N Mahesh : 'ಈ ಹಿಂದೆ ಅರ್ಜುನನಾಗಿದ್ದ ಯಡಿಯೂರಪ್ಪ ಇನ್ಮುಂದೆ ಕೃಷ್ಣರಾಗ್ತಾರೆ'

ಈ ಹಿಂದೆ ಅರ್ಜುನನಾಗಿ ಹೋರಾಡಿದ್ದ ಬಿಎಸ್ ಯಡಿಯೂರಪ್ಪ ಇನ್ಮುಂದೆ ಕೃಷ್ಣನ ರೀತಿ ಸಾರಥಿಯಾಗುತ್ತಾರೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.

Written by - Zee Kannada News Desk | Last Updated : Mar 30, 2022, 08:12 PM IST
  • ಈ ಹಿಂದೆ ಅರ್ಜುನನಾಗಿ ಹೋರಾಡಿದ್ದ ಬಿಎಸ್ ಯಡಿಯೂರಪ್ಪ
  • ಇನ್ಮುಂದೆ ಕೃಷ್ಣನ ರೀತಿ ಸಾರಥಿಯಾಗುತ್ತಾರೆ
  • ಅಧಿಕಾರ ಇರಲಿ ಇಲ್ಲದಿರಲಿ ಯಡಿಯೂರಪ್ಪ ಅವರ ಜನಪ್ರಿಯತೆ ಕುಗ್ಗಿಲ್ಲ
N Mahesh : 'ಈ ಹಿಂದೆ ಅರ್ಜುನನಾಗಿದ್ದ ಯಡಿಯೂರಪ್ಪ ಇನ್ಮುಂದೆ ಕೃಷ್ಣರಾಗ್ತಾರೆ' title=

ಚಾಮರಾಜನಗರ : ಈ ಹಿಂದೆ ಅರ್ಜುನನಾಗಿ ಹೋರಾಡಿದ್ದ ಬಿಎಸ್ ಯಡಿಯೂರಪ್ಪ ಇನ್ಮುಂದೆ ಕೃಷ್ಣನ ರೀತಿ ಸಾರಥಿಯಾಗುತ್ತಾರೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.

ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದ ವಿರಕ್ತ ಮಠ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಎನ್.ಮಹೇಶ್(N Mahesh), ಅರ್ಜುನನ ರೀತಿ ಇದ್ದ ಯಡಿಯೂರಪ್ಪ ಕೃಷ್ಣನ ರೀತಿ ಸಾರಥಿಯಾಗಿ ಪಕ್ಷವನ್ನು ಮುನ್ನೆಡೆಸಿ ಚುನಾವಣೆ ಎದುರಿಸಲಿದ್ದಾರೆ ಎನ್ನುವ ಮೂಲಕ ಕಿಂಗ್ ಮೇಕರ್ ಆಗಿದ್ದಾರೆಂದು ಸೂಚ್ಯವಾಗಿ ತಿಳಿಸಿದರು.

ಇದನ್ನೂ ಓದಿ : ಕಲ್ಲಡ್ಕದ ಭಯೋತ್ಪಾದಕ ಹೇಳಿದ ಹಾಗೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಆಗುತ್ತಿದೆ- ಬಿ ಕೆ ಹರಿಪ್ರಸಾದ್ ವಾಗ್ದಾಳಿ

ಯಡಿಯೂರಪ್ಪ ರನ್ನು ನಂಬಿದವರು ಯಾರು ಹಾಳಾಗಿಲ್ಲ, ಅವರನ್ನು ನಂಬಿದವರಿಗೆ ದಡ ಮುಟ್ಟಿಸಿದ್ದಾರೆ, ಅವರನ್ನು ನಂಬಿದವರನ್ನು ಯಡಿಯೂರಪ್ಪ ಎಂದಿಗೂ ಕೈ ಬಿಟ್ಟಿಲ್ಲ ಎಂದು ಬಿಎಸ್ವೈ ಗುಣಗಾನ ಮಾಡಿದ ಮಹೇಶ್ ಯಡಿಯೂರಪ್ಪ ಅವರಂತೆ  ಜನರೊಟ್ಟಿಗೆ ಕನೆಕ್ಟ್ ಆಗುವ ಮತ್ತೋರ್ವ ನಾಯಕನನ್ನು ನಾನು ನೋಡಿಲ್ಲ ಎಂದು ಹಾಡಿ ಹೊಗಳಿದರು.

