Karnataka CET Results: ಮೈಸೂರಿನ ಎಚ್‌.ಕೆ.ಮೇಘನ್ ರಾಜ್ಯಕ್ಕೆ ಮೊದಲ ರ‍್ಯಾಂಕ್

ಸುದ್ದಿಗೋಷ್ಠಿ ನಡೆಸುವ ಮೂಲಕ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಸಿಇಟಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.

Written by - Puttaraj K Alur | Last Updated : Sep 20, 2021, 06:07 PM IST
  • 2021ನೇ ಸಾಲಿನ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟಿಸಿದ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್
  • ಎಲ್ಲಾ ಕೋರ್ಸ್ ಗಳಲ್ಲಿಯೂ ಮೊದಲ ರ‍್ಯಾಂಕ್ ಗಳಿಸಿದ ಮೈಸೂರಿನ ಎಚ್.ಕೆ.ಮೇಘನ್
  • ಆಗಸ್ಟ್​ 28, 29 ರಂದು ಒಟ್ಟು 530 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯನ್ನು ನಡೆಸಲಾಗಿತ್ತು
Karnataka CET Results: ಮೈಸೂರಿನ ಎಚ್‌.ಕೆ.ಮೇಘನ್ ರಾಜ್ಯಕ್ಕೆ ಮೊದಲ ರ‍್ಯಾಂಕ್ title=
2021ನೇ ಸಾಲಿನ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟವಾಗಿದೆ(Photo Courtesy: @Zee News)

ಬೆಂಗಳೂರು: ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆದಿದ್ದ ಕರ್ನಾಟಕ ಸಿಇಟಿ (KCET Result 2021) ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಸುದ್ದಿಗೋಷ್ಠಿ ನಡೆಸುವ ಮೂಲಕ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಸಿಇಟಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಮೈಸೂರಿನ ಎಚ್​.ಕೆ.ಮೇಘನ್ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಬೆಂಗಳೂರಿನ ಪ್ರೇಮಂಕುರ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ಬಿ.ಎಸ್. ಅನಿರುದ್ಧ್ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿ(Pramati Hill View Academy)ಯ ವಿದ್ಯಾರ್ಥಿ ಎಚ್.ಕೆ.ಮೇಘನ್​ (Meghan H K)ಇಂಜಿನಿಯರಿಂಗ್​, ಪಶು ವೈದ್ಯಕೀಯ, ಬಿ-ಫಾರ್ಮ್​, ಕೃಷಿ ವಿಜ್ಞಾನ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಅಂತಾ ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಲೆ ಏರಿಕೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಸಮರ್ಥನೆ ಹಾಸ್ಯಾಸ್ಪದ: ಕಾಂಗ್ರೆಸ್ ಟೀಕೆ

ಕೃಷಿ ವಿಜ್ಞಾನ ವಿಭಾಗದಲ್ಲಿ ಎಚ್.ಕೆ.ಮೇಘನ್ ಮೊದಲ ಸ್ಥಾನ ಪಡೆದರೆ, ಬಿ.ರೀತಂ ದ್ವಿತೀಯ ಸ್ಥಾನ ಮತ್ತು ಅದಿತ್ಯ ಪ್ರಭಾಶ್ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಅದರಂತೆ ಪಶು ವೈದ್ಯಕೀಯ ವಿಭಾಗಲ್ಲಿಯೂ ಎಚ್.ಕೆ.ಮೇಘನ್ ಮೊದಲ ಸ್ಥಾನ ಪಡೆದುಕೊಂಡಿದ್ದರೆ, 2ನೇ ಸ್ಥಾನವನ್ನು ವರುಣ್ ಆದಿತ್ಯ ಮತ್ತು ಬಿ.ರೀತಂ 3ನೇ ಸ್ಥಾನ ಪಡೆದಿದ್ದಾರೆ.

ಇನ್ನು ಬಿ.ಫಾರ್ಮ್ ವಿಭಾಗದಲ್ಲಿಯೂ ಎಚ್.ಕೆ.ಮೇಘನ್ ಮೊದಲ ಸ್ಥಾನ ಗಳಿಸಿದ್ದಾರೆ. ದ್ವೀತಿಯ ಸ್ಥಾನವನ್ನು ಪ್ರೇಮಾಂಕರ್ ಮತ್ತು 3ನೇ ಸ್ಥಾನವನ್ನು ಬಿ.ಎಸ್.ಅನಿರುದ್ಧ್​ ಗಳಿಸಿದ್ದಾರೆ. ನ್ಯಾಚರೋಪತಿ ವಿಭಾಗದಲ್ಲಿ ಎಚ್.ಕೆ.ಮೇಘನ್ ಮೊದಲು ಸ್ಥಾನ, ದ್ವಿತೀಯ ಸ್ಥಾನವನ್ನು ವರುಣ್ ಆದಿತ್ಯ ಹಾಗೂ 3ನೇ ಸ್ಥಾನವನ್ನು ಬಿ.ರೀತಂ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ದಲಿತ ಸಿಎಂ ವಿಚಾರ: ಸಿದ್ದರಾಮಯ್ಯ ಮತ್ತು ಡಿಕೆಶಿ ನಿಲುವು ಪ್ರಶ್ನಿಸಿದ ಬಿಜೆಪಿ

ಆಗಸ್ಟ್​ 28, 29 ರಂದು ಒಟ್ಟು 530 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 2,01,834 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 1,93,447 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅಭ್ಯರ್ಥಿಗಳು ತಮ್ಮ ಪರೀಕ್ಷಾ ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್ ಸೈಟ್ ಗಳಾದ kea.kar.nic.in ಹಾಗೂ karresults.nic.in ನಲ್ಲಿ ವೀಕ್ಷಿಸಬಹುದು. 

ಫಲಿತಾಂಶ ಪ್ರಕಟಿಸಿ ಮಾತನಾಡಿದ ಸಚಿವ ಡಾ.ಅಶ್ವತ್ಥ್ ನಾರಾಯಣ್(CN Ashwath Narayan), ‘ನೀಟ್ ಫಲಿತಾಂಶ ಬಂದ ಬಳಿ ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಕೋರ್ಸ್ ಗಳಿಗೆ ಪ್ರವೇಶ ಆರಂಭವಾಗುವುದು. ಈ ಬಾರಿ ಪರೀಕ್ಷೆಯಲ್ಲಿ 6 ಗ್ರೇಸ್​ ಅಂಕ(ಭೌತಶಾಸ್ತ್ರದಲ್ಲಿ 3, ಗಣಿತದಲ್ಲಿ 3) ನೀಡಲಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಆಗಿದ್ದು, 54 ಸಾವಿರ ಸೀಟ್ ಗಳನ್ನು ಸಿಇಟಿ ಮೂಲಕ ಭರ್ತಿ ಮಾಡಲು ತೀರ್ಮಾನ ಮಾಡಲಾಗಿದೆ’ ಎಂದರು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News