BMTC ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ನಾಳೆ ನಡೆಯುವ ಪರೀಕ್ಷೆಗೆ ವಿದ್ಯಾರ್ಥಿಗಳು ಸ್ವಲ್ಪ ಒತ್ತಡಲ್ಲಿಯೇ ತಯಾರಿ ನಡೆಸಿದ್ದಾರೆ.

ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶವಿಲ್ಲ!

ಇನ್ನು SSLC ರೀತಿಯಲ್ಲಿ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಕಡ್ಡಾಯವಾಗಿದೆ. ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮ ಕಡ್ಡಾಯವಾಗಿದೆ. ಈಗಾಗಲೇ ಆಯಾ ಕಾಲೇಜುಗಳ CDC ಅಂದರೆ ಕಾಲೇಜು ಅಭಿವೃದ್ಧಿ ಕಮಿಟಿಗಳಿಗೆ ಸೂಚನೆ ನೀಡಿದ್ದು, ಕೋರ್ಟ್ ಅದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್.ರಾಮಚಂದ್ರನ್ ತಿಳಿಸಿದ್ದಾರೆ.  

ಇದನ್ನೂ ಓದಿ: Congress vs BJP: ಬಿಜೆಪಿ-ಕಾಂಗ್ರೆಸ್ ನಡುವೆ ‘ಗೂಂಡಾಗಿರಿ’ ಜಟಾಪಟಿ..!

ಒಟ್ಟಿನಲ್ಲಿ ಉಡುಪಿಯಿಂದ ಆರಂಭವಾದ ಹಿಜಾಬ್ ಗಲಾಟೆ ನಾಳೆ ನಡೆಯುವ ಪಿಯು ಪರೀಕ್ಷೆಯಲ್ಲಿಯೂ ಸದ್ದು ಮಾಡುವ ಸಾಧ‍್ಯತೆ ಇದೆ. ಪ್ರಾಯೋಗಿಕ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಯಂತೆಯೇ ಅಂತಿಮ ಪರೀಕ್ಷೆಗೂ ಹಿಜಾಬ್ ಧರಿಸುವ ವಿದ್ಯಾರ್ಥಿಗಳು ಗೈರಾಗ್ತಾರಾ ಅಥವಾ ಭವಿಷ್ಯವೇ ಮುಖ್ಯವೆಂದು ಪರೀಕ್ಷೆಗೆ ಹಾಜರಾಗ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News