ಮೌನವಾಗಿಯೇ ಇರುವ ಯಡಿಯೂರಪ್ಪ(BS yediyurappa) ಜನಾನುರಾಗಿಯಾಗಿ ಕೆಲಸ ಮಾಡಿದ್ದಾರೆ. ಅಧಿಕಾರ ಇರಲಿ ಇಲ್ಲದಿರಲಿ ಯಡಿಯೂರಪ್ಪ ಅವರ ಜನಪ್ರಿಯತೆ ಕುಗ್ಗಿಲ್ಲ. ಯಡಿಯೂರಪ್ಪ ಅವರದು ಒಂದು ರೀತಿ ಮಾತೃ ಹೃದಯ ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿ ಚಾಮರಾಜನಗರ ಜನರು ಅನ್ನ ತಿನ್ನುವಂತೆ ಮಾಡಿದ್ದಾರೆ ಎಂದು ಹೇಳಿದರು.

ರಾಜಾಹುಲಿಗೆ ಖಾವಿಗಳ ಜೈಕಾರ:  ಇನ್ನು, ವಿರಕ್ತ ಮಠದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹತ್ತಾರು ಮಠಾದೀಶರು ಬಿಎಸ್ವೈ ರನ್ನು ಗುಣಗಾನ ಮಾಡಿ ಅವರ ಅಧಿಕಾರವಧಿಯನ್ನು ಹಾಡಿ ಹೊಗಳಿದರು. ವಾಟಾಳು ಮಠದ ಶ್ರೀ ಮಾತನಾಡಿ, ಯಡಿಯೂರಪ್ಪ ಅವರಿಗೆ ಶಕ್ತಿ ಏನು ಹಿನ್ನಡೆಯಾಗಿಲ್ಲ ಇನ್ನೂ ಎರಡು ಅವಧಿಗೆ ಮುಖ್ಯಮಂತ್ರಿಯಾಗುವ ಶಕ್ತಿ ಅವರಲ್ಲಿದೆ ಎಂದರು‌‌. ಮಠ-ಮಾನ್ಯಗಳಿಗೆ ಹಣ ಕೊಟ್ಡಿದ್ದನ್ನು ಪ್ರಸ್ತಾಪಿಸಿದ ಹಲವಾರು ಮಠಾಧೀಶರು ಯಡಿಯೂರಪ್ಪ(BS yediyurappa) ನಡೆಯಿಂದ ಮಠಗಳು ಉಳಿಯುವ ಪರಿಸ್ಥಿತಿ ನಿರ್ಮಾಣವಾಯಿತು, ಮಠಗಳು ಸಮಾಜದ ಬೆಳವಣಿಗೆಗೆ ಅವಶ್ಯಕತೆ ಅಲ್ಲಾ ಅದು ಅಗತ್ಯತೆ ಎಂಬುದನ್ನು ಸಾರಿದರು ಎಂದು ಖಾಕಿಗಳು ಬಿಎಸ್ವೈ ಪರ ಬ್ಯಾಟ್ ಬೀಸಿದರು. 

ಇದನ್ನೂ ಓದಿ : ‘ಟಿಪ್ಪು ಇಸ್ಲಾಂ ಸಾಮ್ರಾಜ್ಯದ ವಿಸ್ತಾರಕನಾಗಿದ್ದನೇ ಹೊರತು ಭಾರತಕ್ಕಾಗಿ ಬೆವರು ಸುರಿಸಿಲ್ಲ’

ಸುತ್ತೂರು ಶ್ರೀ ಮಾತನಾಡಿ, ಕಾವೇರಿ ನ್ಯಾಯಾಧೀಕರಣದಲ್ಲಿ ಪ್ರಕರಣ ಇದ್ದಾಗಲೇ ಕೆರೆಗೆ ನೀರು ತುಂಬುವ ಯೋಜನೆ ಜಾರಿಗೊಳಿಸಿ ಲಕ್ಷಾಂತರ ರೈತರ ಬಾಳಿಗೆ ಆಶಾಕಿರಣವಾದರು.  ಸಿಎಂ ಆಗುವ ಮುನ್ನ ಇದ್ದ ಜನಪ್ರಿಯತೆ, ಸಿಎಂ ಆದಾಗಿನ ಜನಪ್ರಿಯತೆ ಅಧಿಕಾರದಿಂದ ಇಳಿದ ಬಳಿಕವೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News