ಅರುಂಧತಿ ನಕ್ಷತ್ರದ ಬದಲು ಪುನೀತ್ ಭಾವಚಿತ್ರ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ಆನಂದ್‌ ಪಟ್ಟಣ ಹಾಗೂ ಜ್ಯೋತಿ ಎನ್ನುವ ನವಜೋಡಿ ಪುನೀತ್ ಅವರ ನೆನಪಿನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ. ರಾಯಬಾಗ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆದ ವಿವಾಹ ಸಮಾರಂಭ ಸಂಪೂರ್ಣವಾಗಿ ಪುನೀತ್ ಮಯವಾಗಿತ್ತು. 

Written by - Zee Kannada News Desk | Last Updated : Apr 20, 2022, 06:33 PM IST
  • ಪುನೀತ್ ಭಾವಚಿತ್ರ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
  • ಅರುಂಧತಿ ನಕ್ಷತ್ರದ ಬದಲು ಪುನೀತ್ ಭಾವಚಿತ್ರ ನೋಡಿದ ನವಜೋಡಿ
  • ಆನಂದ್‌ ಪಟ್ಟಣ ಹಾಗೂ ಜ್ಯೋತಿ ಎನ್ನುವ ನವಜೋಡಿ
ಅರುಂಧತಿ ನಕ್ಷತ್ರದ ಬದಲು ಪುನೀತ್ ಭಾವಚಿತ್ರ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ title=
ಪುನೀತ್

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ಆನಂದ್‌ ಪಟ್ಟಣ ಹಾಗೂ ಜ್ಯೋತಿ ಎನ್ನುವ ನವಜೋಡಿ ಪುನೀತ್ ಅವರ ನೆನಪಿನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ. ರಾಯಬಾಗ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆದ ವಿವಾಹ ಸಮಾರಂಭ ಸಂಪೂರ್ಣವಾಗಿ ಪುನೀತ್ ಮಯವಾಗಿತ್ತು. ಮದುವೆ ಸಮಾರಂಭ ನಡೆಯುವ ಕಲ್ಯಾಣ ಮಂಟಪ ಪುನೀತ್ ಭಾವಚಿತ್ರಗಳಿಂದ ರಾರಾಜಿಸುತ್ತಿತ್ತು. ರಾಜರತ್ನ ಪುನೀತ್ ಸಾವನ್ನಪ್ಪಿ 6 ತಿಂಗಳು ಕಳೆಯುತ್ತಾ ಬಂದರೂ ಅಪ್ಪು ಮೇಲಿನ ಅಭಿಮಾನ ಮಾತ್ರ ಮರೆಯಾಗಿಲ್ಲ. ಪುನೀತ್ ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿಯೊಬ್ಬರು ತಮ್ಮ ವಿವಾಹದ   ದಿನಂದಂದು ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ. 

ಇದನ್ನೂ ಓದಿ: ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 6 ಮಂದಿ ದುರ್ಮರಣ

ಬಹುತೇಕ ಮದುವೆ ಸಮಾರಂಭಗಳಲ್ಲಿ ನವ ವಧುವರರು ಅರುಂಧತಿ ನಕ್ಷತ್ರ ನೋಡುವುದು ವಾಡಿಕೆ. ಆದರೆ ಈ ಜೋಡಿ ಪುನೀತ್ ಭಾವಚಿತ್ರವನ್ನೇ ಅರುಂಧತಿ ನಕ್ಷತ್ರ ಎಂದು ನೋಡಿ ಆಶೀರ್ವಾದ ಪಡೆದರು.

ಮದುವೆ ಸಮಾರಂಭದ ವೇದಿಕೆಯಲ್ಲೂ ಪುನೀತ್ ಭಾವಚಿತ್ರವನ್ನ ಹೂವಿನ ಅಲಂಕಾರದಿಂದ ಸಿಂಗಾರ ಮಾಡಲಾಗಿತ್ತು. ಇನ್ನೂ ವಿಶೇಷವೆಂದರೆ ಈ ಯುವ ಜೋಡಿಗಳು ಅರುಂಧತಿ ನಕ್ಷತ್ರ ನೋಡುವ ಬದಲು ಪುನೀತ್ ಭಾವಚಿತ್ರವನ್ನ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಇದನ್ನೂ ಓದಿ: ಮುಂಬೈ ಟೀಂಗೆ ಎಂಟ್ರಿ ನೀಡಲಿದ್ದಾನೆ ಮಾರಣಾಂತಿಕ ಬೌಲರ್‌! 

ಪುನೀತ್ ಅಪ್ಪಟ ಅಭಿಮಾನಿಯಾಗಿರುವ ಆನಂದ್‌ಗೆ ಆತನ‌ ಸ್ನೇಹಿತರು ಪುನೀತ್ ಭಾವಚಿತ್ರ ಇರುವ ವಿವಿಧ ಉಡುಗೊರೆಗಳನ್ನು ನೀಡಿ ಸಂತಸಪಟ್ಟರು. ಆನಂದ್‌ ಪಟ್ಟಣ ಅವರ ಸ್ನೇಹಿತರು ಪುನೀತ್ ಹಾಡುಗಳನ್ನ ಹಾಡಿ‌ ಮದುವೆಗೆ ಮತ್ತಷ್ಟು ಕಳೆ ತಂದರು. ಇನ್ನೂ ಮದುವೆ ನಂತರ ಪುನೀತ್ ಭಾವಚಿತ್ರದ  ಮೆರವಣಿಗೆ ನಡೆಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News