ಕರ್ನಾಟಕ ರಾಜ್ಯ ಧ್ವಜ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ.

     

Last Updated : Feb 6, 2018, 08:32 PM IST
ಕರ್ನಾಟಕ ರಾಜ್ಯ ಧ್ವಜ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ. title=

ಬೆಂಗಳೂರು: ರಾಜ್ಯಕ್ಕೆ ಧ್ವಜ ವಿನ್ಯಾಸದ ಕುರಿತು ಅಧ್ಯಯನ ಮಾಡಲು ಕರ್ನಾಟಕ ಸರ್ಕಾರವು ಜೂನ್ 2017ರಲ್ಲಿ  ಪಾಟೀಲ್ ಪುಟ್ಟಪ್ಪನವರ ನೇತೃತ್ವದಲ್ಲಿ ಧ್ವಜ ಸಮಿತಿಯನ್ನು ನೇಮಕ ಮಾಡಿತ್ತು. ಈಗ ತನ್ನ ವರದಿಯನ್ನು ಮಂಗಳವಾರ ಸರ್ಕಾರಕ್ಕೆ ಸಲ್ಲಿಸಿದೆ.

ಈ ಪ್ರತ್ಯೇಕ ಧ್ವಜ ಹೊಂದುವ ವಿಚಾರವಾಗಿ ಮುಂದಿನ ವಾರ ಶಾಸನಸಭೆಯಲ್ಲಿ ಚರ್ಚಿಸಲಾಗುವುದು ಎಂದು ವರದಿಯಾಗಿದೆ. ಅಧಿಕೃತ ರಾಜ್ಯ ಧ್ವಜವನ್ನು ಹೊಂದುವ ಕುರಿತಾಗಿ ಇರುವ ಕಾನೂನುಮಿತಿಗಳ ಬಗ್ಗೆಯೂ ಸಹಿತ ಸಮಿತಿಯು ಅಧ್ಯಯನ ಮಾಡಿದೆ. 

ಆದರೆ ಧ್ವಜದಲ್ಲಿರುವ ಮೂರು ಬಣ್ಣಗಳು ಹಳದಿ, ಹಸಿರು ಮತ್ತು ಕೆಂಪು ಅಥವಾ ಹಳದಿ, ಬಿಳಿ ಮತ್ತು ಕೆಂಪು ಬಣ್ಣದಲ್ಲಿವೆ ಎನ್ನುವುದರ ಬಗ್ಗೆ  ಸದಸ್ಯರು ಸ್ಪಷ್ಟನೆ ನೀಡಲಿಲ್ಲ ಎಂದು ಹೇಳಲಾಗಿದೆ.

 

with ANI inputs

Trending News