ಬೆಂಗಳೂರು : ರಾಜ್ಯದ ಜನರಿಗೆ ಮತ್ತೊಂದು ಶಾಕ್ ಸಿಕ್ಕಿದೆ. KSRTC, BMTC ಸಾರಿಗೆ ಬಸ್ ಟಿಕೆಟ್ ದರ ಸದ್ಯದಲ್ಲಿಯೇ ಏರಿಕೆಯಾಗಲಿದೆ ಎನ್ನುವ ಮಾಹಿತಿ ಕೇಳಿ ಬಂದಿದೆ. ಉಪಚುನಾವಣೆ ಬಳಿಕ ಪ್ರಯಾಣಿಕರಿಗೆ ಶಾಕ್ ನೀಡಲು ತಯಾರಿ ನಡೆದಿದೆ.
ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಉಪಚುನಾವಣೆ ಮುಗಿದ ಬಳಿಕ ಬಸ್ ದರ ಏರಿಕೆ ಫಿಕ್ಸ್. ಈಗಾಗಲೇ ಬಸ್ ಪ್ರಯಾಣ ದರ ಶೇ 15 ರಿಂದ 20 ರಷ್ಟು ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಎಸ್ಆರ್ ಟಿಸಿ, ಬಿಎಂಟಿಸಿ ಪ್ರಸ್ತಾವನೆಗೆ ಸರ್ಕಾರ ಅಸ್ತಿ ಎಂದಿದೆ ಎನ್ನಲಾಗಿದೆ.
ಇದನ್ನೂ ಓದಿ : ಟ್ಯಾಂಕರ್ ಮತ್ತು ಕಾರು ನಡುವೆ ಭೀಕರ ಅಪಘಾತ
ಡೀಸೆಲ್, ಬಿಡಿಭಾಗಗಳ ದರ ಹೆಚ್ಚಳಿಂದ ರಾಜ್ಯದ ಸಾರಿಗೆ ನಿಗಮಗಳು ತತ್ತರಿಸಿ ಹೋಗಿವೆ. ಕಳೆದ ನಾಲ್ಕು ವರ್ಷದಿಂದ ಕೆಎಸ್ಆರ್ ಟಿಸಿ ಟಿಕೆಟ್ ದರ ಪರಿಷ್ಕರಣೆ ಆಡಿಲ್ಲ. 2013 ರಿಂದ ಬಿಎಂಟಿಸಿ ಬಸ್ ಪ್ರಯಾಣ ಸಹ ಏರಿಕೆ ಆಗಿಲ್ಲ. ಕಲ್ಯಾಣ ಕರ್ನಾಟಕ ಹಾಗೂ ವಾಯುವ್ಯ ಕರ್ನಾಟಕ ಬಸ್ ಪ್ರಯಾಣ ನಾಲ್ಕು ವರ್ಷದಿಂದ ಪರಿಷ್ಕರಣೆ ಆಗಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಟಿಕೆಟ್ ದರ ಅನಿವಾರ್ಯ ಎಂದು ಸಾರಿಗೆ ನಿಗಮಗಳು ಹೇಳುತ್ತಿವೆ. ಹೀಗಾಗಿ ಚುನಾವಣಾ ಬಳಿಕ ಬಸ್ ದರ ಏರಿಸುವ ಬಗ್ಗೆ ಭರವಸೆಯನ್ನು ಸರ್ಕಾರ ನೀಡಿದೆ ಎನ್ನಲಾಗಿದೆ.
ಈ ಹಿಂದೆ ಕೂಡಾ ಹಲವು ಬಾರಿ ಬಸ್ ದರ ಏರಿಸುವಂತೆ ಸಾರಿಗೆ ನಿಗಮಗಳು ಸರ್ಕಾರವನ್ನು ಮನವಿ ಮಾಡಿತ್ತು. ಆದರೆ, ಪ್ರಯಾಣಿಕರಿಗೆ ಹೊರೆಯಾಗುತ್ತದೇ ಎನ್ನುವ ಕಾರಣದಿಂದ ಸರ್ಕಾರ ಈ ಪ್ರಸ್ತಾವನೆಯನ್ನು ತಳ್ಳಿ ಹಾಕುತ್ತಲೇ ಇತ್ತು. ಇದೀಗ ಡೀಸೆಲ್ ದರ ಹೊರೆಯಾಗುತ್ತಿರುವ ಕಾರಣ ಬಸ್ ಪ್ರಯಾಣ ದರ ಅನಿವಾರ್ಯ ಎಂದು ನಿಗಮಗಳು ಸರ್ಕಾರಕ್ಕೆ ಮನದಟ್ಟು ಮಾಡಿವೆ.
ಇದನ್ನೂ ಓದಿ : ಕಾರವಾರದ ಜನರಲ್ಲಿ ಆತಂಕ ಸೃಷ್ಠಿಸಿದ ರಣಹದ್ದು.!
ಹಾಗಾಗಿ ಉಪಚುನಾವಣೆ ಮುಗಿದ ಬಳಿಕ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಬಸ್ ದರ ಪರಿಷ್ಕರಣೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.