ಮೂಡಬಿದಿರೆ : ದೇವರ ಜೊತೆ ದೈವದ ಆರಾಧನೆ ಕರ್ನಾಟಕ ಕರಾವಳಿ (Coastal Karnataka) ಜನರ ಸಂಸ್ಕೃತಿಯ ಒಂದು ಅವಿಭಾಜ್ಯಅಂಗ. ಕರಾವಳಿ ಜನರ ಕೌಟುಂಬಿಕ ಹಿನ್ನೆಲೆಯಲ್ಲಿ ಒಂದು ನಿರ್ದಿಷ್ಟ ದೈವದ ಆರಾಧನೆಯ ಹಿನ್ನೆಲೆ ಇರುತ್ತದೆ. ಈ ಹಿನ್ನೆಲೆಯಲ್ಲಿಯೇ ನೋಡಿದಾಗ ಕರಾವಳಿ (Coastal) ಜನರು ಕೊರಗಜ್ಜ ದೈವವನ್ನು ಅಪಾರ ಶ್ರದ್ಧೆ ಮತ್ತು ಭಕ್ತಿಯಿಂದ ಅರಾಧಿಸುತ್ತಾರೆ. ಕೊರಗಜ್ಜನನ್ನು(Koragajja) ತುಳುನಾಡಿನ (Tulunadu) ಶಕ್ತಿಯೆಂದೇ ಭಾವಿಸಲಾಗುತ್ತದೆ. ಕೊರಗಜ್ಜನಿಗೆ ಹರಕೆ, ನೇಮೋತ್ಸವ, ಕೋಲ ಕರಾವಳಿ ಭಾಗದಲ್ಲಿ ಸದಾ ನಡೆಯುತ್ತಿರುತ್ತದೆ.
ಕೊರಗಜ್ಜ ಆರಾಧನೆ ವೇಳೆ ಮುಸ್ಲಿಂ ಮಹಿಳೆಗೆ ಆವೇಶ :
ಕೊರಗಜ್ಜನ ಕಾರ್ಣಿಕದ ಬಗ್ಗೆ ತುಳುನಾಡಿನಲ್ಲಿ ಅಪಾರ ನಿದರ್ಶನ ಮತ್ತು ಕಥೆಗಳಿವೆ. ಅಜ್ಜನ ರೂಪದಲ್ಲಿರುವ ಕೊರಗಜ್ಜನ ನಂಬಿದರೆ, ಎಲ್ಲಾ ಕಷ್ಟ ದೂರವಾಗುತ್ತದೆ ಎಂದು ಕರಾವಳಿ ಜನ ನಂಬುತ್ತಾರೆ. ಕೊರಗಜ್ಜನ ಹಲವು ದೈವಸ್ಥಾನಗಳು (Temple) ಕರಾವಳಿಯಲ್ಲಿವೆ.
ಇದನ್ನೂ ಓದಿ : Vastu tips : ನಟರಾಜ ಶಿವ, ಮಹಾಕಾಳಿಯ ಮೂರ್ತಿ ಮನೆಯ ಮಂದಿರದಲ್ಲಿ ಏಕಿಡರಬಾರದು..? 2 ಗಣೇಶ ಮೂರ್ತಿ ಇದ್ದರೆ ಏನಾಗುತ್ತದೆ..?
ಇದೀಗ ಮೂಡಬಿದರೆ ಪುರಸಭೆ ವ್ಯಾಪ್ತಿಯ ಗಂಟಲ್ಕಾಟ್ಟೆ ಮನೆಯೊಂದರಲ್ಲಿ ವಿಶೇಷ ಸನ್ನಿವೇಶವೊಂದು ಸುದ್ದಿಯಾಗಿದೆ. ಇಲ್ಲಿನ ಮನೆಯೊಂದರಲ್ಲಿ ಕೊರಗಜ್ಜನ ದೈವಾರಾಧನೆ ಅಂದರೆ ನೇಮೋತ್ಸವ ನಡೆಯುತ್ತಿತ್ತು. ಆಗ ಕೊರಗಜ್ಜನನ್ನು ನಂಬಿ ಅಲ್ಲಿಗೆ ಬಂದಿದ್ದ ಮುಸ್ಲಿಂ ಮಹಿಳೆಗೆ ಆವೇಶ ಬಂದಿದೆ. ಕೊರಗಜ್ಜನ ಆರಾಧನೆಗೆ ಇಬ್ಬರು ಮುಸ್ಲಿಂ (Muslim) ಮಹಿಳೆಯರು ಬಂದಿದ್ದರು. ಅವರಲ್ಲಿ ಒಬ್ಬ ಮಧ್ಯವಯಸ್ಕ ಮಹಿಳೆಗೆ ಆವೇಶ ಬಂದಿದೆ. ಈ ದೃಶ್ಯ ಮೊಬೈಲ್ (Mobile) ವಿಡಿಯೋದಲ್ಲಿ ಸೆರೆಯಾಗಿದೆ ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ವಿದೇಶದಲ್ಲಿರುವ ತಮ್ಮನ ಪ್ರಸ್ತಾಪ ಮಾಡುತ್ತಿರುವ ಮುಸ್ಲಿಂ ಮಹಿಳೆ :
ಆವೇಶ ಬಂದಾಗ ಮುಸ್ಲಿಂ ಮಹಿಳೆ ತುಳುವಿನಲ್ಲಿ ಮಾತನಾಡುತ್ತಿರುವುದು ವಿಡಿಯೋದಲ್ಲಿ ಗೊತ್ತಾಗುತ್ತಿದೆ. ಆದರೆ, ಧ್ವನಿ ಅಸ್ಪಷ್ಟವಾಗಿದೆ. ವಿದೇಶದಲ್ಲಿರುವ ತಮ್ಮನ ವಿಚಾರದಲ್ಲಿ ಮಹಿಳೆ ಮಾತನಾಡುತ್ತಿರುವುದು ಗೊತ್ತಾಗುತ್ತಿದೆ. ಕೊರಗಜ್ಜನ ಕಾರ್ಣಿಕದ (Swamy Koragajja Karnika)ಬಗ್ಗೆ ಜನತೆ ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ : Vastu Tips:ಈ ವಸ್ತುಗಳನ್ನು ಕೂಡಲೇ ಮನೆಯಿಂದ ಹೊರಹಾಕಿ
ಧರ್ಮ ಸಮನ್ವಯತೆ ತುಳುನಾಡಿಗೆ ಹೊಸತಲ್ಲ:
ಏನೇ ರಾಜಕೀಯ ಏರಿಳಿತಗಳಿದ್ದರೂ ಕೂಡಾ ಧರ್ಮ ಸಮನ್ವಯತೆ ಎಂಬುದು ತುಳುನಾಡಿ ರಕ್ತದಲ್ಲಿ ಸೇರಿ ಹೋಗಿದೆ. ಇಲ್ಲಿ ಎಲ್ಲಾ ಧರ್ಮೀಯರೂ ಬೇರೆ ಬೇರೆ ಧರ್ಮಗಳ ದೇವರುಗಳ ಮೊರೆ ಹೋಗುವುದು ಹೊಸತೇನಲ್ಲ. ಇದು ತುಳುನಾಡಿನ ಸಂಸ್ಕೃತಿಯೂ (Culture of Tulunadu) ಹೌದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.