ಬೆಂಗಳೂರು ಜನತೆಯ ಕ್ಷಮೆಯಾಚಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮೇಕೆದಾಟು ಪಾದಯಾತ್ರೆ 2.0 (Mekedatu Padayatre) ಬೆಂಗಳೂರಿಗೆ ಕಾಂಗ್ರೆಸ್ ನಾಯಕರು ಆಗಮಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಹಲವರ ವಿರುದ್ಧ ಎಫ್ ಐಆರ್ (FIR) ದಾಖಲು ಮಾಡಿದ್ದ ಕಾರಣ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

Written by - Prashobh Devanahalli | Edited by - Zee Kannada News Desk | Last Updated : Mar 1, 2022, 01:52 PM IST
  • ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ
  • ಮೇಕೆದಾಟು ಪಾದಯಾತ್ರೆ 2.0.. ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕರು
  • ಬೆಂಗಳೂರು ನಗರದ ಜನತೆಯ ಕ್ಷಮೆ ಕೋರಿದ ಡಿ.ಕೆ.ಶಿವಕುಮಾರ್
ಬೆಂಗಳೂರು ಜನತೆಯ ಕ್ಷಮೆಯಾಚಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್   title=
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು: ಮೇಕೆದಾಟು ಪಾದಯಾತ್ರೆ 2.0 (Mekedatu Padayatre) ಬೆಂಗಳೂರಿಗೆ ಕಾಂಗ್ರೆಸ್ ನಾಯಕರು ಆಗಮಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಹಲವರ ವಿರುದ್ಧ ಎಫ್ ಐಆರ್ (FIR) ದಾಖಲು ಮಾಡಿದ್ದ ಕಾರಣ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ 'ಗೋಲ್ಡನ್​ ಕ್ವೀನ್' ನಟಿ ಅಮೂಲ್ಯ..!

ಕೆಂಗೇರಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ 144 ಸೆಕ್ಷನ್ ಇದ್ರೂ ಮೆರವಣಿಗೆಗೆ ಅವಕಾಶ ನೀಡಿದ್ದೇಕೆ? ಈಶ್ವರಪ್ಪ (Eshwarappa), ಸಂಸದರು ರ್ಯಾಲಿ ಮಾಡ್ತಾರಾ? ಅಲ್ಲಿ ನಡೆದ ಗಲಾಟೆಗೆ ಅವರೇ ಕಾರಣ. ಅವರ ಮೇಲೆ ಯಾಕೆ ಇನ್ನು ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಕಾರ್ಯಕರ್ತ ಹರ್ಷ ಪಾರ್ಥಿವ ಶರೀರದ ಮೆರವಣಿಗೆ ಬಗ್ಗೆ ಮಾತನಾಡಿದ ಡಿಕೆಶಿ, ಈಶ್ವರಪ್ಪ ಸ್ಥಳೀಯ ಶಾಸಕರಾಗಿ ಮನಗೆ ಹೋಗಿ ಸಾಂತ್ವನ ಹೇಳಬೇಕಿತ್ತು. 144 ಸೆಕ್ಷನ್ ವೇಳೆ ಮೆರವಣಿಗೆ ಮಾಡ್ತಾರೇನ್ರೀ? ನಾನು ಕೂಡ ಹರ್ಷ (Harsha Murder) ಮನೆಗೆ ಹೋಗುತ್ತೇನೆ. ಅವನು ನಮ್ಮ ಹುಡುಗ. ನಮ್ಮ ಜಿಲ್ಲಾಧ್ಯಕ್ಷರ ಬಳಿ ಮಾತನಾಡಿದ್ದೇನೆ. ಪಾದಯಾತ್ರೆ ಬಳಿಕ ನಾನು ಹರ್ಷ ನಿವಾಸಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರದ ಜನತೆಯ ಕ್ಷಮೆ ಕೋರುವೆ. ಮುಂದಿನ 50 ವರ್ಷಕ್ಕೆ ಇದು ಅನುಕೂಲವಾಗಲಿದೆ. ನಗರದ ಜನರ ಕ್ಷಮೆ ಕೋರುತ್ತೇನೆ. ನೀವು ಬಂದು ಬೆಂಬಲಿಸಿ ಹೆಜ್ಜೆ ಹಾಕಿ. ಫ್ಯಾಕ್ಟರಿ, ಅಪಾರ್ಟ್ಮೆಂಟ್, ನಾಗರಿಕರು ನಮ್ಮ‌ ಹೋರಾಟವನ್ನು ಬೆಂಬಲಿಸಿದ್ದಾರೆ. ಟೀಕೆಯನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಇದನ್ನು ಕುಡಿದು ಆರಾಮಾಗಿರಿ ಎಂದ ಕಿರಿಕ್​ ಬೆಡಗಿ.. ಮದ್ವೆ ಟ್ರೋಲ್ಸ್​ಗೆ ರಶ್ಮಿಕಾ ಕೊಟ್ರಾ ರಿಯಾಕ್ಷನ್!?

ನಿನ್ನೆ ನೈಸ್ ರೋಡ್ (Nice Road) ಬಳಿ ಮೇಕೆದಾಟು ಪಾದಯಾತ್ರೆ ಬ್ಯಾನರ್ ಗಳನ್ನ ಪಾಲಿಕೆ ತೆರವು ಮಾಡಲು ಯತ್ನ ಮಾಡಿದಕ್ಕೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ (BBMP) ಆಫೀಸ್ ಹೆಸರನ್ನು ಬಿಜೆಪಿ ಎಂದು ಬೋರ್ಡ್ ಬದಲಿಸಿ. ನಮ್ಮ ಕಾರ್ಯಕರ್ತರು ಬ್ಯಾನರ್ ಹಾಕಿದರೆ ಮರು ದಿನ ತೆಗೆಯುತ್ತಾರೆ. ಆಕಾಶದ ಮೇಲೆ ಹಾಕಿರುವ ಬಲೂನನ್ನು ತೆಗೆಯಲು ನಿಮಗೆ ಹಕ್ಕಿಲ್ಲ. ನಿಮಗೊಂದು ನಿಮಯ ರೂಪಿಸಲು ಸಾಧ್ಯವಾಗಿಲ್ಲ ಎಂದು ಹರಿಹಾಯ್ದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News